ಮಧುಗಿರಿ :
ಕೊರೊನಾ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ ಅಗತ್ಯ ಮುನ್ನೆಚ್ಚೆರಿಕೆಯ ಕ್ರಮಗಳನ್ನು ಎಲ್ಲರೂ ಪಾಲಿಸಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ತುಮಕೂರು ನಗರಸಭಾ ಮಾಜಿ ಅಧ್ಯಕ್ಷ ಟಿ ಪಿ ಮಂಜುನಾಥ್ ತಿಳಿಸಿದರು.
ತಾಲ್ಲೂಕಿನ ದೊಡ್ಡೇರಿ ಹೋಬಳಿಯ ಚಂದ್ರಗಿರಿ ಗ್ರಾಪಂ ವ್ಯಾಪ್ತಿಯ ಸೋದೇನಹಳ್ಳಿ ಗ್ರಾಮದಲ್ಲಿ ಶನಿವಾರ ಕೆಎನ್‍ಆರ್ ಅಭಿಮಾನಿ ಬಳಗ ಹಾಗೂ ಆರ್ ಆರ್ ಅಭಿಮಾನಿ ಬಳಗದ ವತಿಯಿಂದ ಗ್ರಾಮದ 210 ಮನೆಗಳಿಗೆ ತರಕಾರಿ ಹಾಗೂ ದಿನಸಿ ಕಿಟ್‍ಗಳನ್ನು ವಿತರಿಸಿ ಮಾತನಾಡಿದರು.
ತುಮಕೂರು ನಗರದಲ್ಲಿ ಇಲ್ಲಿಯವರೆವಿಗೂ ಒಂದೂವರೆ ಲಕ್ಷ ಜನರಿಗೆ ನಿತ್ಯ ದಾಸೋಹ ನಡೆಸುತ್ತಿರುವ ಹಾಗೂ ಡಿಸಿಸಿ ಬ್ಯಾಂಕ್ ನಿಂದ ರೈತರ ಸಾಲವನ್ನು ಮನ್ನಾ ಮಾಡಿಸಿ ಕೆ ಎನ್ ರಾಜಣ್ಣನವರು ಬಂಗಾರದ ಮನುಷ್ಯ ಎನಿಸಿಕೊಂಡಿದ್ದಾರೆ. ಜಾತ್ಯಾತೀತ ಪಕ್ಷಾತೀತವಾಗಿ ರೈತರ ಕೂಲಿ ಕಾರ್ಮಿಕರ ನಿರ್ಗತಿಕರ ನೆರವಿಗೆ ಸಹಾಯ ಹಸ್ತ ಚಾಚುತ್ತಿರುವ ಕೆಎನ್‍ಆರ್ ಕುಟುಂಬ ವರ್ಗದವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಾರೆ.
ಕ್ರಿಬ್ಕೋ ನಿರ್ದೇಶಕ ಆರ್ ರಾಜೇಂದ್ರ ರವರು ಲಾಕ್ ಡೌನ್ ಹಿನ್ನೆಲೆಯಲ್ಲಿ ತಂದೆಯಂತೆಯೇ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದು ಜಿಲ್ಲೆ ಹಾಗೂ ತಾಲ್ಲೂಕಿನಾದ್ಯಂತ ಸುಮಾರು 50ಸಾವಿರಕ್ಕೂ ಹೆಚ್ಚು ಮಾಸ್ಕ್ ಹಾಗೂ ಸ್ಯಾನಿಟೈಜರ್ಗಳನ್ನು ಜನರಿಗೆ ವಿತರಿಸಿದ್ದಾರೆ. ಜಿಲ್ಲೆಯಲ್ಲಿ ಪ್ರತಿ ನಿತ್ಯ ಸುಮಾರು 1.5 ಲಕ್ಷದಷ್ಟು ಜನರಿಗೆ ಉಪಹಾರದ ವ್ಯವಸ್ಥೆ ಮಾಡುತ್ತಾ ಜನ ಸಾಮಾನ್ಯರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದಾರೆ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾರಾಯಣಗೌಡ, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀದೇವಿ , ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಶ್ರೀನಿವಾಸ್ ಮುಖಂಡರಾದ ಲಕ್ಷ್ಮೀನಾರಾಯಣ್, ಎ.ರಾಮದಾಸು, ಗುರುಮೂರ್ತಿ, ಗುತ್ತಿಗೆದಾರ ರಮಣರೆಡ್ಡಿ, ಆನಂತರೆಡ್ಡಿ, ಕಂಸಾನಹಳ್ಳಿ ಸಿದ್ದೇಶ್ ಹಾಗೂ ಇನ್ನಿತರರು ಇದ್ದರು.