ತುಮಕೂರು: ರಾಜ್ಯದಲ್ಲಿರುವ ಅಮೃತಮಹಲ್ ಕಾವಲ್ ಭೂಮಿಯನ್ನು ಸರಕಾರ ೧೯೫೬ರಲ್ಲಿಯೇ ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಸುಪರ್ದಿಗೆ ನೀಡಿದ್ದರೂ ಸಹ,ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯವರು ಉದ್ದೇಶ ಪೂರ್ವಕವಾಗಿಯೇ ಅಮೃತ ಮಹಲ್ ಕಾವಲು ಭೂಮಿಯನ್ನು ಉಳುಮೆ ಮಾಡಿ ಜೀವನ ನಡೆಸು ತ್ತಿರುವ ಕುಟುಂಬಗಳನ್ನು ೧೯೪೨ರ ಸರಕಾರ ಗೆಜೇಟ್ ತೋರಿಸಿ ಒಕ್ಕೆಬಿಸಲು ಹೊರಟಿವೆ.ಈ ಗೊಂದಲ ಬಗೆಹರಿಸಿದ್ದರೆ,ಶೀಘ್ರವೇ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಹೋರಾಟ ನಡೆಸಲಾಗುವುದು ಎಂದು ನವ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಎಸ್.ಎಸ್.ರಘುನಾಥ್ ತಿಳಿಸಿದ್ದಾರೆ.
ಅರಣ್ಯ ಇಲಾಖೆ ಬೆದರಿಕೆ ಹಿನ್ನೆಲೆಯಲ್ಲಿ ಇಂದು ಖಾಸಗಿ ಹೊಟೇಲ್‌ನಲ್ಲಿ ನವ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಗದೀಶ್ ಅವರ ನೇತೃತ್ವದಲ್ಲಿ ಆಯೋ ಜಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಮೃತ ಮಹಲ್ ಕಾವಲಿಗೆ ಸಂಬAಧಿ ಸಿದಂತೆ ೧೯೪೨ರಲ್ಲಿ ಅಂದಿನ ಮೈಸೂರು ಸಂಸ್ಥಾನ ಅಮೃತ ಮಹಲ್ ಗೋ ತಳಿಗಳ ಸಂರಕ್ಷಣೆಗೆAದು ನೀಡಿ,ಗೆಜೆಟ್ ನೋಟಿಫೀಕೇಷನ್ ಹೊರಡಿಸಿದೆ. ಆದರೆ ರಾಜರ ಅಡಳಿತ ಕೊನೆಗೊಂಡು ಪ್ರಜಾಪ್ರಭುತ್ವ ಆಡಳಿತ ಬಂದ ನಂತರ ೨೪-೧೦-೧೯೫೬ರಂದು ಜಿಓ ನಂ ಎಇ,೮೨೯೫-೩೦೧ ೭-೫೬-೩ ಗೆಜೆಟ್‌ನಲ್ಲಿ ಸದರಿ ಅಮೃತ ಮಹಲ್‌ನ ಎಲ್ಲಾ ಭೂಮಿಯನ್ನು ಅರಣ್ಯ ಇಲಾಖೆಯಿಂದ ಕಂದಾಯ ಇಲಾಖೆಗೆ ಹಸ್ತಾಂತರಿಸಿದೆ.ಇದಕ್ಕೆ ಸಂಬAಧಿಸಿದAತೆ ೧೯೫೯ರಲ್ಲಿಯು ಸರಕಾರ ಗೆಜೆಟ್ ಪ್ರಕಟಿಸಿದೆ.ಇಂದು ಅಮೃತಮಹಲ್ ಕಾವಲ್‌ನಲ್ಲಿ ಸಾವಿರಾರು ಕುಟುಂಬಗಳು ಉಳುಮೆ ಮಾಡಿ, ತೋಟ, ತುಡಿಕೆಗಳನ್ನು ಮಾಡಿ ಜೀವನ ನಡೆಸುತಿದ್ದಾರೆ.ಈಗ ಏಕಾಎಕಿ ಅರಣ್ಯ ಇಲಾಖೆಯವರು ೧೯೪೨ರ ಗಜೆಟಿಯರ್‌ಮುಂದಿಟ್ಟುಕೊAಡು ಹತ್ತಾರು ವರ್ಷಗಳಿಂದ ಇದೇ ಭೂಮಿಯನ್ನು ನಂಬಿ ಜೀವನ ನಡೆಸುತ್ತಿರುವ ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಹೊರಟಿದೆ ಎಂದು ದೂರಿದರು.
ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮುದಿಗೆರೆ ಅಮೃತ ಮಹಲ್ ಕಾವಲ್ ಸರ್ವೆ.ನಂ ೧೨ರಲ್ಲಿ ಸುಮಾರು ೪೦೨೫ ಎಕರೆ ಸರಕಾರಿ ಭೂಮಿ ಇದೆ.ಇದರಲ್ಲಿ ಈಗಾಗಲೇ ೬೦೦ ಕುಟುಂಬಗಳಿಗೆ ೭೦೦ ಎಕರೆಗೂ ಹೆಚ್ಚು ಸಾಗುವಳಿ ಚೀಟಿ ನೀಡಲಾಗಿದೆ.ಇನ್ನೂ ೧೫೦೦ ಕುಟುಂಬಗಳು ಫಾರಂ ನಂಬರ್ ೫೦-೫೩-೫೭ ಅರ್ಜಿ ಸಲ್ಲಿಸಿ, ಖಾಯಂ ಸಾಗುವಳಿ ಚೀಟಿಗೆ ಕಾಯುತ್ತಿದ್ದರೆ.ಇವರಿಗೆ ೨೫೦೦ ಎಕರೆಗೂ ಹೆಚ್ಚು ಭೂಮಿ ಮಂಜೂರಾಗಬೇಕಾಗಿದೆ.ಇAತಹ ಸಂದರ್ಭದಲ್ಲಿ ಸರಕಾರ ಏಕಾಎಕಿ ಸುಮಾರು ೧೪೨ ಎಕರೆ ಭೂಮಿಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ವರ್ಗಾಯಿಸಿದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಭೂಮಿ ನೀಡಿ ೧೦ ವರ್ಷ ಕಳೆದಿದ್ದರೂ ಒಂದು ಕೆಲಸವೂ ನಡೆದಿಲ್ಲ.ಆದರೆ ಉಳುಮೆ ಮಾಡಿ, ಜೀವನ ಕಟ್ಟಿಕೊಂಡಿರುವ ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಎಲ್ಲಾ ರೀತಿಯ ಬಲಗಳನ್ನು ಬಳಸುತ್ತಿದೆ.ಈ ಭೂಮಿ ನಿಮಗೆ ಸೇರಿದಲ್ಲ ಎಂದು ಒಂದು ದಿನವೂ ಕಂದಾಯ ಇಲಾಖೆ ಹೇಳಿಲ್ಲ.ಕಂದಾಯ ಮತ್ತು ಅರಣ್ಯ ಇಲಾಖೆಗಳು ರೈತರ ಜೀವನದಲ್ಲಿ ಆಟವಾಡಲು ಹೊರಟಿವೆ. ಇದನ್ನು ನವ ಕರ್ನಾಟಕ ರೈತ ಸಂಘ ಖಂಡಿಸುತ್ತದೆ ಎಂದು ಎಸ್.ಎಸ್.ರಘುನಾಥ್ ತಿಳಿಸಿದರು.
ಸಭೆಯಲ್ಲಿ ನವ ಕರ್ನಾಟಕ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಬಿ.ಜಗದೀಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಉಪಾಧ್ಯಕ್ಷರಾದ ಹಂಚಿಹಳ್ಳಿ ರಾಮುಸ್ವಾಮಿ, ಹನುಮಂತರೆಡ್ಡಿ, ಗಂಗಾಧರ್.ಜಿ, ರಮೇಶ್, ಜಿಲ್ಲಾ ಉಪಾಧ್ಯಕ್ಷ ರಾಮಣ್ಣ, ಶಿರಾ ತಾಲೂಕು ಅಧ್ಯಕ್ಷ ಮಹಮದ್ ಖಲೀಲ್,ಮುಖಂಡರಾದ ಮಯೂರ, ರಮೇಶ್, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪದ್ಮ, ಚಂದ್ರ ಚಂದ್ರಣ್ಣ, ರಾಜಣ್ಣ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)