ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಮದ್ಯಪಾನಪಿಡುಗು ಹೆಚ್ಚಾಗುತ್ತಿರುವ ಕಾರಣ ಮದ್ಯಪಾನ ಮಾರಾಟವನ್ನು ಗ್ರಾಮದಲ್ಲಿ ನಿಷೇದಿಸಿ ಎಂದು ಪಂಚಾಯತಿ ಅಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ತಾಲ್ಲೂಕಿನ ಕಂದಿಕೆರೆ ಹೋಬಳಿ ರಾಮನಹಳ್ಳಿ ಗ್ರಾಮದ ಮಹಿಳೆಯರು ಗ್ರಾಮದಲ್ಲಿ ಮನೆಮನೆಗಳಲ್ಲಿ ಅಕ್ರಮವಾಗಿ ಮದ್ಯಮಾರಾಟ ನಡೆಯುತ್ತಿದ್ದು, ಇದರಿಂದ ಮನೆಯ ಗಂಡಸರು ಕುಡಿತದ ಚಟಕ್ಕೆ ಸಿಲುಕಿದ್ದಾರೆ. ಇದರಿಂದ ಕೂಲಿಮಾಡಿ ಬದುಕು ಸಾಗಿಸುತ್ತಿದ್ದ ನಮ್ಮಂತಹ ಹಲವು ಕುಟುಂಬಗಳು ಬೀದಿಪಾಲುಗುವ ಸ್ಥಿತಿ ಬಂದಿದೆ. ಮನೆಯಲ್ಲಿ ನೆಮ್ಮದಿ ಇಲ್ಲದಾಗಿದೆ, ನಾವು ಕೂಲಿನಾಲಿ ಮಾಡಿ ಗಳಿಸಿದ ಹಣವನ್ನು ಕಸಿದು ಕುಡಿತಕ್ಕೆ ಸುರಿಯುತ್ತಿದ್ದಾರೆ. ಕುಡುಕರಾಗುತ್ತಿರುವ ಗಂಡಸರೂ ದುಡಿಯದೆ ಮನೆ, ಆಸ್ತಿಗಳೂಸಹ ಮಾರುವ ಪರಿಸ್ಥಿತಿಗೆ ತರುತ್ತಿದ್ದಾರೆ. ನಮ್ಮ ಗ್ರಾಮದಲ್ಲಿ ಹಲವು ಮನೆಗಳಲ್ಲಿ ಅಕ್ರಮ ಮದ್ಯಮಾರಾಟ ಎಗ್ಗಿಲ್ಲದೆ ನಡೆಯುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು ಹಾಗೂ ಸರ್ಕಾರಿ ಶಾಲಾ ಸಮೀಪದಲ್ಲಿಯೇ ಮದ್ಯ ಮಾರಾಟವಾಗುತ್ತಿದ್ದರು ಕಂಡೂ ಕಾಣದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇದ್ದಾರೆ. ಈ ಕೂಡಲೇ ಅಕ್ರಮ ಮದ್ಯಮಾರಾಟಕ್ಕೆ ತಡೆ ಒಡ್ಡಬೇಕೆಂದು ಗ್ರಾಮ ಪಂಚಾಯಿತಿಯ ಅಭಿವೃದ್ದಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ರಾಮನಹಳ್ಳಿ ಗ್ರಾಮದಲ್ಲಿ ಮದ್ಯಮಾರಾಟವನ್ನೇ ನಿಷೇದಿಸಿ ಎಂದರು.. ಸಂಬAಧ ಪಟ್ಟ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳದಿದ್ದರೆ ನಾವು ತೀವ್ರಹೋರಾಟ ಹಮ್ಮಕೊಳ್ಳಲಾಗುವುದೆಂದರು. ಸದರಿ ಮನವಿಯನ್ನು ಸಲ್ಲಿಸಿದರು.
(Visited 1 times, 1 visits today)