ತಿಪಟೂರು: ವಿಶ್ವ ಆರೋಗ್ಯ ಸಂಸ್ಥೆ ೨೦೩೦ರ ವೇಳೆಗೆ ಎಚ್‌ಐವಿ ಮುಕ್ತ ಭಾರತ ಮಾಡುವ ಗುರಿ ಹೊಂದಿದೆ. ಈ ಎಚ್‌ಐವಿ ಯನ್ನು ಹೋಗಲಾಡಿಸಲು ಯುವಕರು ಸಂಕಲ್ಪ ಮಾಡಬೇಕೆಂದು ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಐಸಿಟಿಸಿ ಆಪ್ತ ಸಮಾಲೋ ಚಕರಾದ ಟಿ.ಎಸ್.ಉಮೇಶ್ ತಿಳಿಸಿದ್ದಾರೆ.
ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಮತ್ತು ಎನ್‌ಎಸ್‌ಎಸ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳ ಕಚೇರಿ ಹಾಗೂ ತಿಪಟೂರಿನ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಕಾಲೇಜಿನಲ್ಲಿ ಬುಧವಾರ ನಡೆದ ‘ಯುವ ಜನತೆಗೆ ಎಚ್‌ಐವಿ, ಏಡ್ಸ್ ಬಗ್ಗೆ ಅರಿವು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎಚ್‌ಐವಿ ಪಾಸಿಟಿವ್ ಇರುವರ ಸಂಖ್ಯೆ ಇತ್ತೀಚೆಗೆ ಕಡಿಮೆ ಆಗುತ್ತಿದೆ. ಇದು ಶೂನ್ಯಕ್ಕೆ ಬಂದು ನಿಲ್ಲಬೇಕು. ಈ ರೋಗವನ್ನು ತಡೆಗಟ್ಟಲು ಯುವಕರ ಸಹಕಾರ ಹೆಚ್ಚು ಮುಖ್ಯ. ಈ ಮಾರಕ ರೋಗವನ್ನು ತಡೆಗಟ್ಟಲು ಕಾಲೇಜುಗಳಲ್ಲಿನ ರೆಡ್ ರಿಬ್ಬನ್ ಕ್ಲಬ್ ಸಂಚಾಲಕರುಗಳು ಸೈನಿಕ ರಂತೆ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ಉಮೇಶ್ ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್. ಬಿ. ಕುಮಾ ರಸ್ವಾಮಿ ಅವರು ಮಾತನಾಡಿ, ಜೀವನದಲ್ಲಿ ಆರೋಗ್ಯ ಬಹಳ ಮುಖ್ಯವಾದದ್ದು, ಈ ಆರೋಗ್ಯಕ್ಕೆ ಇಂತಹ ಮಾರಕ ಕಾಯಿಲೆಗಳು ತುತ್ತಾಗದಂತೆ ಎಚ್ಚರವಹಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ರೆಡ್ ರಿಬ್ಬನ್ ಕ್ಲಬ್ ಸಂಚಾಲಕರಾದ ಕೆ. ನಾಗರಾಜು ಮಾತ ನಾಡಿ, ರೆಡ್ ರಿಬ್ಬನ್ ಕ್ಲಬ್ ಧ್ಯಯೋದೇಶ, ಪ್ರಾಮುಖ್ಯತೆ, ಕ್ಲಬ್ ನಿಂದ ಆಗುವ ಅನುಕೂಲಗಳ ಬಗ್ಗೆ ವಿವರಿಸಿದರು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಗಣಿತ ವಿಭಾಗದ ಪ್ರಾಧ್ಯಾಪಕರಾದ ರಮೇಶ್ .ಎಚ್.ಜಿ, ಕಾಲೇ ಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಎಂ.ಎಲ್ ರಮೇಶ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್ ಶಿಬಿರ ಅಧಿಕಾರಿ ಚಿಕ್ಕ ಹೆಗ್ಗಡೆ ಸ್ವಾಗತಿಸಿದರು. ಹಳೆ ವಿದ್ಯಾರ್ಥಿ ಸಂಘದ ಸಂಚಾಲಕರಾದ ಅನು ಪ್ರಸಾದ್. ಕೆ.ಆರ್. ವಂದಿಸಿದರು.
(Visited 1 times, 1 visits today)