
algolist: 0;
multi-frame: 1;
brp_mask:0;
brp_del_th:null;
brp_del_sen:null;
delta:null;
module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: weather?null, icon:null, weatherInfo:100;temperature: 47;
ಪಾವಗಡ: ಪುರಸಭಾ ಚುನಾವಣೆ ಸಮೀಪಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ಪ್ರತೀ ವಾರ್ಡ್ ನಲ್ಲಿ ಕೆಲಸ ಮಾಡುವ ಹಾಗೂ ಸೇವಾ ಮನೋಭಾವ ಹೊಂದಿರುವ ಅರ್ಹರಿಗೆ ಮಾತ್ರ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗುವುದು ಎಂದು ಮಾಜಿ ಸಚಿವರಾದ ವೆಂಕಟರಮಣಪ್ಪ ನವರು ತಿಳಿಸಿದರು
ಪುರಸಭಾ ಕಾರ್ಯಾಲಯದಲ್ಲಿ ನೂತನ ಸಭಾಂಗಣವನ್ನು ಉದ್ಘಾಟನೆ ಮಾಡಿ ಮಾತನಾಡಿದ ಅವರು ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಗೆಲ್ಲಿಸಿದ್ದಾರೆ ಅವರ ಋಣ ತೀರಿಸುವ ಸಲುವಾಗಿ ಕಾರ್ಯಪ್ರವೃತ್ತರಾಗಬೇಕಾಗಿದೆ, ಪ್ರತೀ ವಾರ್ಡ್ ಗೆ ಬೇಟಿ ನೀಡಿ ಜನರ ಸಮಸ್ಯೆ ಗಳನ್ನು ಸ್ಪಂದಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಾಗಿದೆ, ಜನಾಭಿಪ್ರಾಯ ಪಡೆದು ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು
ನಂತರ ಮಾತನಾಡಿದ ತುಮಕೂರು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರು ಹಾಗೂ ಶಾಸಕರಾದ ಹೆಚ್.ವಿ.ವೆಂಕಟೇಶ್ ರವರು ಪಾವಗಡ ಪಟ್ಟಣ ಅತ್ಯಂತ ವೇಗವಾಗಿ ಬೆಳೆಯುತ್ತಿದೆ, ಈ ಹಿನ್ನೆಲೆಯಲ್ಲಿ ಪುರಸಭಾ ವ್ಯಾಪ್ತಿಯನ್ನು ಹೆಚ್ಚಿಸಿ ನಗರಸಭೆಯನ್ನಾಗಿ ಮಾಡಲು ಸಂಬAಧಪಟ್ಟ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ, ಹೊರವಲಯದಲ್ಲಿರುವ ವರ್ತುಲ ರಸ್ತೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ, ಐಟಿಐ ಕಾಲೇಜಿಗೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ, ಡಿಪ್ಲೋಮಾ ಕೋರ್ಸ್ ಗೆ ಮನವಿ ಸಲ್ಲಿಸಲಾಗಿದೆ, ಇಂತಹ ಸಭಾಂಗಣ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಾಗಲೀ ಜಿಲ್ಲಾ ಪಂಚಾಯಿತಿಯಲ್ಲಾಗಲಿ ಇಲ್ಲ, ಅಂತಹ ಸಭಾಂಗಣ ನಿರ್ಮಿಸಲು ಸಹಕರಿಸಿದ ಅದ್ಯಕ್ಷ ಸದಸ್ಯ ಮತ್ತು ಅಧಿಕಾರಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು ಪಟ್ಟಣದಲ್ಲಿ ಅಂಗಡಿ ಮಳಿಗೆಗಳನ್ನು ಬಹಿರಂಗ ಹರಾಜು ಮಾಡಿರುವುದರಿಂದ ಪುರಸಭೆಗೆ ಹೆಚ್ಚಿನ ಆದಾಯ ಬಂದಿದೆ, ಮುಂದಿನ ದಿನಗಳಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಅಬಿವೃದ್ದಿಗೆ ಶ್ರಮಿಸುತ್ತೇನೆ ಎಂದು ತಿಳಿಸಿದರು
ಪುರಸಭಾ ಅಧ್ಯಕ್ಷರಾದ ಪಿ.ಹೆಚ್.ರಾಜೇಶ್ ರವರು ಮಾತನಾಡಿ ನೂತನವಾಗಿ ಸಭಾಂಗಣ ನಿರ್ಮಿಸುವ ಬಗ್ಗೆ ಸದಸ್ಯರೊಂದಿಗೆ ಚರ್ಚೆ ನಡೆ ಸಿದಾಗ ಎಲ್ಲಾ ಸದಸ್ಯರು ಸಂತೋಷದಿAದ ಒಪ್ಪಿಕೊಂಡು ಸಹಕಾರ ನೀಡಿದರು, ಮಾಜಿ ಸಚಿವರಾದ ವೆಂಕಟರಮಣಪ್ಪ ಮತ್ತು ಶಾಸಕರಾದ ಹೆಚ್.ವಿ.ವೆಂಕಟೇಶ್ ರವರ ಸಹಕಾರದೊಂದಿಗೆ ಪುರಸಭೆಯನ್ನು ಅಬಿವೃದ್ಧಿ ಪಡಿಸಲಾಗುವುದು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಗೀತಾ ಹನುಮಂತರಾಯಪ್ಪ, ಜಾಫರ್ ಷರೀಫ್, ಷಂಷು ದ್ದೀನ್, ಸದಸ್ಯ ರಾದ ರವಿ, ಸುದೇಶ್ ಬಾಬು ಇಮ್ರಾನ್, ವೆಂಕಟರಮಣಪ್ಪ, ಸಿ.ಎನ್.ರವಿ, ವಿಜಯ್ ಕುಮಾರ್, ನಾಗಭೂಷಣರೆಡ್ಡಿ ಮಣಿ, ರಾಮಾಂಜಿನಪ್ಪ, ವೇಲು ರಾಜು, ಉಪಸ್ಥಿತರಿದ್ದರು