ಚಿಕ್ಕನಾಯಕನಹಳ್ಳಿ: ಆಕಸ್ಮಿಕ ಬೆಂಕಿ ಅವಘಡದಿಂದ ೧೬ ಗುಡಿಸ ಲುಗಳು ಸುಟ್ಟ ಸ್ಥಳಕ್ಕೆ ಶಾಸಕ ಸಿ.ಬಿ. ಸುರೇಶ್ ಬಾಬು ಭೇಟಿ ನೀಡಿ ತಾತ್ಕಾಲಿಕ ಆಶ್ರಯಕ್ಕೆ ವ್ಯವಸ್ಥೆ ಮಾಡಲಾಯಿತು.
ತಾಲ್ಲೂಕಿನ ಹಂದನಕೆರೆ ಹೋಬಳಿ ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೈ ಮರ ಕಾಮಲಾಪುರ ರಸ್ತೆಬದಿಯಲ್ಲಿದ್ದ ೧೬ ಗುಡಿಸಲುಗಳು ಆಕಸ್ಮಿಕ ಬೆಂಕಿಗೆ ಸಿಲುಕಿ ಸುಟ್ಟು ಹೋಗಿದ್ದವು. ಸುದ್ದಿ ತಿಳಿದಕತ್ಷಣ ಸ್ಥಳಕ್ಕೆ ಅದಿಕಾರಿಗಳೊಂದಿಗೆ ಆಗಮಿಸಿದ ಶಾಸಕ ಸಿ.ಬಿ. ಸುರೇಶ್‌ಬಾಬು ಸಂತ್ರಸ್ಥರನ್ನು ಸಂತೈಸಿ, ತಾತ್ಕಾಲಿಕ ಪರಿಹಾರ ಚೆಕ್‌ನ್ನು ವಿತರಿಸಿದರು. ನಿರಾಶ್ರಿತ ರಾದವರಿಗೆ ತಾತ್ಕಾಲಿಕವಾಗಿ ತಂಗುವ ವ್ಯವಸ್ಥೆ , ಆಹಾರ ಹಾಗೂ ಉಡಲು ಬಟ್ಟೆಗಳ ವ್ಯವಸ್ಥೆಯನ್ನು ತಕ್ಷಣ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರಾಮ ಚಂದ್ರಯ್ಯಮ ತಾಲ್ಲೂಕು ಪಂಚಾಯಿತಿ ಕಾ ರ್ಯ ನಿರ್ವಹಣಾಧಿಕಾರಿಗಳು ಹಾಗೂ ಗ್ರಾಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಇದ್ದರು.
(Visited 1 times, 1 visits today)