ಶಿರಾ: ರೈತರ ಅನುಕೂಲಕ್ಕಾಗಿ ಶಿರಾ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ೧೨.೫ ಕೋಟಿ ರೂಪಾಯಿ ವೆಚ್ಚದ ಕೋಲ್ಡ್ ಸ್ಟೋರೇಜ್ ಘಟಕ ನಿರ್ಮಾಣ ಕಾಮಗಾರಿ ಶೀಘ್ರದಲ್ಲಿಯೇ ಪ್ರಾರಂಭವಾಗಲಿದ್ದು, ರೈತರು ಬೆಳೆದಂತಹ ತರಕಾರಿ ಮತ್ತು ಇತರೆ ಬೆಳೆಗಳನ್ನು ಕೋಲ್ಡ್ ಸ್ಟೋರೇಜ್ ನಲ್ಲಿ ಶೇಖರಣೆ ಮಾಡಿ ಸೂಕ್ತ ಬೆಲೆ ಸಿಕ್ಕ ಸಂದರ್ಭದಲ್ಲಿ ಮಾರಾಟ ಮಾಡಲು ಅನುಕೂಲ ವಾಗಲಿದೆ. ಇದಲ್ಲದೆ ಹುಣಸೆ ಪಾರ್ಕ್ ಮಾಡುವ ಉದ್ದೇಶದಿಂದ ಎಪಿಎಂಸಿ ಆವರಣದ ಪಕ್ಕದಲ್ಲಿಯೇ ೨೦ ಎಕರೆ ಭೂಮಿಯನ್ನು ಮೀಸಲಿಡಲಾಗಿದ್ದು, ಹುಣಸೆ ಸಂಸ್ಕರಣ ಘಟಕ ಶೀಘ್ರದಲ್ಲಿಯೇ ನಿರ್ಮಾಣವಾಗಲಿದೆ.
ಹೈನುಗಾರಿಕೆ ಬಡ ಕುಟುಂಬಗಳ ಪಾಲಿಗೆ ವರದಾನವಾಗಿದ್ದು ಹುಳಿ ಗೆರೆ ನೂತನ ಹಾಲು ಉತ್ಪಾದಕರ ಕಟ್ಟಡ ನಿರ್ಮಾಣ ಮಾಡಲು ೧೦. ಲಕ್ಷ ರೂಪಾಯಿ ಅನುದಾನ ನೀಡಲಿದ್ದೇನೆ ಎಂದು ದೆಹಲಿ ವಿಶೇಷ ಪ್ರತಿನಿಧಿ ಶಾಸಕ ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಹುಳಿಗೆರೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಭಾನುವಾರ ಶಂಕುಸ್ಥಾಪನೆ ನೆರ ವೇರಿಸಿ ಮಾತನಾಡಿದರು.
ಬಡ ಕುಟುಂಬಗಳಿಗೆ ಆರ್ಥಿಕ ಸದೃಢತೆ ನೀಡುವ ಹೈನುಗಾರಿಕೆಯನ್ನು ಶಿರಾದಲ್ಲಿ ಪ್ರೋತ್ಸಾಹಿಸಿ ನಂದಿನಿ ಉತ್ಪನ್ನಗಳನ್ನು ಪ್ರೋತ್ಸಾ ಹಿಸಿ ಬೆಳೆಸುವ ನಿಟ್ಟಿನಲ್ಲಿ ಶಿರಾ ನಗರದ ವ್ಯಾಪ್ತಿಯಲ್ಲಿ ೪. ಎಕರೆ ಭೂಮಿ ನೀಡುವ ಗುರಿ ಹೊಂದಲಾಗಿದೆ ಎಂದರು.
ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್. ಗೌಡ ಮಾತನಾಡಿ ಹುಳಿಗೆರೆ ಹಾಲು ಉತ್ಪಾದಕರ ಸಂಘದ ನೂತನ ಕಟ್ಟಡ ನಿರ್ಮಾಣ ಮಾಡಲು ಹಾಲು ಒಕ್ಕೂಟ ೧೦. ಲಕ್ಷ ರೂಪಾಯಿ ನೀಡಲಿದೆ, ಅನುದಾನ ಸದ್ಬಳಕೆ ಮಾಡಿಕೊಂಡು ಹಾಲಿನ ಉತ್ಪಾದನೆಯನ್ನು ಹೆಚ್ಚಳ ಮಾಡಿಕೊಂಡು ಸಂಘ ಆರ್ಥಿಕ ಪ್ರಗತಿ ಸಾಧಿಸಬೇಕು. ರೈತರ ಆರ್ಥಿಕ ಶಕ್ತಿಗೆ, ಹಾಲು ಉತ್ಪಾದಕರ ಸಂಘ ಬುನಾದಿ. ಶಿರಾದಂತಹ ಬಯಲುಸೀಮೆಯಲ್ಲಿ ರೈತರು ಆರ್ಥಿಕವಾಗಿ ಸದೃಢರಾಗಬೇಕೆಂದರೆ ಅದು ಹೈನುಗಾರಿಕೆಯಿಂದ ಮಾತ್ರ ಸಾಧ್ಯವಾಗಲಿದೆ. ಈ ನಿಟ್ಟಿ ನಲ್ಲಿ ರೈತರು ಹಾಲಿನ ಉತ್ಪಾದನೆಯನ್ನು ಹೆಚ್ಚ ಳ ಮಾಡಿಕೊಂಡು, ಡೇರಿಗೆ ಗುಣಮಟ್ಟದ ಹಾಲನ್ನು ಹಾಕುವ ಮೂಲಕ ಯಶಸ್ವಿ ಹಾಲು ಉತ್ಪಾದಕರಾಗಬೇಕು.
ನಂದಿನಿ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ತುಮಕೂರು ಹಾಲು ಒಕ್ಕೂಟಕ್ಕೆ ಶಿರಾ ಭಾಗದಲ್ಲಿ ಎರಡು ಎಕರೆ ಭೂಮಿ ಕೇಳಿದ್ದೇವೆ ಇದಕ್ಕೆ ಪೂರಕವಾಗಿ ಶಾಸಕರು ನಾಲ್ಕು ಎಕರೆ ಭೂಮಿ ಕೊಡುತ್ತೇನೆ ಎಂದಿರುವುದು ಹೈನುಗಾರಿಕೆ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಾಣ ಮಾಡಲಿದೆ.
ಅತಿ ಸಣ್ಣ ರೈತರು ಹಾಗೂ ಆರ್ಥಿಕವಾಗಿ ಹಿಂದುಳಿದ ರೈತರ ಜೀವನೋಪಾಯಕ್ಕೆ ಹೈನು ಗಾರಿಕೆ ಭದ್ರಬುನಾದಿಯಾಗಲಿದೆ ಎಂದರು.
ತುಮಕೂರು ಹಾಲು ಒಕ್ಕೂಟ ಉಪ ವ್ಯವ ಸ್ಥಾಪಕ ಗಿರೀಶ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜನಾಧಿಕಾರಿ ರಮೇಶ್, ವಕೀಲ ಕೆ.ವಿ. ರಾಜು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹೆಚ್.ಈ. ರಂಗನಾಥ್, ಉಪಾಧ್ಯಕ್ಷ ಈರಣ್ಣ, ನಿರ್ದೇಶಕರಾದ ಎಚ್. ಜೆ. ಕುಮಾರ್, ರಾಜಣ್ಣ, ಹೆಚ್.ಜಿ. ಈರಣ್ಣ, ಎಚ್. ಎಸ್. ಲಕ್ಷ್ಮಿಕಾಂತ್, ಗೀತಮ್ಮ, ಲಕ್ಷ್ಮಿಕಾಂತ್, ಹೆಚ್. ಮಂಜುನಾಥ್, ಶಿವಮ್ಮ, ರಾಮಚಂದ್ರಪ್ಪ, ಬಿ.ಹೆಚ್. ಲಕ್ಷ್ಮೀದೇವಿ, ಕಾರ್ಯದರ್ಶಿ ರಾಮಕೃಷ್ಣಪ್ಪ, ಮುಖಂಡರಾದ ಹೆಚ್. ಟಿ. ರಾಜು, ಸೂರ್ಯ ಗೌಡ, ರವಿ ರಾಜು, ಉಪನ್ಯಾಸಕ ಗುಡ್ಡಣ್ಣ, ದಾಸರಹಳ್ಳಿ ಅಶೋಕ್ ,ಹನುಮಂತರಾಯ, ಪೂಜಾರ್ ವೆಂಕಟಪ್ಪ, ಕುಮಾರ್, ಹೆಚ್. ಎಂ. ನಾರಾಯಣಪ್ಪ, ಕೆಮಿಸ್ಟರ್ ಪಿ.ಎಂ.ಬಾಬಾ ಪಕ್ರುದ್ದೀನ್, ಇನಾಮ್ ಗೊಲ್ಲಹಳ್ಳಿ ಶಿವಣ್ಣ, ಶಿಕ್ಷಕ ರಂಗನಾಥ್ ಸೇರಿದಂತೆ ಹಲವಾರು ಮುಖಂಡರು ಇದ್ದರು.
(Visited 1 times, 1 visits today)