ತುರುವೇಕೆರೆ: ತಾಲೂಕಿನ ಕೋಳಘಟ್ಟದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸುವಂತೆ ಎಸಿಯವರು ಆದೇಶ ನೀಡಿದರು ಕಂದಾಯ ಹಾಗೂ ಗಣಿ ಅದಿಕಾರಿಗಳ ಕಣ್ಣತಪ್ಪಿಸಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗುತ್ತಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಗಂಗಾಧರಯ್ಯ ಆರೋಪಿಸಿದ್ದಾರೆ
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲೂ ಕಿನ ಕೋಳಘಟ್ಟ ಸರ್ವೇ ನಂ ೫೫ರಲ್ಲಿ ೧೬೩ ಎಕರೆ ಭೂಮಿ ಇದ್ದು ಸುಮಾರು ವರ್ಷ ಗಳಿಂದ ರೈತರು ಉಳುಮೆ ಮಾಡಿಕೊಂಡು ಬರುತ್ತಿದ್ದಾರೆ. ಇದರಲ್ಲಿ ಕೆಲವರಿಗೆ ಮಾತ್ರ ಭೂಮಿ ಮಂಜೂರಾಗಿದ್ದು ಇನ್ನು ಕೆಲವರು ಅನುಭವದಲ್ಲಿದ್ದಾರೆ. ಸರ್ವೇ ನಂ ೪೯/೧,೪೯/೨, ರಲ್ಲಿ ಅಕ್ರಮವಾಗಿ ರಾಜುಗೌಡ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ಮತ್ತು ರೈತರಿಂದ ಅಕ್ರಮವಾಗಿ ಜಿ.ಪಿ.ಎ ಮಾಡಿಸಿಕೊಂಡು ಕ್ರಷರ್ ಗಣಿಗಾರಿಕೆ ನೆಡೆಸುತ್ತಿದ್ದು. ಕೆಲವು ಪೋಲೀಸರು ಹಾಗೂ ಅಧಿಕಾರಿಗಳು ಕ್ರಷರ್ ಮಾಲೀಕರ ಜೊತೆ ಕೈಜೋಡಿಸಿ ಸರ್ಕಾರಕ್ಕೆ ಮತ್ತು ರೈತರಿಗೆ ಮೋಸಮಾಡುತಿದ್ದಾರೆ ಎಂದು ಆರೋಪಿಸಿ ೨೦೧೯ ರಲ್ಲಿ ಸರ್ವೇ ನಂ. ೫೫ ರಲ್ಲಿ ಗೋಮಾಳ ಎಂದು ಉಪವಿಭಾಗಾಧಿಕಾರಿಗಳು ವರದಿಯನ್ನು ನೀಡಿದ್ದರೂ ಕೂಡ ಅಲ್ಲಿ ಗಣಿಗಾರಿಕೆ ನಿಲ್ಲಿಸಿಲ್ಲ. ಈ ಭಾಗದ ರೈತರು ಪ್ರಶ್ನೆ ಮಾಡಿದರೆ ದಂಡಿನಶಿವರ ಪೊಲೀಸರನ್ನು ಬಳಸಿಕೊಂಡು ಸುಳ್ಳು ಕೇಸ್ ಹಾಕಲಾಗುತ್ತಿದೆ ಎಂದು ಆರೋಪಿಸಿ ಕಲ್ಲು ಗಣಿಗಾರಿಕೆಯ ವಿರುದ್ಧ ಎಷ್ಟೇ ಪ್ರತಿಭಟನೆ ಮಾಡಿಕೊಂಡು ಬಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಈ ಕೂಡಲೇ ಸಂಬAಧ ಪಟ್ಟ ಅಧಿಕಾರಿಗಳು ಕ್ರಷರ್ ಗಣಿಗಾರಿಕೆಯನ್ನು ನಿಲ್ಲಿಸಬೇಕು. ರಾಜ್ಯ ರೈತ ಸಂಘ ಮತ್ತು ಹಲವಾರು ಸಂಘ ಸಂಸ್ಥೆಗಳೊಡಗೂಡಿ ಪ್ರತಿಭಟನೆ ನೆಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಸಂಘದ ಉಪಾಧ್ಯಕ್ಷ ಉಮೇಶ್ ಕಲ್ಲಬೋರನಹಳ್ಳಿ, ವಿಜಯ್ ಕುಮಾರ್, ರೈತರಾದ ಸಿದ್ದರಾಮಯ್ಯ, ಜಯ ರಾಮಯ್ಯ, ಗೌರಮ್ಮ, ಬಾಗ್ಯಮ್ಮ ,ಶಶಿಧರ್, ಚನ್ನರಾಮಯ್ಯ, ನಾಗರಾಜು ,ಮಹಾಲಿಂಗಯ್ಯ ಸೇರಿದಂತೆ ರೈತ ಮುಖಂಡರು ಇದ್ದರು.
(Visited 1 times, 1 visits today)