ಮಧುಗಿರಿ:

     ನಡುರಾತ್ರಿ ಕೊಟ್ಟಿಗೆಗೆ ಬೆಂಕಿಬಿದ್ದು, 2 ಜಾನುವಾರುಗಳು ಸಜೀವ ದಹನವಾಗಿರುವ ಘಟನೆ ತಾಲೂಕಿನ ವೀರಣ್ಣನ ತಾಂಡದಲ್ಲಿ ನಡೆದಿದ್ದು, ವಿಮೆ ಮಾಡಿಸದ ರೈತ ನಷ್ಟದಿಂದ ಕಂಗಾಲಾಗಿದ್ದಾನೆ.

      ತಾಲೂಕಿನ ವೀರಣ್ಣನತಾಂಡದ ಹನು ಮಂತರಾಯಪ್ಪ ಎಂಬುವವರಿಗೆ ಸೇರಿದ ಮಿಶ್ರತಳಿ ಹಸು ಹಾಗೂ ಎತ್ತು ಬೆಂಕಿಗೆ ಆಹುತಿಯಾಗಿದ್ದು, ಸುಟ್ಟು ಕರಕಲಾಗಿವೆ. ಬೆಂಕಿಗೆ ಕಾರಣ ತಿಳಿದು ಬಂದಿಲ್ಲ. ಆದರೆ ರಾಸುಗಳಿಗೆ ವಿಮೆ ಮಾಡಿಸಿದ ಕಾರಣ ಹೆಚ್ಚಿನ ಪರಿಹಾರ ಸಿಗುವುದಿಲ್ಲ. ಆದ್ದರಿಂದ ತಾಲೂಕಿನಲ್ಲಿನ ಹೈನುಗಾರರು ತಮ್ಮ ರಾಸುಗಳಿಗೆ ಶೀಘ್ರವಾಗಿ ವಿಮೆ ಮಾಡಿಸಬೇಕು ಎಂದು ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ನಾಗಭೂಷಣ್ ತಿಳಿಸಿದ್ದಾರೆ.

      ತಾಲೂಕಿನಲ್ಲಿ ಈಗಾಗಲೇ 2019-20 ನೇ ಸಾಲಿನಲ್ಲಿ 154 ಡೇರಿಗಳಿಂದ 9700 ಜಾನುವಾರುಗಳಿಗೆ ವಿಮೆ ಮಾಡಿದ್ದು, 2020-21 ನೇ ಸಾಲಿನಲ್ಲಿ 63 ಡೇರಿಗಳಿಂದ 6 ಸಾವಿರ ರಾಸುಗಳಿಗೆ ವಿಮೆ ಸೌಲಭ್ಯವನ್ನು ಕಲ್ಪಿಸಲಾಗಿದೆ. ಪ.ಜಾತಿ, ಪ.ಪಂಗಡದ ರೈತರಿಗೆ ಉಚಿತವಾಗಿ ವಿಮೆ ಮಾಡಿಸಬಹುದಾಗಿದ್ದು, ನೇರವಾಗಿ ಡೇರಿ ಕಾರ್ಯದರ್ಶಿಗಳನ್ನು ಸಂಪರ್ಕಿಸಿ ತಮ್ಮ ರಾಸುಗಳಿಗೆ ವಿಮೆ ಮಾಡಿಸಿಕೊಂಡು ಆಕಸ್ಮಿಕ ಅವಘಡ ಹಾಗೂ ಆರ್ಥಿಕ ನಷ್ಟದಿಂದ ಪಾರಾಗಬಹುದು ಎಂದು ತುಮುಲ್ ನಿರ್ದೇಶಕ ಕೊಂಡವಾಡಿ ಚಂದ್ರಶೇಖರ್ ರೈತರಲ್ಲಿ ಮನವಿ ಮಾಡಿದ್ದಾರೆ.

(Visited 9 times, 1 visits today)