ತುರುವೇಕೆರೆ:
ಪಟ್ಟಣ ಪಂಚಾಯ್ತಿ ಮೀಸಲಾತಿ ಪ್ರಕಟಗೊಂಡ ಬೆನ್ನಲೇ ಪಟ್ಟಣ ಪಂಚಾಯಿತಿ ಸದಸ್ಯರಲ್ಲಿ ರಾಜಕೀಯ ಲೆಕ್ಕಾಚಾರ ಚುರುಕುಗೊಂಡಿದ್ದು, ಇದೇ ಮೊದಲ ಬಾರಿಗೆ ಬಿಜೆಪಿ ಪಕ್ಷ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಮುಡಿಗೇರಿಸಿಕೊಳ್ಳುವ ಸಾಧ್ಯತೆ ನಿಚ್ಚಳವಾಗಿದೆ.
ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳೆರಡು ಮೀಸಲಾತಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಒಟ್ಟು 14 ಪಟ್ಟಣ ಪಂಚಾಯಿತಿ ಸದಸ್ಯರನ್ನು ಒಳಗೊಂಡಿರುವ ತುರುವೇಕೆರೆ ಪಟ್ಟಣ ಪಂಚಾಯ್ತಿ ಸ್ಥಾನಗಳಲ್ಲಿ, ಪಟ್ಟಣ ಪಂಚಾಯ್ತಿಯ ಅಧಿಕಾರದ ಆಡಳಿತ ಹಿಡಿಯಲು 8 ಸದಸ್ಯರ ಬಹುಮತ ಅಗತ್ಯವಿದೆ. ಇದರಲ್ಲಿ ಬಿಜೆಪಿ 6ರಲ್ಲಿ ಜಯಭೇರಿ ಭಾರಿಸಿ ದೊಡ್ಡ ಪಕ್ಷವಾಗಿ ಹೊರಹುಮ್ಮಿದ್ದು, ಜೆಡಿಎಸ್ 5ರಲ್ಲಿ, ಕಾಂಗ್ರೇಸ್ ಕೇವಲ 2ರಲ್ಲಿ, ಪಕ್ಷೇತರ ಒಬ್ಬರು ಸದಸ್ಯರಿದ್ದಾರೆ.
12 ನೇ ವಾರ್ಡ್‍ನಲ್ಲಿ ಜಯದ ನಗೆ ಬೀರಿರುವ ಪಕ್ಷೇತರ ಸದಸ್ಯರಾದ ಟಿ.ಕೆ. ಪ್ರಭಾಕರ್ ಈಗಾಗಲೇ ಶಾಸಕ ಮಸಾಲ ಜಯರಾಮ್‍ರವರ ನೇತೃತ್ವದಲ್ಲಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಮ್ಮುಖದಲ್ಲಿ ಈಗಾಗಲೇ ಬಿಜೆಪಿ ಸೇರ್ಪಡೆಗೊಂಡಿರುವುದು ಒಂದೆಡೆಯಾದರೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಸ್ಥಳೀಯ ಶಾಸಕ ಮಸಾಲ ಜಯರಾಮ್‍ರವರ ಒಂದು ಮತವಿರುವುದರಿಂದ ಬಿಜೆಪಿ ನಿರಾಯಾಸವಾಗಿ ಅಧಿಕಾರ ಗದ್ದುಗೆ ಏರುವುದರಲ್ಲಿ ಅನುಮಾನವಿಲ್ಲ.
ಅಕಾಕ್ಷಿಗಳು ಹೆಚ್ಚು:
ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಸಾಮಾನ್ಯ ವರ್ಗಕ್ಕೆ ಮೀಸಲಾದ ಬೆನ್ನಲೇ ಬಿಜೆಪಿ ಸದಸ್ಯರ ನಡುವೇ ಪೈಪೋಟಿ ಹೆಚ್ಚಾಗಿದ್ದು, 13ನೇ ವಾರ್ಡ್‍ನ ಸಮಾನ್ಯ ಮಹಿಳಾ ಸದಸ್ಯೆ ಆಶಾರಾಣಿ, 7 ನೇ ವಾರ್ಡ್‍ನ ಓಬಿಸಿ ಸದಸ್ಯರಾದ ಅಂಜನ್ ಕುಮಾರ್, 5 ನೇ ವಾರ್ಡ್‍ನ ಕೆ.ರವಿ, 12 ನೇ ವಾರ್ಡ್‍ನ ಟಿ.ಕೆ.ಪ್ರಭಾಕರ್, 6 ನೇ ವಾರ್ಡ್‍ನ ಪರಿಷಿಷ್ಠ ಜಾತಿ ಮೀಸಲು ಸದಸ್ಯರಾದ ಚಿದಾನಂದ್ ಇವರುಗಳ ನಡುವೇ ತೀವ್ರ ಪೈಪೋಟಿ ಏರ್ಪಟ್ಟಿದ್ದರೆ, ಇನ್ನುಳಿದ ಸದಸ್ಯರಾದ 3 ನೇ ವಾರ್ಡ್‍ನ ಪರಿಷಿಷ್ಠ ಜಾತಿ ಮಹಿಳೆ ಮೀಸಲು ಸದಸ್ಯೆ ಸೌಬಾಗ್ಯ, 1 ನೇ ವಾರ್ಡ್‍ನ ಪರಿಷಿಷ್ಠ ಪಂಗಡ ಮಹಿಳಾ ಮೀಸಲು ಸದಸ್ಯೆ ಶೀಲಾ ಇವರೀರ್ವರ ನಡುವೆ ಉಪಾದ್ಯಕ್ಷ ಸ್ಥಾನಕ್ಕೆ ಪೈಪೋಟಿ ನೆಡೆಯುವ ಸಾಧ್ಯತೆಯಿದೆ.
ಪಟ್ಟಣ ಪಂಚಾಯ್ತಿ ಇತಿಹಾಸದಲ್ಲಿ ಬಿಜೆಪಿ ಸದಸ್ಯರು ಗೆಲ್ಲುವ ಮಾತೇ ಮೌನವಾಗಿದ್ದ, ಸಂದರ್ಭದಲ್ಲಿ ಶಾಸಕ ಮಸಾಲ ಜಯರಾಮ್‍ರವರ ರಾಜಕೀಯ ಚಾಣಾಕ್ಷತನದಿಂದ, ಹಗಲು ರಾತ್ರಿ ಎನ್ನದೆ ಚುನಾವಣೆ ಅಂತ್ಯದವರೆವಿಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಶಾಸಕರ ತಿರ್ಮಾನ ಅಂತಿಮವಾಗಿದ್ದು. ಶಾಸಕರು ಯಾರನ್ನು ಸೂಚಿಸುತ್ತಾರೆ ಎಂಬುದು ಸ್ಪರ್ಧಾಕಾಂಕ್ಷಿಗಳಲ್ಲಿ ತಳಮಳ ಮನೆಮಾಡಿದೆ.