ತುಮಕೂರು:
ದೇಶದಲ್ಲಿ ಕೊರೊನಾ ಮಹಾಮಾರಿಯಿಂದಾಗಿ ಲಕ್ಷಾಂತರ ಜನರು ಸಾವೀಗೀಡಾಗುತ್ತಿವುದು ದುರದೃಷ್ಟಕರ ಸಂಗತಿ. ಇಂತಹ ಸಂದರ್ಭದಲ್ಲಿ ನೇಕಾರಿಕೆಯನ್ನೆ ನಂಬಿ ಬದುಕುತ್ತಿದ್ದವರ ಬದುಕು ದುಸ್ಥಿರವಾಗಿದೆ ಈ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪರವರು ನೇಕಾರರತ್ತ ಗಮನಹರಿಸಬೇಕೆಂದು ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ ಅಧ್ಯಕ್ಷ ಹಾಗೂ ತುರುವೇಕೆರೆ ಕ್ಷೇತ್ರದ ಮಾಜಿ ಶಾಸಕರಾದ ಎಂ.ಡಿ.ಲಕ್ಷ್ಮೀನಾರಾಯಣ್ ಮನವಿ ಮಾಡಿದ್ದಾರೆ.
ನಿನ್ನೆ ಬೆಳಿಗ್ಗೆ ಬೆಂಗಳೂರು ಯಲಹಂಕ ಕೋಗಿಲು ಅಗ್ರಹಾರದ ನೇಕಾರರ ಕಾಲೋನಿಯ ಲಕ್ಷ್ಮೀಪತಿ (60) ವರ್ಷದ ಬಡ ನೇಕಾರ ಕೊರೋನಾ ಖಾಯಿಲೆ ಹಾಗೂ ಮಾಡಿದ ಸಾಲ ತೀರಿಸಲಾಗದೆ ಶುಕ್ರವಾರ ಬೆಳಿಗ್ಗೆ ನೇಕಾರಿಕೆ ಮಾಡುತ್ತಿರುವ ಜಾಗದಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅನೇಕ ಬಾರಿ ತಮಗೆ ಹಾಗೂ ಜವಳಿ ಮಂತ್ರಿಗಳಿಗೆ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಪತ್ರ ನೀಡಿದ್ದೂ ಇದುವರೆವಿಗೂ ಆತ್ಮಹತ್ಯೆ ಮಾಡಿಕೊಂಡಿರುವ ಕುಟುಂಬಗಳಿಗೆ ಪರಿಹಾರ ನೀಡಿರುವುದಿಲ್ಲ. ಹಾಗೂ ನೇಕಾರರ ಸಮಸ್ಯೆಗಳನ್ನು ಪರಿಹಾರ ಮಾಡಿರುವುದಿಲ್ಲ. ತಕ್ಷಣ ನೇಕಾರರ ಸಮಸ್ಯೆಗಳನ್ನು ಬಗೆಹರಿಸಲು ಸಭೆ ಕರೆಯಬೇಕು. ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲಾ ನೇಕಾರರ ಕುಟುಂಬದವರಿಗೆ 10 ಲಕ್ಷ ಪರಿಹಾರ ನೀಡಲು ನೇಕಾರರ ಪರವಾಗಿ ಅಗ್ರಹ ಮಾಡುತ್ತೇನೆ ಎಂದಿದ್ದಾರೆ.