ತುಮಕೂರು :
ಅಕ್ಕನೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ಹಾಡುಹಗಲೇ ತಮ್ಮ ಕೊಲೆ ಮಾಡಿರುವ ಘಟನೆ ತುಮಕೂರು ನಗರದ ಮಂಡಿಪೇಟೆಯ ಜಾಮಿಯಾ ಮಸೀದಿ ಬಳಿ ನಡೆದಿದೆ.
ದಾದಾಪೀರ್(55) ಕೊಲೆಯಾಗಿದ್ದು, ಮಧುಕುಮಾರ್ ಕೊಲೆಗೈದ ಆರೋಪಿ.
ಘಟನೆಯ ವಿವರ:
ಆರೋಪಿ ಮಧುಕುಮಾರ್ ಎಂಬಾತನ ಅಕ್ಕ ಲಕ್ಷ್ಮಿ ನಗರದ ಚರ್ಚ್ ವೃತ್ತದ ಬಳಿ ಕ್ಯಾಂಟೀನ್ ನಡೆಸುತ್ತಿದ್ದು, ಇಂದು ಮಧ್ಯಾಹ್ನ ಅಲ್ಲಿಗೆ ಬಂದ ದಾದಾಪೀರ್ ಬಿಸ್ಕೆಟ್ ಪ್ಯಾಕೆಟ್ ಹೇಳಿದ್ದಾನೆ. ಲಕ್ಷ್ಮಿಯವರು ಹಣ ಕೇಳಿದ್ದಾರೆ, ನಾನೇನು ದುಡ್ಡು ಪ್ರಿಂಟ್ ಮಾಡುತ್ತೇನೆಯೇ ಎಂದು ವ್ಯಂಗ್ಯವಾಗಿ ಮಾತನಾಡಿದ್ದಾನೆ ದಾದಾಪೀರ್. ಮಾತ್ರವಲ್ಲದೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಅಲ್ಲೇ ಕುಳಿತು ಟೀ ಕುಡಿಯುತ್ತಿದ್ದ ತಮ್ಮ ಮದು ದಾದಾಪೀರ್ ಗೆ ಸರಿಯಾಗಿ ಮಾತನಾಡುವಂತೆ ಹೇಳಿದ್ದಾನೆ. ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಸ್ಥಳೀಯರು ಆ ಜಗಳವನ್ನು ಬಿಡಿಸಿ ಕಳುಹಿಸಿದ್ದಾರೆ.
ಅಷ್ಟಕ್ಕೆ ಸುಮ್ಮನಾಗದ ಮೃತ ದಾದಾಪೀರ್ ಮಧು ಕುಮಾರನನ್ನು ಹಿಂಬಾಲಿಸಿಕೊಂಡು ಬಂದು ಜಾಮಿಯಾ ಮಸೀದಿಯ ಬಳಿ ಅಡ್ಡಗಟ್ಟಿ ಜಗಳ ತೆಗೆದಿದ್ದಾನೆ. ಅಲ್ಲೂ ಕೂಡ ಆವಾಜ್ ಹಾಕಿದ್ದಾನೆ. ಮಾತ್ರವಲ್ಲದೆ ಮಧುಕುಮಾರ್ ಕೆನ್ನೆಗೆ ಬಾಸುಂಡೆ ಬರುವ ಹಾಗೆ ಹೊಡೆದು, ಏನು ಹೊಡೆಯುತ್ತೀಯ ಎಂದು ಗಲಾಟೆ ಮಾಡಿದ್ದಾನೆ.
ಕೋಪದಲ್ಲಿ ಮಧುಕುಮಾರ್ ಅವನ ಕೆನ್ನೆಗೆ ಎರಡು ಏಟು ಹೊಡೆದಿದ್ದಾನೆ. ಸ್ಥಳದಲ್ಲಿ ಕುಸಿದುಬಿದ್ದ ದಾದಾಪೀರ್ ನಿಗೆ ಕಾಲಿನಿಂದ ಓದಿದ್ದಾನೆ. ನೋಡುನೋಡುತ್ತಿದ್ದಂತೆ ದಾದಾಪೀರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆರೋಪಿ ಮಧು ಕುಮಾರ್ ಅಲಿಯಾಸ್ ಮಧು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಸ್ಥಳಕ್ಕೆ ಡಿವೈಎಸ್ಪಿ ತಿಪ್ಪೇಸ್ವಾಮಿ, ಇನ್ಸ್ಪೆಕ್ಟರ್ ನವೀನ್, ಸಬ್ ಇನ್ಸ್ಪೆಕ್ಟರ್ ಮಂಜುನಾಥ್, ಹಾಗೂ ಕ್ರೈಂ ಸಿಬ್ಬಂದಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.