ತುಮಕೂರು:
ನಗರದ ಖಾಸಗೀ ಹೋಟೆಲ್ ನಲ್ಲಿ ಸುದ್ಧಿಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಗ್ರಾಮಾಂತರ ಮಾಜಿ ಶಾಸಕ ಬಿ.ಸುರೇಶ್ ಗೌಡರವರು ಹಾಲಿ ಶಾಸಕರಾದ ಡಿ.ಸಿ.ಗೌರಿಶಂಕರ್ ವಿರುದ್ಧ ಹರಿಹಾಯ್ದರು.
ಗೌರಿಶಂಕರ್ ವಿರುದ್ಧ ಎಕ್ಸ್ಟ್ರಾಕ್ಷನ್ ಕೇಸು ದಾಖಲಿಸಲಬೇಕು ಮತ್ತು ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕು. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿಯನ್ನು ಮುಖ್ಯ ಸಾಕ್ಷಿಯಾಗಿ ಪರಿಗಣಿಸಬೇಕು. ಭೂ ವಿಜ್ಞಾನಿಯವರು ಗಣಿ ಇಲಾಖೆಯ ಉಪ ನಿರ್ದೇಶಕರಿಗೆ ನೀಡಿರುವ ಹೇಳಿಕೆಯನ್ನು ಸಾಕ್ಷಿಯನ್ನಾಗಿ ಪರಿಗಣಿಸಬೇಕು. ಶಾಸಕರು ಕಾನೂನನ್ನು ಕೈಗೆತ್ತಿಕೊಂಡಿರುವುದರಿಂದ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಬಂಧಿಸಬೇಕು. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಪಾರದರ್ಶಕ ತನಿಖೆಗೆ ಅನುವುಮಾಡಿಕೊಡಬೇಕು. ತಮ್ಮ ಪಕ್ಷದ ಶಾಸಕನನ್ನು ರಕ್ಷಣೆ ಮಾಡಬಾರದು ಎಂದು ಒತ್ತಾಯಿಸಿದರು.
ದಿನಾಂಕ 21-.01-2019 ರಂದು ಭ್ರಷ್ಠಾಚಾರ ನಿಗ್ರಹದಳದ ಪೋಲೀಸ್ ಉಪಾದೀಕ್ಷಕರಿಗೆ ದೂರು ನೀಡಲಾಗಿದ್ದು ಸದರೀ ದೂರಿನ ಸಂಭಂದ 25.01.2019 ರಂದು ಪತ್ರಿಕಾಗೋಷ್ಠಿ ನಡೆಸಲಾಗಿತ್ತು ಆದರೆ ಭ್ರಷ್ಠಾಚಾರ ನಿಗ್ರಹ ದಳದ ಪೋಲೀಸ್ ಠಾಣೆಗೆ ನೀಡಿದ ದೂರಿನ ಅನ್ವಯ ನಾವು ನೀಡಿದ್ದ ಅರ್ಜಿಯನ್ನು ಪೋಲೀಸ್ ಅಧೀಕ್ಷಕರು ಕೇಂದ್ರ ವಲಯ ಭ್ರಷ್ಟಾಚಾರ ನಿಗ್ರಹ ದಳ ಬೆಂಗಳೂರು ರವರಿಗೆ ತುಮಕೂರಿನ ಎ.ಸಿ.ಬಿ.ಯ ಡಿವೈಎಸ್‍ಪಿ ರವರು ಸದರೀ ಅರ್ಜಿಯ ಬಗ್ಗೆ ಕೈಗೊಳ್ಳಬಹುದಾದ ಕ್ರಮದ ಬಗ್ಗೆ ಮನವಿ ಮಾಡಿದ್ದರು.
ಅಭಿಯೋಗ ಉಪನಿರ್ದೇಶಕರಿಂದ ಬಂದ ಅಭಿಪ್ರಾಯದ ಮೇರೆಗೆ ಮಾನ್ಯ ಪೋಲೀಸ್ ಅಧೀಕ್ಷಕರು ಭ್ರಷ್ಠಾಚಾರ ನಿಗ್ರಹದಳದ ಕೇಂದ್ರ ವಲಯದವರು ಸದರೀ ದೂರಿನಲ್ಲಿ ಬೆದರಿಕೆ ಹಾಕಿ ಹಣ ವಸೂಲಿ ಮಾಡುವ ಬಗ್ಗೆ (ಎಕ್ಸಟ್ರಾಕ್ಷನ್) ಆರೋಪ ಕಂಡು ಬಂದಿರುವುದರಿಂದ ನಮ್ಮ ಅರ್ಜಿಯನ್ನು ಮುಂದಿನ ಕ್ರಮಕ್ಕಾಗಿ ತುಮಕೂರು ಜಿಲ್ಲಾ ಪೋಲೀಸ್ ಅಧೀಕ್ಷಕರ ಕಛೇರಿಗೆ ದಿನಾಂಕ 23.02-2019 ರಂದು ನಮ್ಮ ದೂರನ್ನು ವರ್ಗಾಯಿಸಿರುತ್ತಾರೆ.
ಇದರ ಬಗ್ಗೆ ದಿನಾಂಕ 23-02-2019 ರಂದು ಎ ಸಿ ಬಿ ಡಿವೈಎಸ್ಪಿ ರವರು ನಮಗೆ ಹಿಂಬರಹ ನೀಡಿರುತ್ತಾರೆ. ಈ ವಿಚಾರವಾಗಿ ಶಾಸಕ ಗೌರಿಶಂಕರ ವಿರುದ್ದ ಬೆದರಿಕೆ ಹಾಕಿ ಹಣ ವಸೂಲಿ ಮಾಡಿರುವ ಬಗ್ಗೆ ಪ್ರಕರಣ ದಾಖಲು ಮಾಡಿ ಕೂಲಂಕುಶ ತನಿಖೆ ನಡೆಸುವ ಅಗತ್ಯತೆ ಇದೆ. ಕ್ಯಾಂತ್ಸಂದ್ರ ಪಿ,ಎಸ್,ಐ ರಾಜು ಮತ್ತು ವೃತ್ತ ನಿರೀಕ್ಷಕರಾದ ರಾಮಕೃಷ್ಣಯ್ಯ ಇವರುಗಳು ಶಾಸಕ ಗೌರಿಶಂಕರ ಅವರ ಶಿಫಾರಸಿನ ಮೇರೆಗೆ ಕ್ಯಾತ್ಸಂದ್ರ ವೃತ್ತದಲ್ಲಿ ಇರುವುದರಿಂದ ಸದರೀ ಪ್ರಕರಣವನ್ನು ಬೇರೋಬ್ಬ ದಕ್ಷ ಪ್ರಾಮಾಣಿಕ ಅಧಿಕಾರಿಯಿಂದ ತನಿಖೆ ನಡೆಸಬೇಕೆಂದು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಆಗ್ರಹಿಸುತ್ತಿದ್ದೇನೆ,
ಸದರೀ ವಿಚಾರಕ್ಕೆ ಸಂಬಂದಪಟ್ಟಂತೆ ಶಾಸಕ ಗೌರಿಶಂಕರ ಮತ್ತು ಬೆಂಬಲಿಗರು ಲಾರಿಗಳನ್ನು ತಡೆದು ವಸೂಲಿ ಮಾಡಿದ್ದರು ಎಂಬುದಕ್ಕೆ ಪುಷ್ಟೀಕರಿಸುವಂತೆ ಗಣಿ ಮತ್ತು ಭೂ ವಿಜ್ಘಾನ ಇಲಾಖೆಯ ಉಪನಿರ್ದೇಶಕರಿಗೆ ಭೂ ವಿಜ್ಘಾನಿ ಆದ ಪಿ,ಎಸ್ ನವೀನ್ ರವರು ದಿನಾಂಕ 4-02-2019 ರಂದು ಹೇಳಿಕೆ ನೀಡಿರುತ್ತಾರೆ.
ಅವರ ಹೇಳಿಕೆಯಲ್ಲಿ ಇರುವಂತೆ ರಾಷ್ರೀಯ ಹೆದ್ದಾರಿ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಲ್ಲು ದಿಮ್ಮಿ ತುಂಬಿದ್ದ 4 ಲಾರಿಗಳು ನಿಂತಿದ್ದು ಇದರ ಬಗ್ಗೆ ಗ್ರಾಮಾಂತರ ಕ್ಷೇತ್ರದ ಶಾಸಕರು ಕರೆ ಮಾಡಿ ವಿವರಣೆ ಕೇಳಿದ್ದು ನಂತರ ಸ್ಥಳಕ್ಕೆ ಹೋಗಿ ಅಲ್ಲಿ ನಿಂತಿದ್ದ ಲಾರಿಗಳನ್ನು ಕಂಡು ಶಾಸಕರು ಕೇಳಿದ ಮಾಹಿತಿಯನ್ನು ತಿಳಿಸಿ ಇಲಾಖೆಯಿಂದ ಗುತ್ತಿಗೆ ಮುಂಜೂರು ಮಾಡಿರುವ ಬಗ್ಗೆ ಹಾಗು ಗುತ್ತಿಗೆದಾರರು ಪರವಾನಗಿ ಪಡೆದು ಸಾಗಾಣೆ ಮಾಡಿರುವ ಬಗ್ಗೆ ವಿವರಣೆ ನೀಡಿರುತ್ತೇನೆ.
ಲಾರಿಗಳಲ್ಲಿ ಪರವಾನಗಿ ಇಲ್ಲದೇ ಇದ್ದರೆ ನಿಯಮಾನುಸಾರ ಕ್ರಮ ಜರುಗಿಸುವುದಾಗಿ ತಿಳಿಸಿ ಲಾರಿಗಳನ್ನು ವಿಚಾರಣೆಗಾಗಿ ಪೋಲೀಸ್ ಠಾಣೆಗೆ ಇಲ್ಲ ನಮ್ಮ ಕಛೇರಿಗೆ ಲಾರಿಗಳನ್ನು ತೆಗದುಕೊಂಡು ಬರುವಂತೆ ಲಾರಿಯವರಿಗೆ ತಿಳಿಸಿದಾಗ ಶಾಸಕರ ಬೆಂಬಲಿಗರು ಲಾರಿಗಳನ್ನು ನಾನು ತೆಗೆದುಕೊಂಡು ಹೋಗಲು ಅಡ್ಡಿಪಡಿಸಿರುತ್ತಾರೆ. ಸದರೀ ವಿಚಾರವನ್ನು ಉಪನಿರ್ದೇಶಕರಿಗೆ ದೂರವಾಣಿ ಮೂಲಕ ತಿಳಿಸಿರುವುದಾಗಿ ಅವರ ಹೇಳಿಕೆಯಲ್ಲೇ ನವೀನ್ ಪಿ.ಎಸ್. ರವರು ತಿಳಿಸಿರುತ್ತಾರೆ.
ಅದೇ ಹೇಳಿಕೆಯಲ್ಲಿ ಶಾಸಕರ ಬೆಂಬಲಿಗರ ಗುಂಪು ಇದ್ದದ್ದರಿಂದ ನಾನು ಪ್ರಾಣ ಭಯದಿಂದ ಲಾರಿಗಳನ್ನು ತಡೆದು ನಿಲ್ಲಿಸಲಾಗದೆ ವಾಪಸು ಬಂದಿರುತ್ತೇನೆ ಎಂದು ಅವರ ಹಿರಿಯ ಅಧಿಕಾರಿಗಳಿಗೆ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ಅಂದರೆ ಶಾಸಕರು ಮತ್ತು ಅವರ ಬೆಂಬಲಿಗರು ಹಣ ವಸೂಲಿಗಾಗಿ ಲಾರಿಗಳನ್ನು ತಡೆದು ಅಕ್ರಮವಾಗಿ ಕರೆದೊಯ್ದಿರುವುದು ಇದರಿಂದ ಸಾಬೀತಾಗಿರುತ್ತದೆ. ನವೀನ್ ಪಿ,ಎಸ್ ರವರು ಸರ್ಕಾರಿ ಭೂ ವಿಜ್ಘಾನಿ ಆಗಿದ್ದು ಇವರ ಹೇಳಿಕೆ ಬಹುಮುಖ್ಯ ಹೇಳಿಕೆಯಾಗಿ ಪರಿಗಣಿಸುವಂತೆ ಈ ಮೂಲಕ ಒತ್ತಾಯಿಸುತ್ತಿದ್ದೇನೆ. ಲಾರಿಗಳಲ್ಲಿ ಅಕ್ರಮವಾಗಿ ಸಾಗಾಟ ಆಗುತ್ತಿರುವ ಮಾಹಿತಿ ಇರುವ ಶಾಸಕರು ಸಂಬಂದಪಟ್ಟ ಇಲಾಖೆಗೆ ಮಾಹಿತಿ ನೀಡಿ ಕಾನೂನು ರೀತ್ಯಾ ಕ್ರಮ ಜರುಗಿಸುವಂತೆ ಶಿಫಾರಸ್ಸು ಮಡಬೇಕಿತ್ತು ಆದರೆ ಇದ್ಯಾವುದನ್ನು ಮಾಡದೆ ತಾವೇ ನೇರವಾಗಿ ಫೀಲ್ಡಗೆ ಇಳಿದಿರುವುದು ಮತ್ತು ಬೆಂಬಲಿಗರೊಡನೆ ಲಾರಿಗಳನ್ನು ಅಡ್ಡಗಟ್ಟಿರುವುದರ ಅರ್ಥ ಏನು ಇದರ ಬಗ್ಗೆ ನಿಸ್ಪಕ್ಷಪಾತವಾಗಿ ಸಮಗ್ರ ತನಿಖೆ ನಡೆಸಬೇಕು ಎಂದು ಎಸ್ಪಿ ಅವರಲ್ಲಿ ಒತ್ತಾಯ ಮಾಡುತ್ತಿದ್ದೇನೆ ಎಂದರು.