
ಕೊರಟಗೆರೆ: ಅಭಿಮಾನಿಗಳ ಆರಾಧ್ಯ ದೈವ ಕರ್ನಾಟಕ ರತ್ನ ಪವರ್ ಸ್ಟಾರ್ ಡಾ. ಪುನೀತ್ ರಾಜಕುಮಾರ್ ೫೦ನೇ ವರ್ಷದ ಜನ್ಮದಿನದ ಪ್ರಯುಕ್ತ ೧೩ ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು ಹಾಗೂ ಸಿಹಿ ವಿತರಣೆ ಮಾಡಿದ ಅಪ್ಪು ಅಭಿಮಾನಿಗಳು..
ಪುನೀತ್ ರಾಜಕುಮಾರ್ ನಡೆದು ಬಂದ ಹಾದಿಯಲ್ಲಿ ಅವರ ಅಭಿಮಾನಿಗಳು ಮುಂದೆ ಸಾಗುತ್ತಿರುವುದು ಬಹಳಷ್ಟು ಸಂತಸದ ವಿಷಯವಾಗಿದೆ.
ತಾಲ್ಲೂಕಿನ ಹೊಳವನಹಳ್ಳಿ ಹೋಬಳಿಯ ಬೈಚಪುರ ಗ್ರಾಮ ಪಂಚಾಯತಿ ಸದಸ್ಯ ವೆಂಕಟರೆಡ್ಡಿ ಹಾಗೂ ಗ್ರಾಮದ ಅಪ್ಪು ಅಪ್ಪಟ ಅಭಿಮಾನಿಗಳಿಂದ ಕರ್ನಾಟಕ ರತ್ನ ಅಭಿಮಾನಿಗಳ ಆರಾಧ್ಯ ದೈವ ಬೆಟ್ಟದ ಹೂವು ಡಾ. ಪುನೀತ್ ರಾಜಕುಮಾರ್ ಜನುಮದಿನದ ಪ್ರತಿ ವರ್ಷವು ಇಂತಹ ಒಂದಲ್ಲ ಒಂದು ರೀತಿಯ ವಿಶೇಷ ಕಾರ್ಯಕ್ರಮಗಳನ್ನ ಆಯೋಜನೆ ಅಪ್ಪು ಅಭಿಮಾನಿಗಳು ಮಾಡುತ್ತಿದ್ದಾರೆ..
ರಾಜ್ಯದ ಎಲ್ಲಾ ಪ್ರತಿ ಹಳ್ಳಿ ಹಳ್ಳಿಗಳಲ್ಲೂ ಅಪ್ಪು ಹುಟ್ಟು ಹಬ್ಬವನ್ನು ಸಡಗರ ಸಂಭ್ರಮದಿAದ ಆಚರಿಸುತ್ತಾರೆ ಅಷ್ಟೇ ಅಲ್ಲ ದೇಶದ ನಾನಾ ಭಾಗಗಳಲ್ಲಿ ಪುನೀತ್ ರಾಜಕುಮಾರ್ ಅವರ ಜನ್ಮದಿನದ ಆಚರಣೆ ಮಾಡುತ್ತಿದ್ದಾರೆ ಇದೇ ತಾನೇ ಒಬ್ಬ ನಟನಿಗೆ ಸಿಗಬೇಕಾದ ಗೌರವ ಎಂದರೆ ತಪ್ಪಾಗಲಾರದು.
ಅಭಿಮಾನಿಗಳ ಆರಾಧ್ಯ ದೈವ ಕರ್ನಾಟಕ ರತ್ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಾರ್ಗದಲ್ಲಿ ನಡೆಯುವುದೇ ನಮ್ಮೆಲ್ಲರ ಪುಣ್ಯ ಅವರು ನಮ್ಮ ಮನಸ್ಸಿನಲ್ಲಿ ಎಂದೆAದಿಗೂ ಅಜರಾಮರ ಅವರ ನೆನಪಿಗಾಗಿ ಪ್ರತಿ ವರ್ಷ ಒಂದಲ್ಲ ಒಂದು ರೀತಿಯ ಸರ್ಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸಕ್ಕೆ ಉಪಯೋಗವಾಗುವ ಕಲಿಕಾ ಸಾಮಗ್ರಿಗಳನ್ನು ಇನ್ನಿತರ ಕೆಲಸಗಳನ್ನು ಸಹಾಯದ ಸಹಕಾರ ನೀಡುತ್ತಾ ಬಂದಿದ್ದೇವೆ ಎಂದು ತಿಳಿಸಿದ ಅಪ್ಪು ಅಪ್ಪಟ ಅಭಿಮಾನಿ ಬೈಚಾಪುರ ಗ್ರಾಮ ಪಂಚಾಯತಿ ಸದಸ್ಯ ವೆಂಕಟರೆಡ್ಡಿ..
ಇದೇ ಸಂದರ್ಭದಲ್ಲಿ ಬೈಚಾಪುರ ಸರ್ಕಾರಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ಗ್ರಾಮದ ಮುಖ್ಯಸ್ಥರು ಮುಖಂಡರು ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರು, ಅಪ್ಪು ಅಭಿಮಾನಿಗಳು ಹಾಜರಿದ್ದರು..