ತುಮಕೂರು: ಸಿದ್ಧಗಂಗಾ ಕಲಾ ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಕಾಲೇಜು ವತಿಯಿಂದ ಐಕ್ಯೂಎಸಿ ಮತ್ತು ೨೦೨೫ರ ವಾರ್ಷಿಕ ಸಂಚಿಕೆ ಆಶ್ರಯದಲ್ಲಿ ಲೇಖನ ರಚನೆ ಕೌಶಲಗಳ ಬಗ್ಗೆ ಒಂದು ದಿನದ ಕಾರ್ಯಾಗಾರ ಆಯೋಜಿಸಲಾಗಿತ್ತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಸತ್ತಿನ ಅಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪೂಜ್ಯ ಶ್ರೀ ಸಿದ್ಧಲಿಂಗಸ್ವಾಮೀಜಿಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಬರವಣಿಗೆಯ ಕಾರ್ಯಾಗಾರದಲ್ಲಿ ಪಠ್ಯದಷ್ಟೇ ಪಠ್ಯೇತರವೂ ಮುಖ್ಯ ಎಂಬುದಕ್ಕೆ ಒತ್ತು ನೀಡಿದೆ. ಪ್ರಕೃತಿಗೆ ಸಂಸ್ಕಾರ ಕೊಟ್ಟರೆ ಸಂಸ್ಕೃತಿಯಾಗುತ್ತದೆ. ಆಲೋಚನಾ ಶಕ್ತಿ ಹೊಂದಿರುವ ಮನುಷ್ಯನ ಅನುಭವಗಳಿಗೆ ಬರವಣಿಗೆ ರೂಪ ನೀಡಿದಾಗ ನೈಜ ಸಾಹಿತ್ಯ ರೂಪುಗೊಳ್ಳುತ್ತದೆ ಎಂದರು. ಒಂದು ವಾರ್ಷಿಕ ಸಂಚಿಕೆ ಉತ್ತಮ ಬರಹಗಾರರನ್ನು ಬೆಳಕಿಗೆ ತರಬಲ್ಲ ಸಾಮ ರ್ಥ್ಯ ಹೊಂದಿದೆ. ವಿದ್ಯಾರ್ಥಿನಿಯರು ಪ್ರಗತಿಯತ್ತ ಸಾಗಲು ಇದು ಸೂಕ್ತ ಮಾರ್ಗವೆಂದರು.
ಮುಖ್ಯ ಅತಿಥಿಯಾಗಿ ಉಪನ್ಯಾಸ ನೀಡಿದ ಪದವಿ ಪೂರ್ವ ಶಿಕ್ಷಣ ಇಲಾ ಖೆ ನಿವೃತ್ತ ಉಪನಿರ್ದೇಶಕ ಹೆಚ್.ಕೆ.ನರ ಸಿಂಹಮೂರ್ತಿಯವರು ಸಾಹಿತ್ಯ ರಚನೆ ಬರವಣಿಗೆಯ ಒಂದು ಕಲೆ, ಅಭಿವ್ಯಕ್ತಿಯ ಮಾಧ್ಯಮ. ಒಳ್ಳೆಯ ಅಭ್ಯಾಸ, ವಿಷಯವನ್ನು ಆಯ್ಕೆ ಮಾಡಿಕೊಂಡ ನಂತರ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಬೇಕು. ಸರಳ ಭಾಷೆ, ಚಿಕ್ಕ ಚಿಕ್ಕ ವಾಕ್ಯಗಳು, ಕಂಡ ದೃಶ್ಯ, ಕೇಳಿದ ಧ್ವನಿ, ಅನುಭವಿಸಿದ ಸಂಗತಿಗಳು ಹಿರಿಯರ ಮಾರ್ಗದರ್ಶನ ಹೊಂದಿ ರಬೇಕು. ಲೇಖನ ಬದುಕನ್ನು ಅರಳಿಸಬೇಕೆ ವಿನಾ ಕೆರಳಿಸಬಾರದು. ಟೀಕೆ ಟಿಪ್ಪಣಿಗಳನ್ನು ಮೆಟ್ಟಿಲು ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರು ಡಾ. ಎಚ್.ಎಂ.ದಕ್ಷಿಣಾಮೂರ್ತಿ ಸಾಧನೆಗೆ ಮೊದಲ ಹೆಜ್ಜೆಯೇ ಯೋಜನೆ. ನಿರಂತರ ಓದು ಪರಿಶ್ರಮ ಸವಾಲುಗಳನ್ನು ಎದುರಿಸುವ ಧೈರ್ಯ ನಿಷ್ಪಕ್ಷಪಾತ ನಿಲುವುಗಳಿಂದ ಸೃಜನಶೀಲತೆ ರೂಪಿಸಿಕೊಳ್ಳಲು ಕರೆಕೊಟ್ಟರು.
ಪ್ರಾಸ್ತಾವಿಕ ನುಡಿದ ಸಂಚಿಕೆ ಸಂಚಾಲಕ ಡಾ. ಜಗದೀಶ್ ಅವರು ಕಾಲೇಜಿನ ಸಂಚಿಕೆ ವಿದ್ಯಾರ್ಥಿನಿಯರ ಪ್ರತಿಭಾ ಪ್ರದರ್ಶನದ ಪ್ರತಿಬಿಂಬ. ಒಂದು ಪ್ರದೇಶದ ಸ್ಥಿತಿಗತಿ ಸಮಕಾಲೀನ ಬದುಕು ವಿಶ್ವದ ವಿದ್ಯಮಾನಗಳಿದ್ದರೆ ಅರ್ಥಪೂರ್ಣವಾಗುತ್ತದೆ. ಅದಕ್ಕೆ ಎಲ್ಲರ ಸಹಕಾರ ಕೋರಿದರು. ಮಾದರಿ ಸಂಚಿಕೆ ಸಿದ್ಧವಾಗಲು ಪರಿಶ್ರಮ ಪರಿಶೀಲನೆ ಮಾರ್ಗದರ್ಶನ ಅಗತ್ಯವೆಂ ದರು. ಪ್ರೊ. ಮಹೇಶ್ ಎಸ್., ಪ್ರೊ. ವಿಜಯಲತಾ ಎಸ್.ಆರ್., ಹರ್ಷಶ್ರೀ ಎನ್., ಐ.ಕ್ಯೂ.ಎ.ಸಿ. ಸಂಯೋಜಕರು, ಪ್ರೊ. ಕೆ.ಪಿ.ಶೀಲಾ, ಪ್ರೊ. ಸಿ.ವಿ.ಶಕುಂತಲ, ಪ್ರೊ. ಬಿ.ಎಸ್.ಪಾವನ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಆಸಕ್ತಿಯಿಂದ ಭಾಗ ವಹಿಸಿ ಕಾರ್ಯಾಗಾರದ ಉಪಯುಕ್ತತೆ ಮನವರಿಕೆ ಮಾಡಿಕೊಂಡಿದ್ದು ವಿಶೇಷವಾಗಿತ್ತು.
(Visited 1 times, 1 visits today)