ತುಮಕೂರು :
ನಗರದ ಕ್ಯಾತ್ಸಂದ್ರದಲ್ಲಿರುವ ಸಿದ್ದಗಂಗಾ ಮಠದಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ಬಳ್ಳಾರಿ ಮೂಲದ ಲಿಂಗೇಶ್ ಎನ್ನುವ ವಿದ್ಯಾರ್ಥಿ ಮಠದ ಸಮೀಪ ಮರದ ಕೊಂಬೆ ಮುರಿದು ಬಿದ್ದು, ಸಾವನ್ನಪ್ಪಿದ್ದಾರೆ.
ಪ್ರತಿದಿನದಂತೆ ಮ್ಯೂಸಿಕ್ ಬ್ಯಾಂಡ್ ಅಭ್ಯಾಸ ಮಾಡಲು ಸಿದ್ದಗಂಗಾ ಮಠದ ಸಮೀಪವಿರುವ ಸರ್ಕಾರಿ ಆಸ್ಪತ್ರೆಯ ಹಿಂಭಾಗದಲ್ಲಿ ಆಲದಮರದ ಕೆಳಗೆ ಎಲ್ಲಾ ವಿದ್ಯಾರ್ಥಿಗಳು ಮ್ಯೂಸಿಕ್ ಬ್ಯಾಂಡ್ ಅಭ್ಯಾಸ ಮಾಡುತ್ತಿದ್ದ ಸಮಯದಲ್ಲಿ ಬಲವಾದ ಆಲದ ಮರದ ಕೊಂಬೆ ಮುರಿದು ಕೆಳಗೆ ಬಿದ್ದಿದ್ದು, ಮರದ ಕೆಳಗೆ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿಗಳ ಪೈಕಿ ಬಳ್ಳಾರಿ ಮೂಲದ ಲಿಂಗೇಶ್ ಎನ್ನುವ ವ್ಯಕ್ತಿಯ ತಲೆಯ ಮೇಲೆ ಕೊಂಬೆ ಬಿದ್ದ ಪರಿಣಾಮ ಆತನನ್ನ ಸಿದ್ದಗಂಗಾ ಆಸ್ಪತ್ರೆಗೆ ತಕ್ಷಣ ರವಾನಿಸಲಾಯಿತು.
ಆಸ್ಪತ್ರೆಯಲ್ಲಿ 8 ನೇ ತರಗತಿ ವಿದ್ಯಾರ್ಥಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ವಿದ್ಯಾಭ್ಯಾಸಕ್ಕೆಂದು ಬಂದ ಬಡ ವಿದ್ಯಾರ್ಥಿ ಮರದ ಕೊಂಬೆಯ ಮುರಿತಕ್ಕೆ ದಾರುಣವಾಗಿ ಸಾವಿಗೀಡಾಗಿದ್ದು, ಮಗುವನ್ನು ಕಳೆದುಕೊಂಡ ತಂದೆ-ತಾಯಿ ತಬ್ಬಲಿಯಾಗಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ.