ತುಮಕೂರು:
ಮಹಾ ನಗರಪಾಲಿಕೆಯ ಮೇಯರ್, ಉಪ ಮೇಯರ್ ಹಾಗೂ 4 ವಿವಿಧ ಸ್ಥಾಯಿ ಸಮಿತಿಗಳಿಗೆ ಬುಧವಾರ ಪಾಲಿಕೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ನೂತನ ಮೇಯರ್ ಆಗಿ 21ನೇ ವಾರ್ಡ್‍ನ ಲಲಿತಾ ರವೀಶ್ ಹಾಗೂ ಉಪ ಮೇಯರ್ ಆಗಿ 19ನೇ ವಾರ್ಡ್‍ನ ರೂಪಶ್ರೀ ಅವರು ಆಯ್ಕೆಯಾದರು.
ಬೆಂಗಳೂರು ಪ್ರಾದೇಶಿಕ ಆಯುಕ್ತರು ಹಾಗೂ ಪಾಲಿಕೆ ಚುನಾವಣಾಧಿಕಾರಿ ಶಿವಯೋಗಿ ಸಿ.ಕಳಸದ ಅವರು ಬೆಳಿಗ್ಗೆ 11.30 ರಿಂದ ನಡೆಸಿದ ಚುನಾವಣೆ ಪ್ರಕ್ರಿಯೆಯಲ್ಲಿ ಹಾಜರಿದ್ದ 34 ವಾರ್ಡ್‍ಗಳ ಪಾಲಿಕೆ ಸದಸ್ಯರ ಹಾಜರಾತಿ ಪಡೆದು, ಅಭ್ಯರ್ಥಿಗಳ ನಾಮಪತ್ರ ಸ್ವೀಕರಿಸಿ ಪರಿಶೀಲಿಸಲಾಯಿತು. ನಂತರ ಅಭ್ಯರ್ಥಿಗಳಿಗೆ ನಾಮಪತ್ರಗಳನ್ನು ಹಿಂಪಡೆಯಲು ಕಾಲಾವಕಾಶ ನೀಡಲಾಗಿತ್ತು. ಅಭ್ಯರ್ಥಿಗಳ ನಾಮನಿರ್ದೇಶನ ಪತ್ರ ಕ್ರಮಬದ್ಧಗೊಂಡ ನಂತರ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಅಭ್ಯರ್ಥಿಗಳನ್ನು ಘೋಷಿಸಲಾಯಿತು. ಇದಕ್ಕೂ ಮುನ್ನ ಕಳೆದ ಆಗಸ್ಟ್ 31ರಂದು ನಡೆದ ಪಾಲಿಕೆ ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರಿಂದ ಪ್ರಮಾಣ ವಚನ ಸ್ವೀಕರಿಸಲಾಯಿತು.
ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ನಡೆದ ನಂತರ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ; ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ; ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ; ಲೆಕ್ಕಪತ್ರ ಸ್ಥಾಯಿ ಸಮಿತಿ ಸದಸ್ಯರ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು. ಪಾಲಿಕೆಯ 4 ವಿವಿಧ ಸಮಿತಿಗಳಿಗೆ ತಲಾ 7 ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ವಿವಿಧ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದ ಸದಸ್ಯರ ವಿವರ ಇಂತಿದೆ.
ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳ ಸ್ಥಾಯಿ ಸಮಿತಿ:-
ಈ ಸಮಿತಿಯ ಸದಸ್ಯರಾಗಿ 28ನೇ ವಾರ್ಡ್‍ನ ಧರಣೇಂದ್ರ ಕುಮಾರ್, 30ನೇ ವಾರ್ಡ್‍ನ ವಿಷ್ಣುವರ್ಧನ, 17ನೇ ವಾರ್ಡ್‍ನ ಡಿ.ಎಸ್.ಮಂಜುನಾಥ್, 3ನೇ ವಾರ್ಡ್‍ನ ಲಕ್ಷ್ಮಿ ನರಸಿಂಹರಾಜು, 12ನೇ ವಾರ್ಡ್‍ನ ಶಕೀಲ್ ಅಹಮ್ಮದ್ ಷರೀಫ್, 20ನೇ ವಾರ್ಡ್‍ನ ಎ.ಶ್ರೀನಿವಾಸ್ ಹಾಗೂ 24ನೇ ವಾರ್ಡ್‍ನ ಶಿವರಾಮ್ ಅವರು ಅವಿರೋಧವಾಗಿ ಆಯ್ಕೆಯಾದರು.
ಸಾರ್ವಜನಿಕ ಆರೋಗ್ಯ ಮತ್ತು ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:-
ಈ ಸಮಿತಿಯ ಸದಸ್ಯರಾಗಿ 32ನೇ ವಾರ್ಡ್‍ನ ಬಿ.ಜಿ.ಕೃಷ್ಣಪ್ಪ, 10ನೇ ವಾರ್ಡ್‍ನ ನೂರು ಉನ್ನೀಸಾ ಬಾನು, 13ನೇ ವಾರ್ಡ್‍ನ ಫರೀದಾ ಬೇಗಂ, 18ನೇ ವಾರ್ಡ್‍ನ ಮುಜಿದಾ ಖಾನಂ, 1ನೇ ವಾರ್ಡ್‍ನ ನಳಿನಾ ಇಂದ್ರಕುಮಾರ್, 9ನೇ ವಾರ್ಡ್‍ನ ಎಂ.ಪ್ರಭಾವತಿ, 8ನೇ ವಾರ್ಡ್‍ನ ಸೈಯದ್ ನಯಾeóï ಅವರು ಅವಿರೋಧವಾಗಿ ಆಯ್ಕೆಯಾದರು.
ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ:-
34ನೇ ವಾರ್ಡ್‍ನ ನವೀನ ಅರುಣಾ ಎಂ.ಸಿ, 31ನೇ ವಾರ್ಡ್‍ನ ಸಿ.ಎನ್.ರಮೇಶ್, 26ನೇ ವಾರ್ಡ್‍ನ ಹೆಚ್.ಮಲ್ಲಿಕಾರ್ಜುನಯ್ಯ, 4ನೇ ವಾರ್ಡ್‍ನ ದೀಪಶ್ರೀ ಎಚ್.ಎಂ., 25ನೇ ವಾರ್ಡ್‍ನ ಮಂಜುಳಾ ಕೆ.ಎಸ್., 7ನೇ ವಾರ್ಡ್‍ನ ಜೆ.ಕುಮಾರ್, 5ನೇ ವಾರ್ಡ್‍ನ ಟಿ.ಎಂ.ಮಹೇಶ್ ಅವರು ಈ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು.
ಲೆಕ್ಕಪತ್ರ ಸ್ಥಾಯಿ ಸಮಿತಿ:-
ಈ ಸಮಿತಿಗೆ 15ನೇ ವಾರ್ಡ್‍ನ ಎ.ಎಸ್.ಗಿರಿಜಾ, 14ನೇ ವಾರ್ಡ್‍ನ ನಾಸಿರಾ ಬಾನು, 27ನೇ ವಾರ್ಡ್‍ನ ಚಂದ್ರಕಲಾ, 6ನೇ ವಾರ್ಡ್‍ನ ವೀಣಾ ಬಿ.ಜಿ., 2ನೇ ವಾರ್ಡ್‍ನ ಎಸ್.ಮಂಜುನಾಥ್, 35ನೇ ವಾರ್ಡ್‍ನ ಹೆಚ್.ಎಸ್. ನಿರ್ಮಲಾ ಶಿವಕುಮಾರ್ ಹಾಗೂ 16ನೇ ವಾರ್ಡ್‍ನ ಇನಾಯತುಲ್ಲಾ ಖಾನ್ ಅವರು ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾದರು.
ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 35 ವಾರ್ಡ್‍ಗಳಿದ್ದು, ವಾರ್ಡ್ ಸಂಖ್ಯೆ 22ರ ಸದಸ್ಯ ರವಿಕುಮಾರ್ ಅವರ ಅಕಾಲಿಕ ಮರಣದಿಂದ ತೆರವಾಗಿದ್ದರಿಂದ ಚುನಾವಣೆ ಪ್ರಕ್ರಿಯೆಯಲ್ಲಿ 34 ವಾರ್ಡ್‍ಗಳ ಸದಸ್ಯರು ಮಾತ್ರ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್, ಅಪರ ಜಿಲ್ಲಾಧಿಕಾರಿ ಕೆ.ಚನ್ನಬಸಪ್ಪ, ಪಾಲಿಕೆ ಆಯುಕ್ತ ಭೂಬಾಲನ್, ಮತ್ತಿತರರು ಹಾಜರಿದ್ದರು.
ಮಾದರಿ ನಗರ ನಿರ್ಮಾಣಕ್ಕೆ ಆದ್ಯತೆ:-
ತುಮಕೂರು ನಗರವನ್ನು ಮಾದರಿ ನಗರವನ್ನಾಗಿ ಮಾಡಲು ಆದ್ಯತೆ ನೀಡಲಾಗುವುದು ಎಂದು ನೂತನ ಮೇಯರ್ ಲಲಿತಾ ರವೀಶ್ ತಿಳಿಸಿದರು. ಮೇಯರ್ ಆಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2ನೇ ಬಾರಿ ಆಯ್ಕೆಯಾಗಿರುವುದು ತಮಗೆ ಸಂತಸ ತಂದಿದೆ. ಪಾಲಿಕೆಯ 35 ವಾರ್ಡ್‍ಗಳಲ್ಲಿರುವ ಸಮಸ್ಯೆಯನ್ನು ಅರಿತು ಜನರ ಬೇಡಿಕೆಗನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಅಜ್ಜಗೊಂಡನಹಳ್ಳಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ದುರಸ್ತಿಯಲ್ಲಿರುವ ಯಂತ್ರವನ್ನು ಶೀಘ್ರವೇ ಸರಿಪಡಿಸಲಾಗುವುದು ಎಂದು ತಿಳಿಸಿದರು.
ನೂತನ ಉಪ ಮೇಯರ್ ರೂಪಶ್ರೀ ಮಾತನಾಡಿ, ಮೇಯರ್ ಹಾಗೂ ಉಳಿದ ಸದಸ್ಯರ ವಿಶ್ವಾಸವನ್ನು ತೆಗೆದುಕೊಂಡು ಒಗ್ಗಟ್ಟಾಗಿ ನಗರದ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗುವುದು. ಜನರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಒದಗಿಸುವ ಪ್ರಯತ್ನ ಮಾಡಲಾಗುವುದು. ನಾಗರಿಕರ ಕುಡಿಯುವ ನೀರಿನ ಸಮಸ್ಯೆ, ರಸ್ತೆ ಅಭಿವೃದ್ಧಿ, ಒಳ ಚರಂಡಿ ವ್ಯವಸ್ಥೆಗೆ ಪ್ರಥಮಾದ್ಯತೆ ನೀಡಲಾಗುವುದು ಎಂದು ತಿಳಿಸಿದರು.