ಮಧುಗಿರಿ :
ಗ್ರಾಮ ಪಂಚಾಯಿತ್ ಚುನಾವಣೆಯಲ್ಲಿ ಕಾರ್ಯಕರ್ತರುಗಳಿಗೆ ಅಧಿಕಾರ ಕೊಡಿಸುವ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಮುಖಂಡರುಗಳಿಗೆ ಆಪೇಕ್ಸ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕೆ.ಎನ್.ರಾಜಣ್ಣ ತಿಳಿಸಿರು.
ಮಧುಗಿರಿಯ ತಮ್ಮ ನಿವಾಸದಲ್ಲಿ ಕಳೆದ 4 ದಿನಗಳಿಂದ ಸತತವಾಗಿ ಹೋಬಳಿವಾರು ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕಾಂಗ್ರೆಸ್ ಮುಖಂಡರುಗಳೊಡನೆ ಸರಣಿ ಸಭೆಗಳನ್ನು ನಡೆಸಿ ಕಾರ್ಯಕರ್ತರ ಮತ್ತು ಮುಖಂಡರಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಚುನಾವಣೆಯ ಮಹತ್ವವನ್ನು ತಿಳಿಸಿದರು.
ಈ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯಾರ್ಥಿಗಳಾಗಲು ಸಾಕಷ್ಟು ಪೈಪೋಟಿಗಳಿದ್ದು, ಸಂಸ್ಥೆಯ ಮುಖಂಡರುಗಳು ಪರಸ್ವರ ವಿಶ್ವಾಸದಿಂದ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನಾನು ಯಾರ ಪರವು ಇಲ್ಲ ವಿರುದ್ಧವು ಇಲ್ಲ ಎಲ್ಲಾ ಅಭ್ಯರ್ಥಿಗಳು ಒಂದೆ ಎಲ್ಲರೂ ನನಗೆ ಬೇಕು ಕಾರ್ಯಕರ್ತರನ್ನು ಮುಖಂಡರುಗಳನ್ನಾಗಿ ಮಾಡುವುದರಿಂದ ಮುಂಬರುವ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ವಿಧಾನ ಸಭೆ ಲೋಕಸಭೆ ಚುನಾವಣೆಗೆ ಭದ್ರ ಮುನಾದಿಯಾಗುತ್ತದೆ ಎಂದರು.
ರಾಜಕಾರಣದಲ್ಲಿ ಯಾರು ಶತ್ರುಗಳಲ್ಲ ಮಿತ್ರರು ಅಲ್ಲ ನಿರಂತರ ಹೊಂದಾಣಿಕೆ ಪ್ರವೃತ್ತಿ ಬೆಳೆಸಿಕೊಳ್ಳಿ ಎಂದು ಮುಖಂಡರುಗಳಿಗೆ ಸಲಹೆ ನೀಡಿದರು, ಸಿದ್ದರಮಯ್ಯ ಆಡಳಿತದಲ್ಲಿ ಜಾರಿಗೆ ತಂದ ಅನ್ನಭಾಗ್ಯ ಯೋಜನೆ, ಹಾಲು ಉತ್ಪಾದಕರಿಗೆ 5 ರೂಪಾಯಿ ಪ್ರೋತ್ಸಾಹ ಧನ, ವಸತಿ ನಿಲಯಗಳ ಸ್ಥಾಪನೆ, ಕ್ಷಿರ ಭಾಗ್ಯ ಯೋಜನೆಗಳಿಗೆ ಬಗ್ಗೆ ಮತದಾರರಿಗೆ ಮನದಟ್ಟು ಮಾಡಿಕೊಡುವಂತೆ ಮಾಡಿ ದರು.
2023 ರ ವಿಧಾನ ಸಭಾ ಚುನಾವನೆಯಲ್ಲಿ ಕಾಂಗ್ರೇಸ್ ಪಕ್ಷ ಅಧಿಕಾರಕ್ಕೆ ಬರುವುದು ಖಂಡಿತ ಅದೇ ರೀತಿ ಶಾಸಕನಾಗಿ ಸಹಕಾರ ಸಚಿವನಾಗುವುದು ನಿಚ್ಚಿತ ಎಂದು ಭವಿಷ್ಯ ನುಡಿದರು. ಅದೇ ರೀತಿ ಮುಂದಿನ 2028 ರ ಚುನಾವಣೆಯಲ್ಲಿ ಸ್ಪರ್ದಿಸುವುದಿಲ್ಲ ಎಂದರು. ಈ ಕ್ಷೇತ್ರದಲ್ಲಿ ಸೋತ ಅನುಭವವು ಆಗಿದೆ. ಗೆದ್ದ ಅನುಭವವು ಆಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಜಿ.ಜೆ.ರಾಜಣ್ಣ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎಂ.ಎಸ್.ಮಲ್ಲಿಕಾರ್ಜುನಯ್ಯ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಪಿ.ಸಿ.ಕೃಷ್ಣಾರೆಡ್ಡಿ, ತಾ.ಪಂ. ಸದಸ್ಯ ಜಿ.ಡಿ.ವೆಂಕಟೇಶ್, ಮುಂಖರುಗಳಾದ ಆಧಿನಾರಾಯಣರೆಡ್ಡಿ ಮತ್ತಿತರರು ಹಾಜರಿದ್ದರು.