ಕೊರಟಗೆರೆ:
ರಾಜ್ಯದಲ್ಲಿ ಈಗಾಗಲೇ ಗ್ರಾ.ಪಂ.ಯ ಚುನಾವಣೆ ನೆಡೆಯುತ್ತಿದ್ದು ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳು ಕೊರೊನ ಇರುವ ಕಾರಣ ಹೆಚ್ಚು ಜನ ಸೇರಿಸಿಕೊಳ್ಳದೇ ತಮ್ಮ ಮತವನ್ನ ಕೇಳಬೇಕು. ಯಾವುದೇ ಅಹಿತಕರ ಘಟನೆ ನೆಡೆಯದಂತೆ ಚುನಾವಣೆಗೆ ಸಹಕರಿಸಬೇಕು ಎಂದು ಕೊರಟಗೆರೆ ಎಎಸ್‍ಐ ಯೋಗಿಶ್ ತಿಳಿಸಿದರು.
ತಾಲೂಕಿನ ಹೊಳವನಹಳ್ಳಿ, ಅಕ್ಕಿರಾಂಪುರ ಗ್ರಾಪಂ ಚುನಾವಣೆಯ ನಾಮಪತ್ರ ಹಿಂಪಡೆಯುವ ಹಾಗೂ ಅಭ್ಯರ್ಥಿಗಳಿಗೆ ತುಮಕೂರು ಜಿಲ್ಲಾ ಪೊಲೀಸ್ ಹಾಗೂ ಕೊರಟಗೆರೆ ಪೊಲೀಸ್ ಠಾಣೆವತಿಯಿಂದ ಅಪರಾದ ತಡೆ ಮಾಸಾಚರಣೆ ಡಿ.2020 ಹಾಗೂ ಗ್ರಾಪಂ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನ ಮಕ್ಕಳು ದ್ವಿಚಕ್ರ ವಾಹನ ಹಾಗೂ ಕಾರುಗಳನ್ನ ಚಲಾಯಿಸುತ್ತಿರುವುದು ಕಾನೂನಿನಲ್ಲಿ ಅವಕಾಶವಿಲ್ಲ. ದೊಡ್ಡವರು ಮಕ್ಕಳ ಕೈಯಲ್ಲಿ ವಾಹನ ನೀಡಬಾರದು. ಬೈಕ್ ವಾಹನ ಸವಾರರು ಕಡ್ಡಾಯವಾಗಿ ಪರವಾನಿಗೆ ಹಾಗೂ ಹೆಲ್ಮಟ್ ಬಳಸಿಕೊಂಡು ಸಂಚಾರ ಮಾಡಬೇಕು. ಇದರ ಜೊತೆಗೆ ಬೈಕ್ ಸೇರಿದಂತೆ ಯಾವುದೇ ವಾಹನವಾದರೂ ಸಹ ಕಡ್ಡಾಯವಾಗಿ ಇನ್ಷರೇನ್ಸ್ ಮಾಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಸ್ಥಳೀಯ ಗ್ರಾಪಂ ಚುನಾವಣೆಯಲ್ಲಿ ಯಾರು ಕೂಡ ದೋಷದ ರಾಜಕಾರಣ ಮಾಡದೇ ಸೋದರತೆಯಿಂದ ಚುನಾವಣೆಯಲ್ಲಿ ಭಾಗವಹಿಸಿ. ನಮ್ಮ ಗ್ರಾಮ ಚುನಾವಣೆ ಸಮಯದಲ್ಲಿ ಶಾಂತಿಯುತ ಮತದಾನ ಮಾಡುವುದರ ಮೂಲಕ ರಾಜ್ಯಕ್ಕೆ ಮಾದರಿಯಾಗಬೇಕು. ಇದರ ಜೊತೆಗೆ ಸಾರ್ವಜನಿಕರಿಗೆ ಕಾನೂನಿನ ಬಗ್ಗೆ ತಿಳಿದಿರಬೇಕು. ಯಾರು ಕೂಡ ಕಾನೂನನ್ನ ಉಲಂಘನೆ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೆ ಸಂದರ್ಭದಲ್ಲಿ ಹೊಳವನಹಳ್ಳಿ ಪೊಲೀಸ್ ಅಧಿಕಾರಿ ಅಕ್ರಂ ಪಾಷ ಮುಖಂಡರಾದ ಜಯರಾಮ್, ರಾಮಕೃಷ್ಣ, ಮರುಡಪ್ಪ, ಮೋಹನ್ ಕುಮಾರ್, ಶಿವಣ್ಣ, ನಾಗರಾಜು, ದೇವರಾಜು, ರಂಗಶಾಮಯ್ಯ, ಮಂಜುನಾಥ್, ಕುಂಭಿ ನರಸಿಂಹಯ್ಯ, ಶಶಿಕುಮಾರ್ ಸೇರಿದಂತೆ ಇತರರು ಇದ್ದರು.