ಕೊರಟಗೆರೆ :
ಇಲಾಖಾ ಅಧಿಕಾರಿಗಳು ತಾವು ಕಾರ್ಯನಿರ್ವಹಿಸುವ ಸ್ಥಳದಲ್ಲೆ ವಾಸವಿದ್ದು ರಾಜ್ಯ ಸರ್ಕಾರದ ಯೋಜನೆಗಳನ್ನು ಪ್ರಮಾಣಿಕವಾಗಿ ಅನುಷ್ಢಾನ ಗೊಳಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಅವರು ತಮ್ಮ ಸ್ವಕ್ಷೇತ್ರವಾದ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ತ್ರೈಮಾಸಿಕ ಕೆ.ಡಿ.ಪಿ ಸಬೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಲಾಖಾ ಅಧಿಕಾರಿಗಳು ಪ್ರತಿನಿತ್ಯ ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಬರುತ್ತಿದ್ದು ಕಛೇರಿಯಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅಧಿಕಾರಿಗಳು ಲಭ್ಯವಿಲ್ಲದೆ ಕೆಲಸ ಕಾರ್ಯಗಳು ಕುಂಟಿತವಾಗಿದ್ದು ಉಪಮುಖ್ಯಮಂತ್ರಿಗಳು ತಮ್ಮ ಕ್ಷೇತ್ರದಲ್ಲಿ ಇಲಾಖಾ ಅಧಿಕಾರಿಗಳನ್ನು ಹಿಡಿತದಲ್ಲಿ ಇಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬರುತ್ತಿದ್ದು ಇನ್ನು ಮುಂದೆ ಜನರಿಗೆ ಸ್ಪಂದಿಸಿ ಸರ್ಕಾರಿ ಕಾರ್ಯಕ್ರಮಗಳು ಸಮಪರ್ಕವಾಗಿ ಅನುಷ್ಠಾನಮಾಡುವುದರೊಂದಿಗೆ ಕೊರಟಗೆರೆ ವಿಧಾನ ಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಲಕ್ಷಾಂತರ ರೂಗಳ ವೆಚ್ಚದಲ್ಲಿ ತಾಲೂಕು ಕೇಂದ್ರದಲ್ಲಿ ಸುಂದರವಾದ ತಾಲೂಕು ಕಛೇರಿ ಮತ್ತು ತಾ.ಪಂ. ಕಛೇರಿಗಳ ಕಟ್ಟಡವಿದ್ದು ಶುಚ್ಚಿಸ್ವವಿಲ್ಲದೆ ನೂತನ ಕಟ್ಟಡ ಶಿಥಿಲವಾ ಗುವ ರೀತಿಯಲ್ಲಿ ಮಾಡಲಾಗುತ್ತಿದೆ ತಕ್ಷಣ ಸ್ವಚ್ಚತೆಮಾಡಿಸಿ ಎಂದು ತಿಳಿಸಿದ ಅವರು ಕಂದಾಯ ಇಲಾಖೆಯಲ್ಲಿ ಅನೇಕ ದೂರುಗಳು ಬರುತ್ತಿದ್ದು ಶೀಘ್ರದಲ್ಲಿ ಕಂದಾಯ ಇಲಾಖೆ ಪರೀಶಿಲನೆ ಕಾರ್ಯಾ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಎಲ್ಲಾ ಅಧಿಕಾರಿಗಳು ಗ್ರಾಮ ವಾಸ್ತವ್ಯಕ್ಕೆ ಸಜ್ಚಾಗುವಂತೆ ತಿಳಿಸಿದರು. ತಾಲ್ಲೂಕಿನಲ್ಲಿ ಅಕ್ಷರದಾಸೋಹದೊಂದಿಗೆ ಮಕ್ಕಳಿಗೆ ಕ್ಷೀರಭಾಗ್ಯ ನೀಡುತ್ತಿದ್ದು ಕೋಳಾಲ ಹೋಬಳಿಯ ಶಾಲೆಯೊಂದರಲ್ಲಿ ಸಕ್ಕರೆ ಇಲ್ಲದೆ ಮಕ್ಕಳಿಗೆ ಹಾಲು ನೀಡುತ್ತಿದ್ದಾರೆ ನಾನು ಬೇಟಿ ನೀಡಿದ ಶಾಲೆಯಲ್ಲಿ ನನಗೂ ಸಕ್ಕರೆ ಇಲ್ಲದೆ ಹಾಲು ನೀಡಿದ್ದು ಸಾಕ್ಷಿಯಾಗಿದ್ದೆನೆ ಈ ಬಗ್ಗೆ ಅಕ್ಷರ ದಾಸೋಹ ಅಧಿಕಾರಿಗಳು ಪರಿಶೀಲಿಸುವಂತೆ ಹಾಗೂ ಕ್ಷೇತ್ರಶಿಕ್ಷಣಾಧಿಕಾರಿಗಳು ತಾಲೂಕಿ ಎಲ್ಲಾ ಶಾಲೆಗಳಿಗೂ ಬೇಟಿ ನೀಡಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ಶೌಚಾಲಯ ಇರಬೇಕು ಇದನ್ನು ಖಡ್ಡಾಯವಾಗಿ ಪಾಲಿಸಬೇಕು ಶೌಚಾಲಯವಿಲ್ಲದ ಶಾಲೆಯನ್ನು ಗುರುತಿಸಿ ನನಗೆ ವರದಿ ಸಲ್ಲಿಸಬೇಕು ಇದರೊಂದಿಗೆ ಪರಿಸರ ಕಾಪಾಡುವ ಹಿನ್ನೆಲೆಯಲ್ಲಿ ಪ್ರತಿ ಶಾಲೆ ಆವರಣದಲ್ಲಿ ಸಸಿಗಳನ್ನು ನೆಟ್ಟು ಪೋಷಿಸುವಂತೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಬೇಕೆಂದು ತಿಳಿಸಿದರು.
ತೈಮಾಸಿಕ ಸಭೆಯಲ್ಲಿ ಕೃಷಿ ಅಧಿಕಾರಿ ನಾಗರಾಜು ರವರಿಂದ ಮಾಹಿತಿ ಪಡೆದ ಅವರು ತಾಲ್ಲೂಕಿನಲ್ಲಿ ಬೀಳುವ ವಾಡಿಕೆ ಮತ್ತು ವಾಸ್ತವಿಕ ಮಳೆ ವಿವರ ನೀಡುತ್ತಿದ್ದು ಇದ ರಿಂದ ತಾಲೂಕಿನಲ್ಲಿ ಯಾವ ಹೋಬಳಿ, ಗ್ರಾಮದಲ್ಲಿ ಮಳೆಯಾಗಿದೆ ಎಲ್ಲಿ ಮಳೆ ಇಲ್ಲದೆ ಬರದ ಛಾಯೆ ಇದೆ ಎಂಬುದು ತಿಳಿಯುತ್ತಿಲ್ಲಾ ಮುಂದಿನ ದಿನಗಳ ಸಭೆಗೆ ಪ್ರತಿ ಹೋಬಳಿ ಸೇರಿದಂತೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳೆ ವಿವರ ನೀಡುವಂತೆ ಹಾಗೂ ಪ್ರಸ್ತುತ ರೈತರಿಗೆ ಬೇಕಾಗುವ ಬಿತ್ತನೆ ಬೀಜ, ರಸಗೊಬ್ಬರ ಸಮರ್ಪಕವಾಗಿ ವಿತರಿಸುವಂತ ತಿಳಿಸಿದರು.
ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಕಳೆದ 5 ವರ್ಷಗಳಿಂದ ಒಂದೇ ವರದಿ ನೀಡುತ್ತಿದ್ದು ಸುಳ್ಳು ಮಾಹತಿ ನೀಡುತ್ತೀದ್ದಿರಿ, ತೋಟಗಾರಿಕಾ ಇಲಾಖೆ ಅಧಿಕಾರಿಗಳು ರೈತರಿಗೆ ಆರ್ಥಿಕವಾಗಿ ಲಾಭದಾಯಕ ತರಕಾರಿ ಹಾಗೂ ಹಣ್ಣುಗಳು ಬೆಳೆಯಲು ಅವರಿಗೆ ಪ್ರೊತ್ಸಾಹದೊಂದಿಗೆ ಸರ್ಕಾರದ ಸವಲತ್ತುಗಳನ್ನು ನೀಡುವ ಮೂಲಕ ಇಲಾಖೆಯ ಋಣ ತೀರಿಸಿ ಎಂದ ಅವರು ಅರಣ್ಯ ಇಲಾಖೆ ಪ್ರತಿವರ್ಷ ಲಕ್ಷಾಂತರ ಸಸಿಗಳನ್ನು ನೆಡುವ ಮಾಹಿತಿ ನೀಡುತ್ತಿದ್ದು ಅವರ ಮಾಹಿತಿ ಪ್ರಕಾರ ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಅರಣ್ಯ ಸಂವೃದ್ದಯಿಂದ ಬೆಳೆಯಬೇಕಾಗಿತ್ತು ರಾಜ್ಯದಲ್ಲಿ ಅರಣ್ಯ ಇಲಾಖೆಯ ಕಾರ್ಯವೈಕರಿ ತಿಳಿಯದಂತ್ತಾಗಿದ್ದು ವಲಯ ಅರಣ್ಯ ಮತ್ತು ಸಾಮಾಜಿಕ ಅರಣ್ಯ ಇಲಾಖೆಗಳು ಪರಸ್ಪರ ಒಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು ಪ್ರತಿ ತಾಲೂಕಿನಲ್ಲೂ ಅರಣ್ಯ ಇಲಾಖೆ ಒಂದು ರಸ್ತೆಯಲ್ಲಿ ಸುಮಾರು 4 ರಿಂದ 5 ಕಿ.ಮೀ ದೂರ ಸಸಿಗಳನ್ನು ನೆಟ್ಟು ಬೆಳೆಸಿ ಪ್ರಗತಿ ತೋರಿಸಬೇಕು ಹಾಗೂ ಸರ್ಕಾರಿ ಹಾಗೂ ಖಾಸಗಿ ಜಮೀನಿನಲ್ಲಿ ಒಂದೇ ಕಡೆ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಸಾಧಿಸಿ ತೋರಸಿ ಬೇಕು ಕೇವಲ ವಿಶ್ವ ಪರಿಸರ ದಿನಾಚರಣೆಗಾಗಿ ಶಾಸ್ತ್ರಾಕ್ಕೆ ಸಸಿನೆಟ್ಟು ವರದಿ ನೀಡುವುದು ತರವಲ್ಲಿ ಮುಂದಿನ ದಿನಗಳಲ್ಲಿ ಸಾಧನೆ ಮಾಡಿ ತೋರಿಸುವಂತೆ ತಿಳಿಸಿದರು. ರಾಜ್ಯದಲ್ಲಿ ಆಹಾರ ಇಲಾಖೆಯಿಂದ ಶೇ.90 ರಷ್ಟು ಬಿಪಿಎಲ್ ಕಾರ್ಡ್‍ಗಳು ವಿರತಣೆ ಯಾಗಿರುವ ಮಾಹಿತಿಇದ್ದು ಈ ಬಗ್ಗೆ ಸರಿಯಾದ ಮಾಹಿತಿ ದೊರೆಯದಂತಾಗಿದ್ದು ಇಲಾಖಾ ಅಧಿಕಾರಿಗಳು ತನಿಖೆ ಮೂಲಕ ಅರ್ಹ ಮತ್ತು ಅನರ್ಹ ಫಲಾನುಭವಿಗಳ ಪಟ್ಟಿ ಮಾಡಿ ವರದಿ ನೀಡುವಂತೆ ತಿಳಿಸಿದರು.
ಲೋಕೋಪಯೋಗಿ ಇಲಾಖೆ ಇಂಜಿನಿಯರ ಜಗದೀಶ್ ಮಾಹಿತಿ ನೀಡಿ ಪ್ರಸಕ್ತ ವರ್ಷದಲ್ಲಿ ತಾಲೂಕಿನಲ್ಲಿ ವಿವಿಧ ರಸ್ತೆ ಕಾಮಗಾರಿಗೆ 107 ಕೋಟಿ ರೂಗಳು ಬಿಡುಗಡೆಯಾಗಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ತಿಳಿಸಿದರೆ, ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ರಮೇಶ್ ಮಾಹಿತಿ ನೀಡಿ ತಾಲೂಕಿನಲ್ಲಿ ಗೋಬಲಗುಟ್ಟೆ ಕೆರೆ ಹಾಗೂ ಗೌಡನಕೆರೆ ಅಭಿವೃದ್ದಿಗೆ ವಿಶೇಷ ಅನುದಾನವಾಗಿ 1.5 ಕೋಟಿ ರೂ ಬಿಡುಗಡೆಯಾಗಿದ್ದು ಇದರೊಂದಿಗೆ ಚೆಕ್ ಡ್ಯಾಂ ಮತ್ತು ರಕ್ಷಣಾ ಗೊಡೆಗಳ ನಿರ್ಮಾಣಕಾಮಗಾರಿಗೂ ಹಣ ಬಿಡುಗಡೆ ಯಾಗಿದ್ದ ಶೀಘ್ರಕಾಮಗಾರಿ ಪ್ರಾರಂಬಿಸುವುದಾಗಿ ಮಾಹಿತಿ ನೀಡಿದರೆ ಇಂಜಿನಿಯರ್ ರಂಗಪ್ಪ ಮಾತನಾಡಿ ತಾಲೂಕಿನಲ್ಲಿ ಶುದ್ದಕುಡಿಯುವ ನೀರಿನ ಘಟಕಗಳು 139 ಕಾರ್ಯನಿರ್ವಹಿಸುತ್ತಿದ್ದು ಇದೊಂದಿಗೆ 32 ಶುದ್ದಕುಡಿಯುವನೀರಿನ ಘಟಕಗಳು ನಿರ್ಮಾಣ ಕಾಮಗಾರಿ ನೆಡಯುತ್ತಿದೆ, 132 ಶುದ್ದ ಕುಡಿಯುವನೀರಿನ ಘಟಕಗಳಿಗೆ ಬೇಡಿಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು. ಸಾರ್ವಜನಿಕರ ಆಸ್ಪತ್ರೆಯ ಆಡಳಿತಾದಿಕಾರಿ ಡಾ.ಪ್ರಕಾಶ್ ಮತ್ತು ತಾಲೂಕು ವೈದ್ಯಾಧಿಕಾರಿ ಡಾ.ವಿಜಯಕುಮಾರ್, ಸಮಾಜ ಕಲಾಣ್ಯಾಧಿಕಾರಿ, ಸಿಡಿಪಿಒ ಶಮಂತಕ ಸೇರಿದಂತೆ ಇನ್ನಿತರ ಇಲಾಖಾ ಅಧಿಕಾರಿಗಳು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಶುಭಕಲ್ಯಾಣ್, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ವಂಶಿಕೃಷ್ಣ, ತಾ.ಪಂ. ಅಧ್ಯಕ್ಷ ನಾಜೀಮಾಭೀ, ಉಪಾಧ್ಯಕ್ಷ ವೆಂಕಟಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಸಿ.ರಾಮಯ್ಯ, ಜಿ.ಪಂ.ಸದಸ್ಯ ಪ್ರೇಮಾಮಹಾಲಿಂಗಪ್ಪ, ನಾರಾಯಣಮೂರ್ತಿ, ಶಿವರಾಮಯ್ಯ, ಅಕ್ಕಮಹಾ ದೇವಿ, ಮಧುಗಿರಿ ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್ ಶಿವರಾಜು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಿವಪ್ರಕಾಶ್ ಸೇರಿದಂತೆ ಇನ್ನಿತರ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.