ಕೊರಟಗೆರೆ: ಪಟ್ಟಣದ ೧೫ ನೇ ವಾರ್ಡಿನ ವಾಲ್ಮೀಕಿ ನಗರಕ್ಕೆ ಎರಡು ಕರಡಿಗಳು ಆಹಾರ ಹರಸಿ ಬಂದಿದ್ದು, ಕರಡಿಗಳನ್ನು ಕಂಡು ಜನರು ಆತಂಕ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ನಗರದ ರಸ್ತೆಯನ್ನು ಕರಡಿ ದಾಟುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾ ಣದಲ್ಲಿ ವೈರಲ್ ಆಗುತ್ತಿದೆ. ಕರಡಿಗಳ ದೃಶ್ಯ ನೋಡಿದ ಕೊರಟಗೆರೆ ಪಟ್ಟಣದ ಜನತೆ ಬೆಚ್ಚಿ ಬಿದ್ದಿದ್ದಾರೆ. ಕರಡಿ ದಾಳಿಯ ಭೀತಿಯಿಂದ ಮನೆಯಿಂದ ಹೊರಗಡೆ ಬರಲು ಜನ ಭಯ ಪಡುವಂತಾಗಿದೆ.
ಕರಡಿಗಳು ಪಟ್ಟಣಕ್ಕೆ ಬರದಂತೆ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ಅಧಿಕಾರಿಗಳು ಸುರಕ್ಷಿತವಾಗಿ ಕರಡಿ ಗಳನ್ನು ಹಿಡಿಯಲು ಮುಂದಾಗಿದೆ.
(Visited 1 times, 1 visits today)