ಮಧುಗಿರಿ:
ಅಪ್ರಾಪ್ತೆ ಬಾಲಕಿಯೊಬ್ಬಳಿಗೆ ಅದೇ ಗ್ರಾಮದ ಯುವಕನೊಂದಿಗೆ ವಿವಾಹ ವಾಗಿರುವ ಘಟನೆ ಗುರುವಾರ ನಡೆದಿದೆ.
ತಾಲ್ಲೂಕಿನ ಐ ಡಿ ಹಳ್ಳಿ ಹೋಬಳಿಯ ಹೂವಿನಹಳ್ಳಿ ಗ್ರಾಮದ ಪ್ರಾಪ್ತ ಯುವಕ ನೊಬ್ಬ ಅದೇ ಗ್ರಾಮದ ವಾಸಿ ಇತ್ತೀಚೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯ ಕೊನೆಯ ವಿಷಯವನ್ನು ಬರೆಯಲು ಹೋಗಿದ್ದ ಬಾಲಕಿಯೊಬ್ಬಳು ಮನೆಗೆ ಹಿಂದಿರುಗದೆ ಅದೇ ಗ್ರಾಮದ ಯುವಕ ನೊಂದಿಗೆ ವಿವಾಹವಾಗಿದ್ದಾಳೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ಸಿಡಿಪಿಓ ಇಲಾಖೆಯ ಅಧಿಕಾರಿ ಮಿಡಗೇಶಿ ಪೊಲೀಸ್ ಠಾಣೆಯಲ್ಲಿ ಬಾಲ್ಯ ವಿವಾಹದಲ್ಲಿ ಭಾಗಿರುವವರ ವಿರುದ್ದ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.
(Visited 13 times, 1 visits today)