ಹುಳಿಯಾರು:

     ಚಲಿಸುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾಗಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ಯರೇಕಟ್ಟೆ-ಬೆಳಗುಲಿ ರಸ್ತೆಯಲ್ಲಿ ನಡೆದಿದೆ.

      ಮೃತ ವ್ಯಕ್ತಿಯನ್ನು ಹುಳಿಯಾರು ಹೋಬಳಿಯ ಅವಳಗೆರೆ ಭೋವಿ ಕಾಲೋನಿಯ ಮಹದೇವ್ (22) ಎಂದು ಗುರುತಿಸಲಾಗಿದೆ. ಈತ ಯರೇಕಟ್ಟೆಯಿಂದ ಸ್ವಗ್ರಾಮಕ್ಕೆ ಟ್ರ್ಯಾಕ್ಟರ್‍ನಲ್ಲಿ ಹೋಗುವಾಗ ಮಾರ್ಗಮಧ್ಯೆ ಯರೇಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿಯಾಗಿ ತೆಂಗಿನ ತೋಟಕ್ಕೆ ಉರುಳಿ ಬಿದಿದೆ.

     ಪರಿಣಾಮ ಮಹದೇವ್ ಟ್ರ್ಯಾಕ್ಟರ್‍ನ ಕೆಳಗೆ ಸಿಕ್ಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಹಂದನಕೆರೆ ಪಿಎಸ್‍ಐ ಶಿವಪ್ಪ ಭೇಟಿ ನೀಡಿ ಘಟನೆಯ ವಿವರ ಪಡೆದುಕೊಂಡಿದ್ದಾರೆ. ಹಂದನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(Visited 7 times, 1 visits today)