ಚಿಕ್ಕನಾಯಕನಹಳ್ಳಿ :
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ ಬಾಬು ಜಗಜೀವನರಾಂಭವನ ನಿರ್ಮಾಣದ ಕುರಿತು ಸ್ಪಷ್ಟನೆ ನೀಡುತ್ತಾ ವಿವಾದಕ್ಕೆಡೆಯಾಗಿದ್ದ ಪ್ರಕರಣಕ್ಕೆ ತೆರೆ ಎಳೆದರು.
ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣದಲ್ಲಿ ಸುದ್ದಿಗಾರ ಪ್ರಶ್ನೆಗೆ ಉತ್ತರಿಸಿ ಬಾಬು ಜಗಜೀವನರಾಂ ಭವನ ನಿರ್ಮಾಣ ಕಾಲೇಜು ಪರಿಸರದಲ್ಲಿ ಮಾಡಲೇಬೇಕೆಂಬ ಹಠ ನಮ್ಮದಲ್ಲ. ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸುಮಾರು 5 ಎಕೆರೆ ಆವರಣದಲ್ಲಿ ಈ ಹಿಂದೆ ಕಟ್ಟಿರುವ ಕಟ್ಟಡಗಳು ಅವೈಜ್ಞಾನಿಕವಾಗಿದೆ. ಸರಿಯಾದ ಪ್ಲಾನ್ ಇಲ್ಲದೆ ಕಟ್ಟಿದ ಕಟ್ಟಡಗಳಿಂದ ಕಾಲೇಜಿಗೆ ಸೇರಿದ ಜಾಗ ಉಪಯೋಗಕ್ಕೆ ಬಾರದಂತಾಗಿ, ಅತಿಕ್ರಮಣಕ್ಕೆ ದಾರಿಮಾಡಿದಂತಾಗಿದೆ. ಇದನ್ನು ತಪ್ಪಿಸಿ ಕಾಲೇಜಿಗೆ ಸೇರಿದ ಜಾಗದ ಒಂದು ಕೊನೆಯಲ್ಲಿ ರೂ.3.5 ಕೋಟಿ ವೆಚ್ಚದಲ್ಲಿ ಭವ್ಯ ಜಗಜೀವನರಾಂ ಭವನಕ್ಕೆ ನಿರ್ಮಿಸಿ, ಅದಕ್ಕೆ ಬೇರೆ ಮಾರ್ಗವನ್ನೂ ಮಾಡಬಹುದೆಂಬ ಆಲೋಚನೆ ನಮ್ಮದಾಗಿತ್ತು ಅಷ್ಟೆ, ಇದರಿಂದ ಜಾಗ ಒತ್ತುವರಿ ಸಮಸ್ಯೆಗೆ ಪರಿಹಾರವಾಗಬಹುದೆಂಬ ನಮ್ಮ ಉದ್ದೇಶವಿತ್ತು, ಇದಕ್ಕಾಗಿ ಜಾಗ ನೋಡಿದ್ದನ್ನೆ ದೊಡ್ಡ ವಿವಾದವೆಬ್ಬಿಸಿ ಅಲ್ಲಿನ ಕೆಲ ಉಪನ್ಯಾಸಕರು ವಿದ್ಯಾರ್ಥಿಗಳ ಮೂಲಕ ಪ್ರತಿಭಟನೆ ಮಾಡಿಸಿದ್ದಾರೆ. ಅವರ ಹೇಳಿಕೆಯಂತೆ ಈಗ ಸಮುದಾಯ ಭವನದಲ್ಲಿ ವರ್ಷಾನುಕಾಲ ಮದುವೆ, ಮುಂಜಿ ಮಾಡಿಕೊಂಡು, ಡ್ರಂ, ನಗಾರಿ, ಬ್ಯಾಂಡ್‍ಸೆಟ್ ಬಾರಿಸಿಕೊಂಡು ಕೂರುವುದಿಲ್ಲವೆಂದರು.
ಕಾಲೇಜೊಳಗಿನ ಕೆಲವರು ವಿದ್ಯಾರ್ಥಿಗಳನ್ನು ಹಾದಿ ತಪ್ಪಿಸಿ, ವಿವಾದ ಸೃಷ್ಠಿಸಲಾಗಿದೆ. ಜನ ನಮ್ಮನ್ನು ಆಯ್ಕೆ ಮಾಡಿ ಜವಾಬ್ದಾರಿ ಹೊರೆಸಿದ್ದಾರೆ. ಯಾವುದನ್ನು ಮಾಡಬೇಕು, ಬೇಡ ಎನ್ನುವುದು ನಮಗೆ ಗೊತ್ತಿದೆ. ಸೋತಾಗ ನಾವು ಯಾವುದಕ್ಕೂ ಮೂಗು ತೂರಿಸದೆ ಸುಮ್ಮನಿರುತ್ತೇವೆ. ಆದರೆ ಈಗ ಯಾರು ಇದರಲ್ಲಿ ಭಾಗಿಗಳಾಗಿದ್ದಾರೋ ಅವರೆಲ್ಲರಿಗೂ ದಾರಿ ತೋರಿಸುತ್ತೇವೆ ಎಂದು ಖಡಕ್ಕಾಗಿ ತಿಳಿಸಿದರು.
ಈಚೆಗೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಫಲಿತಾಂಶದ ಬಗ್ಗೆ ಕಾಲೇಜು ಅಭಿವೃದ್ದಿ ಸಭೆಯಲ್ಲಿ ಮಾಹಿತಿ ಕೇಳಿದಾಗ ಪ್ರಾಂಶುಪಾಲರಾದಿಯಾಗಿ ಯಾರಿಗೂ ಮಾಹಿತಿಯಿರಲಿಲ್ಲ. ಪಟ್ಟುಹಿಡಿದು ಸಮಗ್ರ ಫಲಿತಾಂಶದ ಮಾಹಿತಿ ತರಿಸಿದಾಗ ಕಳೆದ ಸಾಲಿನಲ್ಲಿ ಬಿಕಾಂ ನಲ್ಲಿ ಕೇವಲ 6 ಮಂದಿ ತೇರ್ಗಡೆಯಾಗಿರುವ ಸತ್ಯ ಹೊರಬಿದ್ದಿತು. ಇಷ್ಟೊಂದು ಕಳಪೆಸಾಧನೆ ಕಂಡು ನನಗೆ ನಿಜಕ್ಕೂ ಸಿಟ್ಟುಬಂದಿದ್ದೂ ನಿಜ, ಅವರಿಗೆ ತರಾಟೆ ತೆಗೆದುಕೊಂಡಿದ್ದೂ ಸತ್ಯ. ಪ್ರತಿಯೊಬ್ಬ ಉಪನ್ಯಾಸಕರ ಸಬ್ಜೆಕ್ಟ್‍ವೈಸ್ ಫಲಿತಾಂಶದ ಮಾಹಿತಿ ಪಡೆಯುತ್ತಿದ್ದಂತೆ ಎಲ್ಲರ ಕಳಪೆ ಸಾಧನೆ ಬಟಬಯಲಾಯಿತು. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಆಸೆಯಿಂದ ಸರ್ಕಾರಿ ಕಾಲೇಜಿಗೆ ಬರುತ್ತಾರೆ. ಆದರೆ ಇಲ್ಲಿನ ಸಿಬ್ಬಂದಿ ತಮಗೆ ಬೇಕಾದ ಕೋರ್ಸಗಳನ್ನುಳಿಸಿಕೊಂಡು ಬಿಬಿಎಂ, ಮೇಜರ್ ಇಂಗ್ಲೀಷ್, ಇನ್ನೂ ಹಲವು ಕೋರ್ಸ್‍ಗಳನ್ನು ಕಾಲೇಜು ಸಮಿತಿಯ ಗಮನಕ್ಕೆ ತಾರದೆ ಮುಚ್ಚಿದ್ದಾರೆ. ಬಿಕಾಂನಿಂದಾಗಿ ಕಾಲೇಜು ಉಳಿದಿದೆ, ಈಗಿನ ಫಲಿತಾಂಶ ಮುಂದುವರೆದರೆ ಕಾಲೇಜು ಮುಚ್ಚಬೇಕಾಗುತ್ತದೆ. ನಾವು ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ವರ್ಗಾವಣೆ ನಿಬಂಧನೆಗಳು ಬದಲಾಗಿವೆ ಪ್ರಾಂಶುಪಾಲರಾದಿಯಾಗಿ ಸ್ಟಾಫ್ ಸಮೇತ ಎಲ್ಲರನ್ನೂ ಕಳಿಸುತ್ತೇವೆ ಕಾಲೇಜನ್ನು ಉಳಿಸುತ್ತೇವೆ ಎಂದರು.