ತುಮಕೂರು: ಪ್ರಭಾವಿಗಳು, ಚಿಕ್ಕನಾಯಕನಹಳ್ಳಿ ಶಾಸಕ ಸಿ.ಬಿ.ಸುರೇಶಬಾಬು ಅವರ ಹಿಂಬಾಲಕರು ಆಗಿರುವ ಗುತ್ತಿಗೆದಾರರಾದ ಚಲುವರಾಜು, ರಾಜಣ್ಣ ಅವರಿಂದ ನನಗೆ ಜೀವ ಭಯವಿದ್ದು, ಸೂಕ್ತ ರಕ್ಷಣೆ ನೀಡಬೇಕು ಎಂದು ಲೋಕೋಪಯೋಗಿ ಇಲಾ ಖೆಯಲ್ಲಿ ನೊಂದಾಯಿತ ಗುತ್ತಿಗೆದಾರ ಜಯಣ್ಣ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರನ್ನು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ನಾನು ಮೂಲತಃ ಚಿಕ್ಕನಾಯಕನಹಳ್ಳಿ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ವ್ಯಕ್ತಿಯಾಗಿದ್ದು, ಲೋಕೋಪಯೋಗಿ ಇಲಾಖೆಯಲ್ಲಿ ನೋಂದಾ ಯಿತ ಗುತ್ತಿಗೆದಾರನಾಗಿದ್ದು, ಈ ಹಿಂದೆ ನಾನು ಹುಳಿಯಾರು ಪಟ್ಟಣ ಪಂಚಾಯಿತಿಯ ಕೆಲ ಅಭಿವೃದ್ದಿ ಕಾಮಗಾರಿಗಳನ್ನು ಗುತ್ತಿಗೆ ಪಡೆದ ಸಂದರ್ಭದಲ್ಲಿ ಮಾನವ ಸಂಪನ್ಮೂಲ ಮತ್ತು ಮಿಷ ನರಿಗಳನ್ನು ಒದಗಿಸುವ ಚುಲುವರಾಜ್ ಅವರಿಗೆ ಕೆಲವು ಕೆಲಸಗಳನ್ನು ಸಬ್ ಕಂಟ್ರಾಕ್ಟ್ ನೀಡಿ ಕೆಲಸ ಮಾಡಿದ್ದು, ಅಗತ್ಯಕ್ಕಿಂತ ಹೆಚ್ಚು ಹಣ ನೀಡಿ ದ್ದೇನು. ಹೆಚ್ಚುವರಿಯಾಗಿ ನೀಡಿದ್ದ ಹಣವನ್ನು ವಾಪಸ್ ನೀಡುವಂತೆ ಹಲವು ಬಾರಿ ಮನವಿ ಮಾಡಿದಾಗಲೂ ಇಲ್ಲಸಲ್ಲದ ಸಬೂಬು ಹೇಳುತಿದ್ದ ಚಲುವರಾಜು, ಮಾರ್ಚ್ ೧೦ರ ಬೆಳಗ್ಗೆ ೧೦:೩೦ರ ಸುಮಾರಿಗೆ ನನ್ನ ಹುಟ್ಟೂರಿಗೆ ಹೋಗಲು ಕಾರಿನಲ್ಲಿ ಹೋಗುತ್ತಿರುವಾಗ ಏಕಾಎಕಿ ನನ್ನನ್ನು ಅಡ್ಡಗಟ್ಟಿ ಕಾರಿನಿಂದ ಹೊರೆಗೆ ಎಳೆದು, ಕೊರಳಪಟ್ಟಿಗೆ ಕೈಹಾಕಿ, ಕುತ್ತಿಗೆ ಹಿಚುಕಿ ಹಲ್ಲೆ ಮಾಡಿದರು. ಈ ವೇಳೆ ದಾರಿ ಹೋಕರು ಹಲ್ಲೆ ಮಾಡುತ್ತಿದ್ದ ಚಲುವರಾಜು ಅವರನ್ನು ತಡೆದರು.
ಕೆಲ ಕಾಲ ಚೇತರಿಸಿಕೊಂಡ ನಾನು ಪೊಲೀಸ್ ಇಲಾಖೆಯ ೧೧೨ ಗೆ ಕರೆ ನೀಡಿ, ಅವರು ಬಂದ ನಂತರ ದೂರು ಸಲ್ಲಿಸಿ, ಕುತ್ತಿಗೆ ಬಾಗ ಹೆಚ್ಚು ನೋಯುತಿದ್ದ ಕಾರಣ ಶಿರಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸೇರಿದ್ದನು. ಪೊಲೀಸರು ನನ್ನಿಂದ ದೂರು ಪಡೆದು ಆರು ದಿನಗಳು ಕಳೆದರು ಹಲ್ಲೆ ಮಾಡಿದ ಚಲುವರಾಜು ಅವರನ್ನು ಬಂಧಿಸಿಲ್ಲ.ಕಾನೂನು ಕ್ರಮ ಜರುಗಿಸಿಲ್ಲ. ನನಗೆ ಮನೆಯಿಂದ ಹೊರಗಲು ಭಯವುಂಟಾಗುತ್ತಿದೆ. ನನಗೆ ಜೀವ ಭಯವಿದ್ದು, ಪೊಲೀಸರು ನನಗೆ ರಕ್ಷಣೆ ಒದಗಿಸಬೇಕು.ಹಾಗೆಯೇ ಹಲ್ಲೆ ಮಾಡಿರುವ ಚಲುವರಾಜು ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಜಿಲ್ಲಾಧಿಕಾರಿಗಳನ್ನು,ಜಿಲ್ಲಾ ಪೊಲೀಸರ ವರಿಷ್ಟಾಧಿಕಾರಿಗಳನ್ನು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಮನವಿ ಮಾಡುತ್ತೇನೆ.ಈಗಾಗಲೇ ಒಂದು ಕೊಲೆ ಕೇಸಿನಲ್ಲಿ ಜಾಮೀನಿನ ಮೇಲಿರುವ ಚಲುವರಾಜು ಏನು ಮಾಡಲು ಹೇಸದ ವ್ಯಕ್ತಿಯಾಗಿದ್ದು,ಈತನಿಂದ ನನಗೆ ಅಪತ್ತಾಗುವ ಸಾಧ್ಯತೆ ಹೆಚ್ಚಿದೆ. ಹಾಗಾಗಿ ರಕ್ಷಣೆ ನೀಡಬೇಕೆಂದು ಈ ಮೂಲಕ ಮನವಿ ಮಾಡುವುದಾಗಿ ಜಯಣ್ಣ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರುಗಳಾದ ವೇಣು, ಹನುಂತ, ರಾಮಮೂರ್ತಿ ಉಪಸ್ಥಿತರಿದ್ದರು.
(Visited 1 times, 1 visits today)