ಗ್ರಾಮದ ಸೊಸೈಟಿ ಪಕ್ಕದಲ್ಲಿರುವ ಹೂವಿನ ತೋಟದಲ್ಲಿ ಮುಚ್ಚಿನಿಂದ ಕೊಚ್ಚಿಹಾಕಲಾಗಿದ್ದ ಶವ ಪತ್ತೆಯಾಗಿದೆ. ಮೃತನನ್ನು ಹರೀಶ್​ ಎಂದು ಗುರುತಿಸಲಾಗಿದೆ. ಪ್ರೀತಿಸಿ ಮದುವೆಯಾಗಿದ್ದ ಹರೀಶ್​ನನ್ನು  ಜಾತಿ  ಕಾರಣದಿಂದಲೇ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಹರೀಶ್​ ಸ್ನೇಹಿತನೇ ಆದ ನವೀನ್​ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಚನ್ನರಾಯಪಟ್ಟಣ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಕರಣ ಹಿನ್ನೆಲೆ:

      ಬಿದಲೂರು ಗ್ರಾಮದ ಹರೀಶ ಹಾಗೂ ನಲ್ಲೂರು ಗ್ರಾಮದ ನವೀನ್​ ಇಬ್ಬರೂ ಸ್ನೇಹಿತರು. ನವೀನ್​ನ ಅಕ್ಕಳನ್ನು ಹರೀಶ್ ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಯ ವಿಷಯ ಹುಡುಗಿ ಮನೆಗೆ ತಿಳಿಯಿತು. ಅನ್ಯ ಜಾತಿ ಹುಡುಗನಾಗಿದ್ದರಿಂದ ಮದುವೆಗೆ ಹುಡುಗಿಯ ಮನೆಯವರು ಒಪ್ಪಲಿಲ್ಲ. ಎಂಟು ತಿಂಗಳ ಹಿಂದೆ ಇಬ್ಬರೂ ವಿಶ್ವನಾಥಪುರ ಪೊಲೀಸ್ ಠಾಣೆಯಲ್ಲಿ ಮದುವೆಯಾಗಿದ್ದರು. ಆಗಿದ್ದನ್ನೆಲ್ಲ ಮರೆತಿದ್ದೇವೆ ಎಂದು ಪುಸಲಾಯಿಸಿ ಅಜ್ಞಾತ ಸ್ಥಳಕ್ಕೆ ಕರೆಸಿಕೊಂಡ ನವೀನ್​ ಹರೀಶ್​ನನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. 

 

(Visited 28 times, 1 visits today)