ಹುಳಿಯಾರು:
ಹುಳಿಯಾರಿನ ಪಾನಿಪುರಿ ಮಂಜಣ್ಣನ ಮಗ ಎಂ.ರಾಘವೇಂದ್ರ (23) ಹಾಗೂ ಬಿಜಾಪುರದ ಬಸವರಾಜು (22) ಎಂಬಿಬ್ಬರು ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಸಾವನ್ನಪ್ಪಿನ ಘಟನೆ ತಿಪಟೂರಿನ ಕೋಟನಾಯಕನಹಳ್ಳಿ ಬಳಿ ಭಾನುವಾರ ಸಂಜೆ ಜರುಗಿದೆ.
ಯಗಟಿಯಲ್ಲಿ ಮದುವೆ ಕಾರ್ಯಕ್ರಮಕ್ಕೆಂದು ಬೊಲೆರೋ ವಾಹನದಲ್ಲಿ ತಾಯಿ ಗೌರಮ್ಮ ಮತ್ತು ಸಂಬಂಧಿ ಸುಮಾ ಅವರೊಂದಿಗೆ ತೆರಳಿದ್ದರು. ಇವರು ಮದುವೆ ಮುಗಿಸಿಕೊಂಡು ಹಿಂತಿರುಗುತ್ತಿದ್ದಾಗ ತಿಪಟೂರಿನಲ್ಲಿ ಚಾಲಕ ಮುತ್ತು ತನ್ನ ಸಂಬಂಧಿ ಬಿಜಾಪುರದ ಬಸವರಾಜು ಅವರನ್ನು ಹತ್ತಿಸಿಕೊಂಡಿದ್ದಾರೆ.
ಈ ಐವರೂ ಹುಳಿಯಾರಿಗೆ ಬರುತ್ತಿರುವಾಗ ಕೋಟನಾಯಕನಹಳ್ಳಿ ಬಳಿ ಕೆಎಸ್ಆರ್ಟಿಸಿ ಬಸ್ಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಪರಿಣಾಮ ಹುಳಿಯಾರಿನ ಪಾನಿಪುರಿ ರಾಘವೇಂದ್ರ ಹಾಗೂ ಬಿಜಾಪುರದ ಬಸವರಾಜು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಾಲಕ ಮುತ್ತು ಪರಾರಿಯಾಗಿದ್ದು ಗೌರಮ್ಮ ಹಾಗೂ ಸುಮಾ ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು ತಿಪಟೂರಿನ ಜನರಲ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಪಘಾತದ ಬೀಕರತೆ ಹೇಗಿತ್ತೆಂದರೆ ಕೆಎಸ್ಆರ್ಟಿಸಿ ಬಸ್ ಮುಭಾಂಗ ಹಾಗೂ ಬೊಲೇರೋ ಕಾರಿನ ಮುಂಭಾಗ ನಜ್ಜುಗುಜ್ಜಾಗಿದೆ. ಅಲ್ಲದೆ ಮೃತರಿಬ್ಬರೂ ಬೊಲೇರೊದಲ್ಲಿ ಅಪ್ಪಚ್ಚಿಯಾಗಿದ್ದಾರೆ.