ತುಮಕೂರು:

      ಕಳೆದ ಮೂವತ್ತು ವರ್ಷಗಳಿಂದ ಕಟ್ಟಡ ನಿರ್ಮಾಣ ಮಾಡುತ್ತಾ ಬಂದಿದೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಎಷ್ಟು ಬೆಳೆಯುತ್ತಿದ್ದೇಯೊ, ಅಷ್ಟೇ ತುಮಕೂರು ಬೆಳೆಯುತ್ತಿರುವುದು ನಮ್ಮ ಹೆಮ್ಮೆಯ ವಿಷಯವಾಗಿದೆ. ನಮ್ಮ ಉತ್ತಮ ಸಮಾಜ ಮತ್ತು ಪರಿಸರ ನಿರ್ಮಾಣ ಮಾಡುವುದರಲ್ಲಿ ತನ್ನದೇ ಆದ ಕನಸನ್ನು ನನಸು ಮಾಡುವುದೇ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್‍ನ ಉದ್ದೇಶವಾಗಿದೆ ಎಂದು ತುಮಕೂರಿನ ಶ್ರೀಸಿದ್ಧಗಂಗೆ ಶ್ರೀಕ್ಷೇತ್ರದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ನುಡಿದರು.

      ತುಮಕೂರಿನ ಅಮರಜ್ಯೋತಿ ನಗರದ ಸಾಯಿಬಾಬ ಮಂದಿರದ ಹಿಂಭಾಗದಲ್ಲಿರುವ ಈಡಿಗರ ಲೇಡಿಸ್ ಹಾಸ್ಟೆಲ್ ಕಾಂಪ್ಲೆಕ್ಸ್‍ನ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ವತಿಯಿಂದ ಪಾದಪೂಜೆ ಹಾಗೂ ವೆಬ್‍ಸೈಟ್, ವೀಡಿಯೋ ಕ್ಲಿಪ್ ಬಿಡುಗಡೆ ಸಮಾರಂಭವನ್ನು ಅ.30 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

      ಕಾರ್ಯಕ್ರಮವನ್ನು ಉದ್ಘಾಟಿಸಿ ಶ್ರೀ ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡುತ್ತಾ ಮಾಧ್ಯಮ ವರ್ಗದವರಿಗೆ ಕನಸು- ನನಸು ಮಾಡುವ ಉದ್ದೇಶದಿಂದ ಗುಣಮಟ್ಟದ ಮನೆಗಳನ್ನು ದೀರ್ಘಕಾಲ ಬಾಳಿಕೆ ಬರುತ್ತದೆ ಎಂದು ಅರ್ಥಪೂರ್ಣವಾಗಿ ವಿವರಿಸಿದರು.

      ಕಾರ್ಯಕ್ರಮದಲ್ಲಿ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ಮಾಲೀಕರಾದ ಕೆ. ಮಂಜುನಾಥ್, ಮಾಜಿ ಸಚಿವರಾದ ಸೊಗಡುಶಿವಣ್ಣ, ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಎನ್. ನರಸಿಂಹಮೂರ್ತಿ, ನಿವೃತ್ತ ಡಿ.ಸಿ.ಎಂ. ಸೌತ್ ವೆಸ್ಟ್ರನ್ ರೈಲ್ವೆ ಬಿ.ಹನುಮಂತಪ್ಪ, ಉದ್ಯಮಿ ಎಸ್.ಆರ್.ನಟರಾಜು, ನಿರ್ಮಾಲಾ ಆಟೋ ಎಲೆಕ್ಟ್ರಿಕಲ್ಸ್ ಮಣಿಕಂಠನ್, ನಂದಿನಿ ಮಿಲ್ಕ್ ಡೈರಿ ಕುಮಾರ ಸ್ವಾಮಿ, ಪ್ರದೀಪ್, ವೆಂಕಟೇಶ್, ನರಸಿಂಹರಾಜು, ರವಿಕುಮಾರ್, ರಾಮಮೂರ್ತಿ, ಆದರ್ಶ ಹಾಗೂ ಕೃಷ್ಣ ಬಿಲ್ಡರ್ಸ್ ಅಂಡ್ ಡೆವೆಲಪರ್ಸ್ ಕುಟುಂಬ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

(Visited 7 times, 1 visits today)
FacebookTwitterInstagramFacebook MessengerEmailSMSTelegramWhatsapp
FacebookTwitterInstagramFacebook MessengerEmailSMSTelegramWhatsapp