ಹುಳಿಯಾರು: ಮುಂಬರುವ ರಂಜಾನ್ ಹಾಗೂ ಯುಗಾದಿ ಹಬ್ಬದ ನಿಮಿತ್ತ ಪಟ್ಟಣದ ಪೋಲಿಸ್ ಠಾಣೆಯಲ್ಲಿ ಪಿಎಸೈ ಧರ್ಮಾಂಜಿ ಹಾಗೂ ಪಿಎಸ್‌ಐ ಜಗದೀಶ್ ರವರು ಸಮುದಾಯಗಳ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳ ಸಾರ್ವಜನಿಕರ ಶಾಂತಿ ಸಭೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪಿಎಸೈ ಧರ್ಮಾಂಜಿ ಹಬ್ಬದ ಆಚರಣೆಗಳಲ್ಲಿ ಯಾರೊಬ್ಬರಿಗೂ ತೊಂದರೆಯಾಗದAತೆ ಜಾಗ್ರತೆ ವಹಿಸಬೇಕು, ರಂಜಾನ್ ಹಬ್ಬದ ಅಚರಣೆಗೆ ಎಲ್ಲರೂ ಸಹಕರಿಸಿ ಸೌಹಾರ್ದಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು.ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸಬೇಕು. ಎಲ್ಲರೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ಸಂಚಾರಕ್ಕೆ ಅಡಚಣೆ ಯಾಗದಂತೆ ನಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಹುಳಿಯಾರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಬ್ಬದ ಸಮಯದಲ್ಲಿ ಹಿಂದೂ ಮುಸ್ಲಿಂ ಬಾಂಧವರಲ್ಲಿ ಯಾವುದೇ ಅಹಿತಕರ ಘಟನೆ ನಡೆಯದೆ ಪರಸ್ಪರ ಸೌಹಾರ್ದತೆಯಿಂದ ಆಚರಣೆ ಮಾಡುತ್ತ ಬಂದಿರುವುದು ಸಂತಸದ ವಿಷಯವಾಗಿದೆ ಎಂದರು.ಹಬ್ಬಗಳಲ್ಲಿ ಮೆರವಣಿಗೆ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕೈಗೊಳ್ಳುವಾಗ ಠಾಣೆಯ ಗಮನಕ್ಕೆ ತರಬೇಕು, ಎರಡು ಸಮಾಜದವರು ಶಾಂತಿಯುತವಾಗಿ ಹಬ್ಬವನ್ನು ಯಾವುದೇ ಗಲಭೆಗಳಿಗೆ ಅವಕಾಶವಾಗದಂತೆ ಆಚರಿಸಿಬೇಕು ಎಂದು ಸೂಕ್ತ ಸಲಹೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಾಮಿಯ ಮಸೀದಿ ಮುತುವಲ್ಲಿ ಆರಿಫ್ ಉಲ್ಲಾಖಾನ್, ಮದೀನಾ ಮಸೀದಿಯ ಸಾಧತ್, ಕೆಎಸ್ ಪಾಳ್ಯದ ಅಮಾನುಲ್ಲಾ, ವೈಎಸ್ ಪಾಳ್ಯದ ರಫೀಕ್, ದಬ್ಬಗುಂಟೆ ರಷೀದ್ ,ದಸೂಡಿ ಅಬ್ದುಲ್ ಗಫರ್, ಗಾಣದಾಳು ಜಹೀರ್, ಬಳ್ಳೆಕಟ್ಟೆಯ ಶಫೀಕ್ ಅಹಮದ್ ಖಾನ್, ಕಂಪನಹಳ್ಳಿ ಭಾಷಾ ಸಾಬ್, ಕಿರಣ್ ಕುಮಾರ್, ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷ ದಯಾನಂದ್, ಆಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ಬಡಗೀ ರಾಮಣ್ಣ, ಕಾರ್ಯದರ್ಶಿ ಧನಂಜಯ ಮೂರ್ತಿ, ಗಣಪತಿ ದೇವಸ್ಥಾನದ ಕಾರ್ಯದರ್ಶಿ ಹೂವಿನ ಬಸವರಾಜು ಹುಳಿಯಾರಿನ ಹಿಂದೂ ಹಾಗೂ ಮುಸ್ಲಿಂ ಸಮಾಜದ ವಿವಿಧ ಸಂಘಸAಸ್ಥೆಗಳ ಮುಖಂಡರುಗಳು ಉಪಸ್ಥಿತರಿದ್ದರು.
(Visited 1 times, 1 visits today)