ತುರುವೇಕೆರೆ: ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಗ್ರಾಮದೇವತೆ ಶ್ರೀ ಉಡುಸಲಮ್ಮ ದೇವಿ ರಥೋತ್ಸವದ ಅಂಗವಾಗಿ ಏ.೨೧ರಂದು ಸೋಮವಾರ ಬೆಳಿಗ್ಗೆ ಭೀಮೋತ್ಸವ ಕೃಪಾಪೋಷಿತ ನಾಟಕ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಿಎಸ್‌ಎಸ್ ಸಂಚಾಲಕ ಬಾಣಸಂದ್ರ ಕೃಷ್ಣಸ್ವಾಮಿ ತಿಳಿಸಿದರು.
ಭೀಮೋತ್ಸವ ಆಚರಣಾ ಸಮಿತಿ ಕಛೇರಿಯಲ್ಲ್ಲಿ ನಾಟಕ ಕರಪತ್ರ ವಿತರಿಸಿ ಮಾತನಾಡಿದ ಅವರು ೨೧ರಂದು ಬೆಳಿಗ್ಗೆ ೯:೩೦ಕ್ಕೆ ನಾಟಕ ಪ್ರಾರಂಬಗೊಳ್ಳಲಿದೆ. ಕಾರ್ಯಕ್ರಮಕ್ಕೆ ಅನೇಕ ಗಣ್ಯರು ಆಗಮಿಸಲಿದ್ದು ಇದೇ ಸಂಧರ್ಭದಲ್ಲಿ ತಾಲ್ಲೂಕಿನ ಹಲವು ಹಿರಿಯ ಕಲಾವಿದರಾದ ಸಂಗೀತ ನಿರ್ಧೇಶಕ ರಾದ ನಾಗಣ್ಣ, ರಂಗರಾಜು, ನಾದಸ್ವರವಾದಕ ಶಿವಣ್ಣ, ಹಿರಿಯ ರಂಗಭೂಮಿ ಕಲಾವಿದ ಮರಿಯಣ್ಣ, ಎಂ.ಎನ್.ಮೂರ್ತಿ ಹಾಗೂ ಜನಪದ ಕಲಾವಿದ ಮುನಿಯಪ್ಪ ಅವರನ್ನು ಗುರ್ತಿಸಿ ಸನ್ಮಾನಿಸಲಾಗುವುದು. ನಾಟಕ ಪ್ರದರ್ಶನದಲ್ಲಿ ಮಧ್ಯಾನಃ ಪ್ರೇಕ್ಷಕರಿಗೆ ಉಪಾಹಾರದ ವ್ಯವಸ್ಥೆ ಸಹಾ ಮಾಡಲಾಗಿದ್ದು ಕಲಾಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಕಲೆಗೆ ಪ್ರೋತ್ಸಾಹ ನೀಡಬೇಕೆಂದು ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಗೋಷ್ಟಿಯಲ್ಲಿ ಜಗಧೀಶ್, ಚಂದ್ರು, ನವೀನ್, ವಿಜಯ್, ಕುಮಾರಯ್ಯ, ಮಧು, ಲೋಕೇಶ್, ರಮೇಶ್ ಸೇರಿದಂತೆ ಇತರರು ಇದ್ದರು.