ಕೊರಟಗೆರೆ:

      ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ತಾಲೂಕಿನ ನಾಲ್ಕು ಗ್ರಾಪಂಗಳು ಆಯ್ಕೆಯಾಗಿದ್ದು, ಗ್ರಾಪಂಯ ಪ್ರತಿಯೊಂದು ಮನೆಯಿಂದ ಒಣ ಕಸ ಮತ್ತು ಹಸಿಕಸ ಸಂಗ್ರಹಸಿ ಅದನ್ನ ಬಹುಗ್ರಾಮ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಿರ್ವಹಣೆ ಮಾಡಲಾಗುವುದು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್ ಎಂದು ತಿಳಿಸಿದರು.

      ತಾಲೂಕಿನ ಹೊಳವನಹಳ್ಳಿ ಗ್ರಾಪಂಯಲ್ಲಿ ನೂತವಾಗಿ ನಿರ್ಮಾಣವಾಗುತ್ತಿರುವ ಕಸವಿಲೇವಾರಿ ಘಟಕಕ್ಕೆ ಭೇಟಿ ನೀಡಿ ಮಾತನಾಡಿದರು.

      ಸ್ವಚ್ಛ ಭಾರತ ಮಿಷನ್ ಪರಿಕಲ್ಪನೆಯಿಂದ ಗ್ರಾಮ ಗಳಲ್ಲಿ ಸಂಗ್ರಹವಾಗುವ ಒಣ ಮತ್ತು ಹಸಿ ತ್ಯಾಜ್ಯವನ್ನ ಒಂದೆಡೆ ಸಂಗ್ರಹಿಸಿ ವಿಲೇವಾರಿ ಮಾಡುವುದು ಮತ್ತು ಸಂಸ್ಕರಿಸಿ ಬೇರೆಡೆ ಸಾಗಿಸುವ ಉದ್ದೇಶದಿಂದ ಹೊಳವನಹಳ್ಳಿ ಗ್ರಾಪಂಯ ಹೊರವಲಯದಲ್ಲಿ ನಿರ್ಮಾಣವಾಗುತ್ತಿರುವ ಘನತ್ಯಾಜ್ಯ ಸಂಗ್ರಹ ನಿರ್ವಹಣೆ ಘಟಕವೊಂದನ್ನ ಸ್ಥಾಪಿಸಲಾಗುತ್ತಿದೆ.

       ರಾಜ್ಯದಲ್ಲಿ ಕಸಮುಕ್ತ ಮಾಡುವ ಸಲುವಾಗಿ ಗ್ರಾಪಂಗಳಲ್ಲಿ ಕಸವಿಲೇವಾರಿ ಘಟಕವನ್ನ ಜಾರಿಗೆ ತಂದಿದ್ದು, ಒಂದು ಕಸವಿಲೇವಾರಿ ಘಟಕ ನಿರ್ಮಾಣಕ್ಕಾಗಿ ಸರಕಾರ 20 ಲಕ್ಷ ರೂ ಘೋಷಣೆ ಮಾಡಲಾಗಿದ್ದು, ಇದರಲ್ಲಿ ಪ್ರತಿ ಪಂಚಾಯಿತಿಗೆ 10 ಲಕ್ಷವನ್ನ ಬಿಡುಗಡೆಗೊಳಿಸಲಾಗಿದೆ. ಹೊಳವನಹಳ್ಳಿ ಕಸವಿಲೇವಾರಿ ಘಟಕದ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು ಅದಷ್ಟು ಬೇಗ ಕಾಮಗಾರಿಯನ್ನ ಪೂರ್ಣಗೊಳಿಸುವಂತೆ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು.

      ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಲುವರಾಜು ಮಾತನಾಡಿ ಪತ್ರಿ ಗ್ರಾಮಗಳನ್ನ ಸ್ವಚ್ಛಗೊಳಿಸಲು ರಾಜ್ಯ ಸರಕಾರ ತಂದಿರುವ ಘನತ್ಯಾಜ್ಯ ಸಂಗ್ರಹ ನಿರ್ವಹಣೆ ಘಟಕವನ್ನ ಹೊಳವನಹಳ್ಳಿ ಗ್ರಾಪಂಯಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ರಾಜ್ಯ ಸರಕಾರ ಈಗಾಗಲೇ ಮೊದಲ ಹಂತದಲ್ಲಿ ಹತ್ತು ಲಕ್ಷ ರೂಗಳನ್ನ ಬಿಡುಗಡೆ ಮಾಡಲಾಗಿದೆ. ಕಸವಿಲೇವಾರಿ ಮಾಡಲು ಪ್ರತಿ ಮನೆಗೂ ಕಸದ ಬುಟ್ಟಿ, ಕಸವನ್ನ ಸಾಗಿಸಲು ವಾಹನ, ಕಸ ಸಂಸ್ಕರಣೆ ಮಾಡುವ ಶೇಡ್ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು ಇದೇ ವೇಳೆ ಕರ ವಸೂಲಿಗಾರ ಜಯರಾಮ್, ಸಂಜೀವ್ ಇದ್ದರು.

(Visited 8 times, 1 visits today)