ಮಧುಗಿರಿ :
ಇಲ್ಲಿಯವರೆವಿಗೂ ಕೊರೊನಾ ವೈರಸ್ ಹರಡದಂತೆ ಮಧುಗಿರಿ ಜನತೆ ಸರ್ಕಾರದ ನಿರ್ದೇಶನಗಳನ್ನು ಕಟ್ಟನಿಟ್ಟಾಗಿ ಪಾಲಿಸಿದಕ್ಕೆ ವೈಯಕ್ತಿಕವಾಗಿ ಧನ್ಯವಾದಗಳು ಎಂದು ಉಪವಿಭಾಗಾಧಿಕಾರಿ ಡಾ.ಕೆ.ನಂದಿನಿದೇವಿ ತಿಳಿಸಿದರು.
ಅವರು ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಮಧುಗಿರಿ ವಿದ್ಯಾಸಂಸ್ಥೆಯ ಖಜಾಂಚಿ ಎಂ.ಎಸ್.ಧರ್ಮವೀರ್‍ರವರ ನಿರ್ಮಾಪಕತ್ವದಲ್ಲಿ ‘ಸಿನಿಕ್ ಬ್ಯೂಟಿ ಆಫ್ ಮಧುಗಿರಿ ಡ್ಯೂರಿಂಗ್ ಕೋವಿಡ್-19 ಲಾಕ್‍ಡೌನ್’ಗೆ ಸಂಬಂಧಿಸಿದ 9 ನಿಮಿಷಗಳ ಸಾಕ್ಷ್ಯ ಚಿತ್ರವನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ವಿಶ್ವವಿಖ್ಯಾತ ಏಕಶಿಲಾ ಬೆಟ್ಟ ಹೊಂದಿರುವ ಮಧುಗಿರಿ ಬೆಟ್ಟದ ಬಗ್ಗೆ ವರ್ಣಿಸಲು ಸಮಯವೇ ಸಾಲದು, ಈ ಸಾಕ್ಷ್ಯ ಚಿತ್ರದಲ್ಲಿ ಮಧುಗಿರಿ ಗಡಿಭಾಗದಿಂದ ಆರಂಭಗೊಂಡು ಮಧುಗಿರಿ ಚೋಳೇನಹಳ್ಳಿ ಕೆರೆ, ಸಿದ್ದಾಪುರ ಕೆರೆ, ಬೈಪಾಸ್ ರಸ್ತೆ, ಸೂರ್ಯ ಮುಳಗುವ ವೇಳೆ ಮಧುಗಿರಿ ಏಕಶಿಲಾ ಬೆಟ್ಟದ ಪ್ರಕೃತಿ ಸೌಂದರ್ಯ, ಐತಿಹಾಸಿಕ ಶ್ರೀ ಮಲ್ಲೇಶ್ವರ ಸ್ವಾಮಿ ಮತ್ತು ವೆಂಕಟರಮಣ ಸ್ವಾಮಿ, ಪ್ರಮುಖ ರಸ್ತೆಗಳು, ನ್ಯಾಯಾಲದ ಸಂಕೀರ್ಣ, ಸಾಲಮರದ ತಿಮ್ಮಕನ ಸಸ್ಯೋದ್ಯಾನ, ಪೊಲೀಸ್ ಠಾಣೆ, ಜೈಲು, ಪುರಸಭೆ, ಸರ್ಕಾರಿ ಪ್ರೌಢಶಾಲೆ, ಡಿವೈಎಸ್‍ಪಿ ಕಛೇರಿ, ನಂದಿನಿ ಹಾಲಿನ ಶಿಥಲಿಕರಣಕೇಂದ್ರ, ಶ್ರೀ ದಂಡಿನ ಮಾರಮ್ಮನ ದೇವಾಲಯ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಉಪವಿಭಾಗಾಧಿಕಾರಿ ಕಛೇರಿ, ಇಂದಿರಾ ಕ್ಯಾಂಟಿನ್, ಕೋಟೆ ಕೊತ್ತಲು, ಶತಮಾನ ಕಂಡ ನ್ಯಾಯಾಲಯ, ಶ್ರೀರಾಮನ ದೇವಾಲಯ, ಬಸದಿ, ಮಸೀದಿ, ದಂಡೂರ ಬಾಗಿಲು, ತಾ.ಪಂ.ಕಛೇರಿ, ಕಲ್ಯಾಣಿಗಳು, ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ, ನಿರೀಕ್ಷಣಾ ಮಂದಿರ, ಜಿ.ಪಂ.ಕಛೇರಿ, ಕೆ.ಎಸ್.ಆರ್.ಟಿ.ಸಿ ಡಿಪೊ, ರಾಜೀವ್‍ಗಾಂಧಿ ಕ್ರೀಡಾಂಗಣ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಡಿಡಿಪಿಐ ಕಛೇರಿ, ಮಿನಿ ವಿಧಾನಸೌಧ, ಗುರುಭವನ, ಎಆರ್‍ಟಿಒ ಕಛೇರಿ, ಎಪಿಎಂಸಿ, ಮಧುಗಿರಿ ವಿದ್ಯಾಸಂಸ್ಥೆಯಡಿ ನಡೆಯುತ್ತಿರುವ ಶಿಕ್ಷಣ ಸಂಸ್ಥೆಗಳು, ಅಗ್ನಿಶಾಮಕಠಾಣೆಗಳನ್ನು ಪುಟ 2 ಕ್ಕೆ