ಮಧುಗಿರಿ:
ಇಲ್ಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಕ್ಕೆ ಇಪ್ಪತ್ತು ಸ್ಥಾನಗಳ ನಿರ್ದೇಶಕ ಸ್ಥಾನಗಳಿಗೆ ಮಂಗಳವಾರ ಚುನಾವಣೆ ನಡೆದು 980 ಮತದಾರರ ಪೈಕಿ 956 ಶಿಕ್ಷಕರು ಮತ ಚಲಾವಣೆ ಮಾಡಿ ಶೇ97.55ರಷ್ಟು ಮತದಾನವಾಗಿದೆ.
ಈ ಮತದಾನವು ಮಧುಗಿರಿ ಶಕ್ತಿ ಕೇಂದ್ರ ಮಿನಿವಿಧಾನಸೌಧ ಮುಂಭಾಗದಲ್ಲಿರುವ ಸರ್ಕಾರಿ ಪ್ರೌಢಶಾಲೆ 3ಕೊಠಡಿಗಳಲ್ಲಿ ನಡೆಯಿತು. ಮೊದಲ ಕೊಠಡಿಯಲ್ಲಿ 336-328,ಎರಡನೇ ಕೊಠಡಿಯಲ್ಲಿ 314-304ಮತ್ತು ಮೂರನೇ ಕೊಠಡಿಯಲ್ಲಿ 330-324 ಮತಗಳು ಚಲಾವಣೆಗೊಂಡವು. ಉಳಿದ ಇಪ್ಪತ್ತಾರು ಮತದಾರರಲ್ಲಿ 1ಮತ ಡಬ್ಬಲ್ ಎಂಟ್ರಿಯಾಗಿದ್ದು ಮೂವರು ಶಿಕ್ಷಕರು ಬಡ್ತಿ ಹೊಂದಿ ಹೈಸ್ಕೂಲ್ ಹೋದ ಕಾರಣ ಇನ್ನೂ ಇಪ್ಪತ್ತು ಶಿಕ್ಷಕರು ಮಾತ್ರ ಮತದಾನದಿಂದ ದೂರ ಉಳಿದರು.
20 ಸ್ಥಾನಗಳ ಪೈಕಿ 13ಶಿಕ್ಷಕರು 7ಶಿಕ್ಷಕರು ಆಯ್ಕೆಯಾಗಬೇಕು,ಪ್ರತೇಕ ಮತಪತ್ರಗಳನ್ನು ಶಿಕ್ಷಕ ಶಿಕ್ಷಕಿಯರ ಆಯ್ಕೆಗೆ ಉಪಯೋಗಿಸಲಾಯಿತು. ಗುರು ಮಿತ್ರ ಮತ್ತು ಶಿಕ್ಷಕರ ಸ್ನೇಹ ಬಳಗದ ಎರಡೂ ತಂಡಗಳಿಂದ ತಲಾ ಇಪ್ಪತ್ತು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. 8ಪಕ್ಷೇತರರಲ್ಲಿ ಏಕ್ಯೆಕ ಮಹಿಳಾ ಅಭ್ಯರ್ಥಿ ಸ್ಪರ್ಧಿಸಿದ್ದರು.
ಬೆಳಿಗ್ಗೆ 8ಗಂಟೆಯಿಂದ ಮಧ್ಯಾಹ್ನ 4ಗಂಟೆವರೆಗೂ ಮತದಾನ ನಡೆದು 2ಗುಂಪಿನವರು ಮತ್ತು ಪಕ್ಷೇತರರು ಮತದಾರರನ್ನು ಕೊನೆ ಕ್ಷಣದವರೆಗೂ ಮತಯಾಚಿಸಿದ್ದು ಕಂಡುಬಂತು. ಸಂಘದ ಅಧ್ಯಕ್ಷ ವೆಂಕಟರಂಗಾರೆಡ್ಡಿ ಹಾಗೂ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ.ಹೆಚ್.ವೆಂಕಟೇಶಯ್ಯ ತಮ್ಮ ಬೆಂಬಲಿಗರನ್ನು ಗೆಲ್ಲಿಸಲು ತರೇವಾರಿ ಚುನಾವಣೆ ತಂತ್ರಗಳನ್ನು ಹೆಣೆಯುತ್ತಿದ್ದು ನೋಡಬಹುದಾಗಿತ್ತು.
ಈ ಚುನಾವಣೆ ಸಾರ್ವತ್ರಿಕ ಚುನಾವಣೆ ಗಿಂತಲೂ ಭಿನ್ನವಾಗಿಯೇ ನಡೆಯಿತು. ಬೆಳಗಿನಿಂದಲೇ ತಿಂಡಿ ಮಧ್ಯಾಹ್ನ ಊಟ ಹೆಸರುಬೇಳೆ ಪಾಯಸ ಹಾಗೂ ಫ್ಲೆಕ್ಸ್ ಗಳ ಭರಾಟೆ ಎದ್ದು ಕಂಡು ಬಂದಿತು. ಚುನಾವಣೆ ನಡುವೆಯೂ ರಕ್ತದಾನ ಶಿಬಿರದಲ್ಲಿ ಡಿಡಿಪಿಐ ಕಚೇರಿ ಮುಂದೆ ಇದ್ದ ವಾಹನದಲ್ಲಿ ಹಲವು ಶಿಕ್ಷಕರು ರಕ್ತದಾನ ಮಾಡಿ ಗಮನ ಸೆಳೆದರು.
ಬಾಲ್ಯ ವ್ಯವಸ್ಥೆಯಲ್ಲಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಪ್ರಾಥಮಿಕ ಶಾಲಾ ಶಿಕ್ಷಕರು ಹಾದಿ ತಪ್ಪಿದರೆ ತಮ್ಮದೇ ಸಂಘದ ಚುನಾವಣೆಯಲ್ಲಿ ತಂಡೋಪತಂಡವಾಗಿ ಮತ ಚಲಾಯಿಸಿ ಬಹಳಷ್ಟು ಶಿಕ್ಷಕರು 1ಸಾವಿರ ರೂ ಗಳನ್ನು ಪಡೆದು ಮತ ದಾನ ಮಾಡಿದುದರ ಬಗ್ಗೆ “ಟಾಕ್ ಆಫ್ ದಿ ಟೌನ್’ ಆಗಿತ್ತು. ಇದಲ್ಲದೆ ಉಡುಗೊರೆಗಳನ್ನು ಪಡೆದ ಬಗ್ಗೆ ಸಾರ್ವಜನಿಕ ಚರ್ಚೆಗಳು ಸಹಾ ನಡೆದವು.ಉತ್ತಮ ಸಮಾಜದ ಬುನಾದಿ ಆಗಬೇಕಾಗಿರುವ ಶಿಕ್ಷಕರ ವರ್ಗವೇ ದಾರಿತಪ್ಪಿ ನಡೆದರೆ ಸಾಮಾನ್ಯರ ಪಾಡೇನು ಐವತ್ತು ಸಾವಿರ ಸಂಭಳ ಪಡೆಯುವ ಶಿಕ್ಷಕ ಒಂದು ಸಾವಿರ ರೂಗಳಿಗೆ ಮಾರಟವಾದರೆ ಎಂತಹ ಪರಿಸ್ಥಿತಿ ಇದು ಪ್ರಜಾಪ್ರಭುತ್ವಕ್ಕೆ ಮಾರಕ ಎಂಬ ಮಾತುಗಳು ಕೇಳಿ ಬಂದು ಶತಾಯಗತಾಯ ಈ ಚುನಾವಣೆ ಗೆಲ್ಲಲು ಸುಮಾರು 9ಲಕ್ಷ ಖರ್ಚುಮಾಡಿರುವುದು ಫಲಿತಾಂಶದ ಬಗ್ಗೆ ಕೂತೂಹಲ ಮೂಡಿಸಿದೆ.
ಗುರುವಿನ ಸ್ಥಾನವನ್ನು ಪಡೆದಿರುವ ಶಿಕ್ಷಕರು ಇಂಥ ಚುನಾವಣೆ ಯಾರೂ ಕಂಡರಿಯದ ರೀತಿ ನಡೆದು ವಿಧಾನಸಭಾ ಚುನಾವಣೆಯನ್ನು ಮೀರಿಸುವಂತಿತ್ತು .ಈಗ ಆಡಳಿತ ನಡೆಸುತ್ತಿದ್ದ ಗುರುಮಿತ್ರ ತಂಡದವರು ತಮ್ಮ ಕಣ್ಮುಂದೆ ಇರುವ ಗುರುಭವನ ಅಭಿವೃದ್ಧಿಯನ್ನು ತೋರಿಸಿ ಮತ ಯಾಚಿಸಿದರೆ, ಶಿಕ್ಷಕರ ಸ್ನೇಹ ಬಳಗ ದವರು ಅಧಿಕಾರವಿಲ್ಲದೆ ನೀಡಲಾದ ಸೇವೆಗಳನ್ನು ಹೇಳಿ ಮತ ಯಾಚಿಸಿದ್ದು ಕಂಡುಬಂತು.
ಶಾಸಕರನ್ನೆ ಸೋಲಿಸುವ ತಾಕತ್ತು ಪ್ರಾಥಮಿಕ ಶಾಲಾ ಶಿಕ್ಷಕರಿಗಿದೆ ಹೀಗೆಂದವರು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ,ಸರ್ಕಾರಿ ನೌಕರರ ಪ್ಯೆಕಿ ಶೇ80ರಷ್ಟು ಸಮಸ್ಯೆ ಗಳಿರುವುದು ಪ್ರಾಥಮಿಕ ಶಾಲ ಶಿಕ್ಷಕರದ್ದು ಇದನ್ನು ಹೇಗೆ ಬಗೆಹರಿಸುತ್ತಿರಿ ಎಂಬ ಶಾಸಕರುಗಳು ತಮ್ಮ ಬಳಿ ಹೇಳಿದ ಬಗ್ಗೆ ಮಧುಗಿರಿಯಲ್ಲಿ ಪ್ರಸ್ತಾಪಿಸಿ ಶಾಸಕರು ಶಿಕ್ಷಕರ ಸಮಸ್ಯೆಗಳನ್ನು ಬಗೆಹರಿಸದ್ದಿದ್ದರೆ ನಮ್ಮನೆ ಬದಲಿಸುತ್ತಾರೆಂಬ ಮಾತು ಈ ಚುನಾವಣೆಯಲ್ಲಿ ಯಾರಿಗೆ ಸಿಹಿಯಾಗಿಸಿದ್ದಾರೋ ನೋಡಬೇಕು.