ತುಮಕೂರು: ಪ್ರಾಚೀನ ಭಾರತದಲ್ಲಿ ಯಾವುದನ್ನು ಅಂದಿನ ಸನಾತನವಾದ ಶ್ರೇಣಿಕೃತ ಧರ್ಮ ಧಿಕ್ಕರಿಸಿ ಬುದ್ಧನ ಮಾರ್ಗದರ್ಶನದಲ್ಲಿ ಧಮ್ಮ ಅವರ ವಿಕಾಸ ಎಲ್ಲರನ್ನು ಒಳಗೊಳ್ಳುವ ತಾತ್ವಿಕತೆಯ ಹೊಸ ಕ್ರಾಂತಿಗೆ ಮುನ್ನುಡಿ ಬರೆಯಿತು, ಇದೆ ಪ್ರತಿಕ್ರಾಂತಿಯಾಯಿತು. ಇದನ್ನು ೬ನೇ ಶತಮಾನದಲ್ಲಿ ಪುನಃ ಸನಾತನ ಧರ್ಮದ ಶಂಕರಚಾರ್ಯ ಮನುಧರ್ಮವನ್ನು ಅಸ್ತಿತ್ವಕ್ಕೆ ತಂದು ಬೌದ್ಧ ಧರ್ಮವನ್ನು ನಾಶ ಮಾಡಿದರು, ಈ ಇತಿಹಾಸವನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಮನಗಂಡು ಸಂವಿಧಾನದ ಮೂಲಕ ಸ್ವಾತಂತ್ರ‍್ಯ, ಸಮಾನತೆ, ಸೋದರತೆ, ಬ್ರಾತೃತ್ವದ ಮೂಲಕ ಕ್ರಾಂತಿ ಮಾಡಿ ಶ್ರೇಣಿಕೃತ ಜಾತಿ ವ್ಯವವಸ್ಥೆಯನ್ನು ನಾಶ ಮಾಡಲು ಮನು ಸಂವಿಧಾನವನ್ನು ಸುಟ್ಟರು. ಇದರಿಂದ ವ್ಯವಸ್ಥೆ ಬದಲಾಗುತ್ತಿಲ್ಲ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕರಾದ ಎ.ನರಸಿಂಹಮೂರ್ತಿ ಪ್ರತಿಪಾಧಿಸಿದ್ದರು, ಅವರು ತುಮಕೂರು ಜಿಲ್ಲಾ ಕೊಳಗೇರಿ ನಿವಾ ಸಿಗಳ ಸಮಿತಿ, ಮಾರಿಯಮ್ಮ ಯುವಕರ ಅಂಘ(ರಿ) ಹಾಗೂ ಯುವ ಭೀಮ ಪಡೆಯಿಂದ ಮಂಡಿಪೇಟೆ ಮಾರಿಯಮ್ಮ ನಗರದಲ್ಲಿ ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ರವರು ೧೩೪ನೇ ಜಯಂತಿ ಮತ್ತು ಬಾಬು ಜಗಜೀವನರಾಂ ರವರ ೧೧೮ನೇ ಜಯಂತಿಯನ್ನು ಉದ್ಘಾಟಿಸಿ ಮಾತ ನಾಡಿದರು.
ಅಂಬೇಡ್ಕರ್ ಬಯಸಿದ ಸಂವಿಧಾನದೆಡೆಗೆ ಭವಿಷ್ಯದಲ್ಲಿ ವಂಚಿತ ಸಮುದಾಯಗಳು ಮತ್ತು ಧ್ವನಿಯಿಲ್ಲದ ಧ್ವನಿಗಳು ನಡೆಯಬೇಕು ಸಂವಿಧಾನ ರಚನಾ ಸಭೆಯಲ್ಲಿ ಅಂಬೇಡ್ಕರ್ ಎಷ್ಟು ಕಷ್ಟಪಟ್ಟಿದ್ದಾರೆಂದು ಸಂವಿಧಾನ ರಚನಾ ಸಭೆಯ ಚರ್ಚೆಗಳಿಂದ ತಿಳಿಯಬಹುದಾಗಿದೆ. ಕ್ರಾಂತಿಕಾರಿ ಸಂವಿಧಾನ ಇಂದು ಫ್ಯಾಸಿಸಂ ಕೈಗೆ ಸಿಕ್ಕಿ ಸನಾತನವಾದವನ್ನು ಪುನರ್ ಪ್ರತಿಷ್ಠಾಪನೆ ಮಾಡಲು ಒಂದಲ್ಲೊAದು ರೀತಿಯಲ್ಲಿ ಪ್ರಯತ್ನ ವಾಗುತ್ತದೆ, ಈ ವಿಷಮಕಾರಿ ವಾತಾವರಣವನ್ನು ಸಮರ್ಥವಾಗಿ ಎದುರಿಸಬೇಕಾಗಿದೆ. ಮನುಸ್ಮೃ ತಿಗಳ ಆಧಾರದ ಮೇಲೆ ಭಾರತೀಯ ಸಮಾಜ ನಿರ್ಮಾಣವಾಗಿ ಮಹಿಳೆಯರಿಗೆ ಗೌರವ ನೀಡದೇ ಜಾತಿ ಶ್ರೇಣಿಕರಣವನ್ನು ಸೃಷ್ಠಿಸಿ ಅಧಿಕಾರಯುತ ಷರತ್ತು ಬದ್ಧ ನಿಯಂತ್ರಣಗಳನ್ನು ಹೇರಿ ಸ್ವಾತಂತ್ರ‍್ಯ ಮತ್ತು ಸಮಾನತೆಯನ್ನು ಕಿತ್ತುಕೊಳ್ಳಲಾಗಿತ್ತು. ಇಂತಹ ಗೌರತೆ ಬ್ರಿಟಿಷ್ ಆಳ್ವಿಕೆಯಲ್ಲಿ ಸ್ವಲ್ಪಮಟ್ಟಿಗೆ ಸಡಿಲವಾಯಿತು. ಸ್ವಾತಂತ್ರ ನಂತರ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಕೈಗೆ ಸಿಕ್ಕ ಅವಕಾಶದಿಂದ ಎಲ್ಲಾ ಜಾತಿ ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ಹೆಣ್ಣು ಮಕ್ಕಳಿಗೆ ಕನಿಷ್ಠ ನೆಮ್ಮದಿ ಬದುಕಿನ ಅಡಿಪಾಯ ಹಾಕಿ ಮಾನ ವೀಯ ಮೌಲ್ಯಗಳು ಮತ್ತು ನಾಗರೀಕ ಹಕ್ಕು ಗಳನ್ನು ಸಂವಿಧಾನದಲ್ಲಿ ಖಾತ್ರಿ ಮಾಡುವ ಮೂಲಕ ಸನಾತನವಾದಿಗಳ ಕ್ರಾಂತಿಗೆ ಪ್ರತಿಕ್ರಾಂತಿ ಮಾಡಿ ಆಧುನಿಕ ಭಾರತದ ನಾಗರೀಕ ಸಮಾಜವನ್ನು ಕಟ್ಟಲು ಅಡಿಪಾಯ ಹಾಕಿದರು ಹಾಗಾಗಿ ಅಂಬೇಡ್ಕರ್ ನಡೆಸಿದ ಪ್ರತಿಕ್ರಾಂತಿಯ ಕಡೆಗೆ ನಾವು ಸಿದ್ದರಾಗಬೇಕೆಂದರು.
ಕಾಯಕ್ರಮದ ಸ್ಲಂ ಸಮಿತಿ ಕಾರ್ಯದರ್ಶಿ ಅರುಣ್, ಪದಾಧಿಕಾರಿಗಳಾದ ಶಂಕರಯ್ಯ, ಜಾಬೀರ್ ಖಾನ್, ಕೃಷ್ಣಮೂರ್ತಿ, ಮುಬಾರಕ್, ಮೋಹನ್ ಮಾರಿಯಮ್ಮ ಯುವಕರ ಸಂಘದ ಕಣ್ಣನ್, ಕೃಷ್ಣ, ಗೋವಿಂದಸ್ವಾಮಿ, ಮಾರಿ, ರಾಜ, ಗೋಪಾಲ್, ದತ್ತು, ಅರ್ಜುನ್, ರಾಸಯ್ಯ, ರಾಹುಲ್, ಕುಮಾರ್, ಬಾಬು, ರಜಿನಿ, ಅಜಿತ್, ಅರುಣ, ವೆಂಕಟೇಶ್, ಭಾಗವಹಿಸಿದ್ದರು.
(Visited 1 times, 1 visits today)