ತುರುವೇಕೆರೆ: ಸಮುದಾಯ ಭವನಗಳು ಗ್ರಾಮದ ಆಸ್ತಿಯಾಗಿದ್ದು ಅದರ ಉತ್ತಮ ನಿರ್ವಹಣೆ ಗ್ರಾಮಸ್ಥರ ಹೊಣೆಗಾರಿಕೆಯಾಗಬೇಕು ಆಗ ಮಾತ್ರ ಗ್ರಾಮದಲ್ಲಿ ಅಭಿವೃದ್ಧಿಯ ಬೆಳಕು ಚೆಲ್ಲಲು ಸಾದ್ಯ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣರವರು ಅಭಿಪ್ರಾಯ ಪಟ್ಟರು.
ತಾಲೂಕಿನ ದಬ್ಬೇಗಟ್ಟ ಹೋಬಳಿಯ ದೇವರ ಮಾವಿನಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಲಕ್ಷ್ಮಿದೇವಿ ಸಮುದಾಯ ಭವನದ ಕಟ್ಟಡ ನಿರ್ಮಾಣಕ್ಕೆ ಧರ್ಮಸ್ಥಳ ದಿಂದ ಮಂಜು ರಾಧ ಅನುದಾನ ಮೊತ್ತ ೨,೫೦,೦೦೦ ರೂಗಳನ್ನು ಸಮಿತಿಯರಿಗೆ ವಿತರಿಸಿ ಮಾತನಾಡಿದ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮದ ಸರ್ವಾಂಗಿನ ಅಭಿವೃದ್ಧಿಗಾಗಿ ಗ್ರಾಮದಲ್ಲಿರುವ ದೇವಸ್ಥಾನಗಳ ಜೀರ್ಣೋದ್ಧಾರ, ಹಾಲು ಕಟ್ಟಡಗಳ ರಚನೆಗೆ ಪ್ರೋತ್ಸಾಹ, ಕುಡಿವ ನೀರು ಘಟಕಗಳ ಅಭಿವೃದ್ಧಿ, ಶಾಲಾ ಕಾಲೇಜುಗಳಿಗೆ ಪ್ರೋತ್ಸಾಹ ಹೀಗೆ ಹಲವಾರು ಸಮಾಜಮುಖಿ ಕಾರ್ಯಗಳಿಗೆ ಅನುದಾನಗಳನ್ನು ನೀಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಇದರ ನಿರ್ವಹಣೆಯ ಜವಾಬ್ದಾರಿಯು ಅಷ್ಟೇ ಮುಖ್ಯ ವಾಗಿರುತ್ತದೆ. ಗ್ರಾಮಸ್ಥರೆಲ್ಲರೂ ಅದರ ಉತ್ತಮ ನಿರ್ವಹಣೆಯ ಹೊಣೆ ಹೊತ್ತರೆ ಮಾತ್ರ ಅದು ಗ್ರಾಮದ ಆಸ್ತಿ ಆಗಬಹುದೇ ಹೊರತು ಇಲ್ಲವಾದರೆ ಅದರ ಸದ್ಬಳಕೆ ಸಾಧ್ಯವಿಲ್ಲ. ಆ
ದುದರಿಂದ ಗ್ರಾಮದ ಆಸ್ತಿಯನ್ನು ಸುರಕ್ಷಿ ತವಾಗಿ ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾ ಬ್ದಾರಿ ಎಂದು ತಿಳಿಸಿದರು.
ಸಭೆಯಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಿವಕುಮಾರ್, ಯೋಜನಾಧಿಕಾರಿ ಅನಿತಾ ಶೆಟ್ಟಿ, ಗ್ರಾಮದ ಹಿರಿಯ ಮುಖಂಡರು ಹಾಗೂ ಗ್ರಾಮಸ್ಥರು, ಸೇವಾ ಪ್ರತಿನಿಧಿ ಅಶ್ವಿನಿ ಉಪಸ್ಥಿತರಿದ್ದರು.
(Visited 1 times, 1 visits today)