ಪಾವಗಡ: ಶುಕ್ರವಾರ ನಗರದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಆವರಣದಲ್ಲಿ ನಿಕ್ಷಯ ಮಿತ್ರ ಯೋಜನೆಯಡಿಯಲ್ಲಿ ಪಾವಗಡ ತಾಲ್ಲೂಕಿನಲ್ಲಿ ಹಾಲಿ ಚಿಕಿತ್ಸೆ ಪಡೆಯುತ್ತಿರುವ ಕ್ಷಯರೋಗಿಗಳಿಗೆ ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ದವಸ ಧಾನ್ಯದ ಕಿಟ್ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಶ್ರೀ ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ರವರ ಒಂದು ಪ್ರೋಟೀನ್ ಪೌಡರ್ ವಿತರಣೆ ಮಾಡಲಾಯಿತು. ದಿನಾಂಕ: ೭-೧೨-೨೦೨೪ ರಿಂದ ೨೪-೩-೨೦೨೫ರ ವಿಶ್ವ ಕ್ಷಯರೋಗ ದಿನಾಚರಣೆವರೆಗೆ “ನೂರು ದಿನದ ಕ್ಷಯರೋಗ ಜನ ಜಾಗೃತಿ ಹಾಗೂ ತಪಾಸಣೆ ಯೋಜನೆ” ಕಾರ್ಯಕ್ರಮವನ್ನು ಈಗಾಗಲೇ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪಾವಗಡ ತಾಲ್ಲೂಕಿನ ಕ್ಷಯರೋಗ ನಿಯಂತ್ರಣ ಘಟಕದ ಕೇಂದ್ರ ಸ್ಥಾನವಾದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಸದರಿ ಕಾರ್ಯ ಕ್ರಮವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಸ್ವಾಮಿ ಜಪಾನಂದಜೀ ರವರು ವಹಿಸಿದ್ದು, ಮುಖ್ಯ ಅತಿಥಿಗಳಾಗಿ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎ.ಎಸ್.ಎಲ್.ಬಾಬು ರವರು ಆಗಮಿಸಿದ್ದರು. ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳು ಹಾಗೂ ಕ್ಷಯರೋಗ ತಜ್ಞರಾದ ಹಿರಿಯ ವೈದ್ಯೆ ಡಾ.ಚಂದ್ರಕಲಾ, ಆಡಳಿತಾಧಿಕಾರಿಗಳಾದ ಜಯಶ್ರೀ ಕೃಷ್ಣರಾವ್, ಕ್ಷಯರೋಗ ಯೋಜನೆಯ ಮೇಲ್ವಿಚಾರಕಾರದ ಜಿ.ಎಸ್.ತಿಪ್ಪೇಸ್ವಾಮಿ, ಎನ್.ಅಶ್ವತ್ಥನಾರಾಯಣ, ಪವನ್ ಕುಮಾರ್ ಹಾಗೂ ತುಮಕೂರು ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಶ್ರೀ ಶ್ರೀನಿವಾಸ್ ರವರು ಉಪಸ್ಥಿತರಿದ್ದರು. ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ಸ್ವಾಮೀಜಿಯವರು, ಕಳೆದ ಮೂವತ್ತು ವರ್ಷಗಳಿಂದ ನಿರಂತರವಾಗಿ ಕ್ಷಯರೋಗ ನಿವಾರಣಾ ಯೋಜನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ನಿಯೋ ಜಿಸಲ್ಪಟ್ಟಿದ್ದು ಈವರೆವಿಗೆ ೧೫೧೧೬ ಕ್ಷಯರೋಗಿಗಳಿಗೆ ಸಂಪೂರ್ಣ ಉಚಿತವಾಗಿ ಔಷಧೋಪಚಾರ ಹಾಗೂ ಇತರ ಸೌಲಭ್ಯಗಳನ್ನು ನೀಡುತ್ತಾ ಬರುತ್ತಿರು ವುದು ದೇಶದಲ್ಲಿಯೇ ಗ್ರಾಮಾಂತರ ವಿಭಾಗದಲ್ಲಿ ಒಂದು ದಾಖಲೆ ಎನ್ನಬಹುದು.
ಇಡೀ ರಾಷ್ಟ್ರದಲ್ಲಿಯೇ ಪ್ರಪ್ರಥಮವಾಗಿ ಕ್ಷಯರೋ ಗಿಗಳಿಗೆ ಆಹಾರ ಮತ್ತು ಧಾನ್ಯ ವಿತರಣಾ ಯೋಜನೆ ಯನ್ನು ಡೇಮಿಯನ್ ಫೌಂಡೇಷನ್ ಜೊತೆಯಲ್ಲಿ ಆರಂಭಿಸಿದ ಪ್ರಪ್ರಥಮ ಸಂಸ್ಥೆ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ. ಈ ಯೋಜನೆಯ ಫಲಿತಾಂಶವನ್ನು ಕಂಡ ಕೇಂದ್ರ ಹಾಗೂ ರಾಜ್ಯ ಸರ್ಕಾರ ಪೂಜ್ಯ ಸ್ವಾಮೀಜಿಯವರು ಆರಂಭಿಸಿದ ಈ ಯೋಜನೆಯನ್ನು ಇಡೀ ರಾಷ್ಟ್ರದ ಲ್ಲಿಯೇ ಪರಿಚಯಿಸಿದನ್ನು ಪೂಜ್ಯ ಸ್ವಾಮೀಜಿಯ ವರು ವಿವರಿಸಿದರು.
ಇದೇ ಸಂದರ್ಭದಲ್ಲಿ ನೂರಾರು ಕ್ಷಯ ರೋಗಿಗಳು, ಕುಷ್ಠ ರೋಗಿಗಳು, ಹೆಚ್.ಐ.ವಿ./ಏಡ್ಸ್ ಹಾಗೂ ಅಂಗವಿಕಲರುಗಳಿಗೆ ಪ್ರತೀ ವಾರ ದವಸ ಧಾನ್ಯವನ್ನು ಇಂದಿಗೂ ನೀಡುತ್ತಿರುವುದು ಈ ಸಂಸ್ಥೆಯ ಮತ್ತೊಂದು ವಿಶೇಷತೆ ಎಂದು ಬಣ್ಣಿಸಿದರು. ಹಾಗೆಯೇ ಈ ರೋಗಕ್ಕೆ ತುತ್ತಾದವರು ಭಯಪಡದೆ ರೋಗದ ಎಲ್ಲ ವಿಚಾರಗಳನ್ನು ಅರಿತು ಅದೇ ತೆರನಾಗಿ ವ್ಯವಹರಿಸಿದ್ದಲ್ಲಿ ದೇಶವ ನ್ನು ಕ್ಷಯರೋಗ ಮುಕ್ತವನ್ನಾಗಿಸುವ ದಿನಗಳು ಹತ್ತಿರವಾಗುತ್ತಿವೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅತ್ಯಮೂಲ್ಯ ಸಹಕಾರ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರೋತ್ಸಾಹವೇ ತಮ್ಮ ಈ ಯೋಜನೆಗೆ ಸಹಕಾರಿ ಎಂದು ತಿಳಿಸಿ ದರು. ತದನಂತರ ಮಾತನಾಡಿದ ಪಾವಗಡ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ಎಸ್.ಎಸ್.ಎಲ್.ಬಾಬು ರವರು ಈ ರೋಗದ ಚಿನ್ಹೆಗ ಳನ್ನು ತಿಳಿದಾಕ್ಷಣ ಆಸ್ಪತ್ರೆಗೆ ಧಾವಿಸುವಂತೆ ಸೂಚಿಸಿದರು.
ಸರ್ಕಾರದ ವತಿಯಿಂದ ಎಲ್ಲ ಔಷಧೋಪ ಚಾರಗಳು ಉಚಿತವಾಗಿ ದೊರೆಯುತ್ತಿರುವುದನ್ನು ತಿಳಿಸಿದರು. ಭಯಪಡದೆ ಈ ರೋಗವನ್ನು ಮೆಟ್ಟಿ ನಿಲ್ಲುವಂತಹ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ಪೂಜ್ಯ ಸ್ವಾಮಿ ಜಪಾನಂದಜೀ ಮಹಾರಾಜ್ ರವರು ಮೂರು ದಶಕಗಳಿಂದಲೂ ಮಿಗಿಲಾಗಿ ಕ್ಷಯರೋಗ ನಿಯಂತ್ರಣ ಯೋಜನೆಗೆ ತಮ್ಮನ್ನೇ ತಾವು ತೊಡಗಿಸಿಕೊಂಡಿರುವುದು ನಿಜಕ್ಕೂ ಈ ಭಾಗದ ಜನರು, ತುಮಕೂರು ಜಿಲ್ಲೆ ಮತ್ತು ರಾಜ್ಯ ಮೆಚ್ಚುವಂತಹ ಅದ್ಭುತ ಕೆಲಸವನ್ನು ನಡೆಸುತ್ತಿರುವುದನ್ನು ಮುಕ್ತ ಕಂಠದಿAದ ಶ್ಲಾಘಿಸಿದರು. ತದನಂತರ ಮಾತನಾಡಿದ ಸಂಸ್ಥೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ ರವರು ಈ ಪ್ರೋಟೀನ್‍ಯುಕ್ತ ಧಾನ್ಯಗಳು, ತೊಗರಿಬೇಳೆ, ಕಡಲೆಬೀಜ, ಕಡಲೆಕಾಯಿ ಎಣ್ಣೆ, ಬೆಲ್ಲ, ಹೆಸರು ಬೇಳೆ, ಗೋಧಿ ಹಿಟ್ಟು ಹಾಗೂ ಸಾಯಿಶ್ಯೂರ್ ಪ್ರೋಟೀನ್ ಪೌಡರ್ ಮುಂತಾದವುಗಳನ್ನು ತಾ ವೇ ಸ್ವೀಕರಿಸಿ ಸದೃಢರಾಗಿ ಈ ರೋಗವ್ನನ್ನು ದೂರ ಮಾಡುವಂತೆ ಪ್ರಯತ್ನಿಸಬೇಕೆಂದು ಕರೆಯಿ ತ್ತರು.
ಇದೇ ಸಂದರ್ಭದಲ್ಲಿ ಬಂದ ನೂರಕ್ಕೂ ಮಿಗಿಲಾದ ಕ್ಷಯ ರೋಗಿಗಳಿಗೆ ಭೋಜನವನ್ನು ಏರ್ಪಡಿಸಿದ್ದು ಎಲ್ಲರೂ ಅತ್ಯಂತ ಸಂತೋಷದಿAದ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ನಡೆಸುತ್ತಿರುವ ಸೇವಾ ಕಾರ್ಯಕ್ಕೆ ತಮ್ಮ ಮೆಚ್ಚುಗೆಯನ್ನು ಸೂಚಿಸಿ ಪೂಜ್ಯ ಸ್ವಾಮೀಜಿಯವರಿಗೆ ಗೌರವವನ್ನು ಸಲ್ಲಿಸಿದರು.
(Visited 1 times, 1 visits today)