ತುಮಕೂರು:

     ಇಡೀ ಪ್ರಪಂಚದಲ್ಲಿ ಶೈಕ್ಷಣಿಕ ಸಂಶೋಧನೆಗಳಿಗೆ ಮನ್ನಣೆ ದೊರೆಯುತ್ತಿರುವ ಸಂದರ್ಭದಲ್ಲಿ ನಮ್ಮಲ್ಲಿಯೂ ಸಾಮಾಜಿಕ ಅಭಿವೃದ್ಧಿ ಕ್ಷೇತ್ರದ ಬಗ್ಗೆ ಸಂಶೋಧನೆ ನಡೆಯಬೇಕು. ಸಂಶೋಧನೆಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ, ಸಂಶೋಧನಾ ಲೇಖನಗಳನ್ನು ದಾಖಲಿಸುವ ಕೆಲಸಕ್ಕೆ ಉನ್ನತ ಶಿಕ್ಷಣ ಸಂಸ್ಥೆಗಳು ಮುಂದಾಗುವ ಅನಿವಾರ್ಯತೆ ಇಂದಿನದಾಗಿದೆ ಎಂದು ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಹೇ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ಜಿ.ಪರಮೇಶ್ವರ್ ಅಭಿಪ್ರಾಯಪಟಿದ್ದಾರೆ.

     ನಗರದ ಸಿದ್ದಾರ್ಥನಗರದಲ್ಲಿ ಶ್ರೀ ಸಿದ್ದಾರ್ಥ ಅಕಾಡೆಮಿಕ್ ಆಫ್ ಹೈಯರ್ ಎಜುಕೇಷನ್ (ಸಾಹೇ ವಿಶ್ವವಿದ್ಯಾಲಯ) ಏರ್ಪಡಿಸಿದ್ದ ಸಂಯೋಜಿತ ವಿಷಯಗಳ ಸಂಶೋಧನಾತ್ಮಕ ಪ್ರಕಟಣೆಗಳಾದ ‘ಸಾಹೇ ಜರ್ನಲ್ಸ್ ಆಪ್ ಇಂಟರ್ ಡಿಸಿಪ್ಲಿನರಿ ರೀಸರ್ಚ್ ಮತ್ತು ಜರ್ನಲ್ಸ್ ಆಪ್ ಆ್ಯಕ್ಸನ್ ರೀಸರ್ಚ್ ಆ್ಯಂಡ್ ಸೋಷಿಯಲ್ ಡೆವೆಲಪ್‍ಮೆಂಟ್’ ಬಿಡುಗಡೆ ಮಾಡಿ ಮಾತನಾಡಿದರು.

      ಇಡೀ ಪ್ರಂಚದಲ್ಲಿ ಅಂತರ ಶಿಕ್ಷಣ ಮತ್ತು ಸಂಶೋಧನೆಗಳು ನಡೆಯುತ್ತಿವೆ. ಸಮಾಜದಲ್ಲಿ ಸವiತೋಲದ ಶೈಕ್ಷಣಿಕ ಚಟುವಟಿಕೆಗಳು ಗರಿಗೆದರಿವೆ. ಸಂಶೋಧಕರ ಮಸಸ್ಥಿತಿಗಳು ಬದಲಾಗುತ್ತಿರುವ ಕಾಲಘಟ್ಟದಲ್ಲಿರುವುದರಿಂದ ಸಾಮಾಜಿಕ ಅಭಿವೃದ್ದಿ ಕುರಿತ ಗುಣಮಟ್ಟದ ಸಂಶೋಧನಾ ಲೇಖನಗಳು ಪ್ರಕಟವಾಗಬೇಕು. ಇವು ಸಮಾಜಕ್ಕೆ ದಾಖಲೆಗಳಾಗಿ ಉಪಯೋಗವಾಗುತ್ತವೆ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು. ವೈದ್ಯ ಪದವಿ ಮಾಡುತ್ತಿರುವ ವಿದ್ಯಾರ್ಥಿ ಸಾಮಾಜಿಕ ವಿಜ್ಞಾನದ ಮತ್ತೊಂದು ವಿಷಯವನ್ನು ಅಧ್ಯಯನ ಮಾಡುವುದರಿಂದ, ಆ ವಿದ್ಯಾರ್ಥಿಗೆ ಸಮಾಜದ ಒಳ-ಹೊರಗುಗಳ ಹೆಚ್ಚಿನ ಗ್ರಹಿಕೆ ಬರಯತ್ತದೆ. ಆಗ ವೃತ್ತಿಪರತೆಯ ಗುಣಮಟ್ಟ ಚೆನ್ನಾಗಿರುತ್ತದೆ. ಇದರಿಂದ ಸಾಮಾಜಿಕ ಸಂಶೋಧನೆಗಳಿಗೆ ಹೆಚ್ಚು ಮಹತ್ವ ಬರುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

     ಉನ್ನತ ಅಧ್ಯಯನ ಕೈಗೊಳ್ಳುವ ವಿದ್ಯಾರ್ಥಿಗಳು ಪ್ರತಿನಿತ್ಯ ಗ್ರಂಥಾಲಯಕ್ಕೆ ಹೋಗಿ ಸಂಶೋಧನಾ ಪ್ರಕಟಣೆಗಳನ್ನು ಮರಾಮರ್ಶೆ ಮಾಡಬೇಕು. ಅವುಗಳ ಆಧಾರದ ಮೇಲೆ ಸಾಮಾಜಿ ವಿಷಯಗಳನ್ನು ಕುರಿತ ಅಧ್ಯಯನ ಮಾಡಿ, ವರದಿ ಸಿದ್ದಪಡಿಸಲು ಸಹಕಾರಿಯಾಗುತ್ತದೆ. ಈ ಹಿನ್ನಲೆಯಲ್ಲಿ ಸಿದ್ದಾರ್ಥ ಸಂಸ್ಥೆ ಸಹ
ಸಾಮಾಜಿಕ ಸಂಶೋಧನ ಪ್ರಕಟಣೆಗಳನ್ನು ಹೊರತರುತ್ತಿದೆ. ಇದು ಅಧ್ಯಯನ ಶೀಲ ಸಂಶೋಧಕರಿಗೆ ಮತ್ತು ಉನ್ನತ ಅಧ್ಯಯನ ಮಾಡುವ ವಿಧ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಕುಲಾಧಿಪತಿ ಡಾ.ಜಿ.ಪರಮೇಶ್ವರ್ ನುಡಿದರು.

    ಬೆಂಗಳೂರಿನ ಐಐಎಸ್ಸಿಯ ಪ್ರಾಧ್ಯಾಪಕ ಡಾ.ಸುಬ್ರಮಣ್ಯನ್ ವೆಬಿನಾರ್ ಮೂಲಕ ಮಾತನಾಡಿ, ಈಗ ಡಿಜಿಟಲ್ ಸಂಶೋಧನೆಯತ್ತ ಸಂಶೋಧಕರು ಮುಖ ಮಾಡಿರುವುದರಿಂದ ಉನ್ನತ ಶಿಕ್ಷಣ ಅದರಲ್ಲೂ ವೃದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ರಂಗದಲ್ಲಿರುವ ಪ್ರಾಧ್ಯಾಪಕರು ಆರೋಗ್ಯ, ಶಿಕ್ಷಣ ಮತ್ತು ಕೃಷಿಯಂತ ಗಂಭೀರ ವಿಷಯಗಳ ಕುರಿತು ಅಧ್ಯಯನ ಶೀಲರಾಗುವ ಅನಿವಾರ್ಯತೆ ಇದೆ. ಇದು ಅಂತರ ಶಿಕ್ಷಣದಿಂದ ಸಾಧ್ಯವಾಗಿದೆ ಎಂದರು.

     ಸಾಹೇ ಉಪಕುಲಪತಿ ಡಾ.ಕೆ.ಬಾಲಕೃಷ್ಣ ಪಿ ಶೆಟ್ಟಿ ಮಾತನಾಡಿ, ಸಂಶೋದನಗಳತ್ತ ಮುಖಮಾಡಿದಾ ಕೆಲವು ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರು.

      ಶ್ರೀ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶು ಪಾಲರಾದ ಡಾ. ಎಮ್.ಎಸ್.ರವಿಪ್ರಕಾಶ್, ಸಾಹೇ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಎಂ.ಝಡ್. ಕುರಿಯನ್, ಸಂಶೋಧನಾ ಪತ್ರಿಕೆಯ ಸಂಪಾದಕರಾದ ಡಾ.ಸಿ. ರಂಗರಾಜ್, ಡಾ.ಜಯಪ್ರಕಾಶ್, ಪ್ರಾಧ್ಯಾಪಕರಾದ ಡಾ. ಎಂ.ಸಿ.ಚಂದ್ರಶೇಖರ್, ಡಾ.ಸುಮಾ,ಡಾ.ಸುನಿಲ್.ಕೆ ಹಾಗೂ ಸಂಪಾಕೀಯ ವಿಭಾಗದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು. 

(Visited 10 times, 1 visits today)