ಮಧುಗಿರಿ :
ತುರ್ತು ವಾಹನ 108 ಅಂಬುಲೆನ್ಸ್‍ನ್ನು ತಾಲ್ಲೂಕಿನ ಹೋಬಳಿ ಒಂದರಂತೆ ಮಂಜೂರು ಮಾಡಿಸಿಕೊಡಬೇಕೆಂದು ಜಯಕರ್ನಾಟಕ ಮಧುಗಿರಿ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಮಧುಗಿರಿಯು ಉಪವಿಭಾಗ ಕೇಂದ್ರವಾಗಿದ್ದು 4 ತಾಲ್ಲೂಕುಗಳು ಒಳಪಟ್ಟಿರುವುದರಿಂದ ಇಲ್ಲಿ ಜನ ಸಂದಣಿ ದಟ್ಟವಾಗಿರುತ್ತದೆ. ಆದ ಕಾರಣ ಸರಣಿ ಅಪಘಾತಗಳು ಸಂಭವಿಸುತ್ತಿದ್ದು, ಹಾಲಿ ಈಗ ಇರುವ ಏಕೈಕ ತುರ್ತು ವಾಹನ ಕಾರ್ಯನಿರ್ವಹಿಸಲು ಕಷ್ಟಕರವಾಗಿರುತ್ತದೆ. ಆದ್ದರಿಂದ ಹೋಬಳಿಗೆ ಒಂದರಂತೆ 5 ತುರ್ತು ವಾಹನಗಳನ್ನು ಮತ್ತು ತಾಲೂಕಿಗೆ ವೈಕುಂಠ ವಾಹನವನ್ನು ಮಂಜೂರು ಮಾಡಿಸಿಕೊಡಬೇಕು. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯು ಮತ್ತು ಡಯಾಲಿಸಿಸ್ ಇರುವುದರಿಂದ ಸಿಬ್ಬಂದಿಕೊರತೆ ಇದೆ. ಹಾಗೂ ಚರ್ಮ ರೋಗ ತಜ್ಞರು, ನರ್ಸ್‍ಗಳ ಅವಶ್ಯಕತೆ ಮತ್ತು ಸಿಟಿ ಸ್ಕಾನಿಂಗ್ ವ್ಯವಸ್ಥೆ ಮಾಡಿಕೊಡಬೇಕು. ಆಸ್ಪತ್ರೆಯಲ್ಲಿ ನೀರಿನ ಸಮಸ್ಯೆಯಿರುವುದರಿಂದ ಆಸ್ಪತ್ರೆ ಆವರಣದಲ್ಲಿ ಕೊಳವೆ ಬಾವಿ ಕೊರೆಸಿಕೊಡಬೇಕಾಗಿ ಮನವಿ ಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಚಂದನ್, ಪದಾಧಿಕಾರಿಗಳಾದ ಆನಂದ್, ಮಿಲ್ ರಾಜಣ್ಣ, ಪಾಂಡಪ್ಪ, ಯತೀಶ್ ಮುಂತಾದವರು ಹಾಜರಿದ್ದರು.