ಮಧುಗಿರಿ :

      ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಬ್ರಿಗೇಡ್ ತಂಡದ ಯುವಕರಿಂದ ಸ್ವಯಂ ಪ್ರೇರಣೆಯಿಂದ ದೇಗುಲ ಸ್ವಚ್ಚತಾ ಕಾರ್ಯ ನಡೆಸಿದರು. ‌

     ಪುರಾತನ ಐತಿಹಾಸಿಕ ಶ್ರೀ ವೆಂಕಟರಮಣ ಸ್ವಾಮಿ ದೇಗುಲದ ಗೋಪುರ ಹಾಗು ಪ್ರಭಾವಳಿಗಳಲ್ಲಿ ಗಿಡಗಳು ಬೆಳೆದು ದೇಗುಲದ ಕಟ್ಟಡಕ್ಕೆ ಹಾನಿಯಾಗುತಿತ್ತು, ಈ ವಿಚಾರವನ್ನು ಯುವ ಬ್ರಿಗೇಡ್ ಗಮನಕ್ಕೆ ಅರ್ಚಕ ಅನಂತಭಟ್ ತಿಳಿಸಿದ್ದು ಮಧುಗಿರಿ , ಪಾವಗಡ , ತುಮಕೂರು, ಹಾಗು ಕೊರಟಗೆರೆ ಯ ಕೆಲ ಸ್ನೇಹಿತರು ಸೇರಿ ದೇಗುಲಕ್ಕೆ ಹಾನಿಯುಂಟು ಮಾಡುತ್ತಿದ್ದ ಗಿಡಗಳನ್ನು ತೆಗೆದು ಸ್ವಚ್ಚಗೊಳಿಸಿದರು. ನಂತರ ಯುವಬ್ರಿಗೇಡ್ ನ ಸಂಚಾಲಕ ಅಭಿಷೇಕ್ ಜಯರಾಂ ಮಾತನಾಡಿ, ಇಂತಹ ಸಾಮಾಜಿಕ ಕಾರ್ಯಗಳಿಗೆ ನಮಗೆ ಚಕ್ರವರ್ತಿ ಸೂಲಿಬೆಲೆ ಸ್ಪೂರ್ತಿಯಾಗಿದ್ದಾರೆ. ಇಂತಹ ಅನೇಕ ಸಮಾಜಮುಖಿ ಕಾರ್ಯಗಳನ್ನು ಜಿಲ್ಲಾದ್ಯಂತ ಮಾಡುತ್ತಿದ್ದು ಸಂಘಟನೆಯು ಜಿಲ್ಲೆಯಲ್ಲಿ ಬೆಳೆಯುತ್ತಿದೆ. 

      ಈಗ ಮಧುಗಿರಿಯಲ್ಲಿ ಕಲ್ಯಾಣಿಗಳ ಹಾಗೂ ಪುರಾತನ ದೇಗುಲಗಳ ಸ್ವಚ್ಚತೆಗೆ ಆದ್ಯತೆ ನೀಡಿದ್ದು ಅರ್ಚಕರ ಮನವಿ ಮೇರೆಗೆ ಡಿ.25 ರಂದು ವೈಕುಂಠ ಏಕಾದಶಿ ಕಾರ್ಯಕ್ರಮವಿದ್ದು ಈ ದೇಗುಲ ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿದ್ದೇವೆ ಎಂದರು. ತಾಲೂಕಿನಲ್ಲಿ ಯಾವುದೇ ಐತಿಹಾಸಿಕ ಸ್ಥಳಗಳಿದ್ದರೆ 8762613106 ನಂಬರಿಗೆ ವಾಟ್ಸಾಪ್ ಮಾಡುವ ಮೂಲಕ ಸ್ವಚ್ಚತೆಗೆ ಸಹಕರಿಸುವಂತೆ ತಿಳಿಸದರು. ಸ್ವಚ್ಚತಾ ಕಾರ್ಯದಲ್ಲಿ ಅಭಿಜಿತ್, ಹರ್ಷ, ಅಭಿಷೇಕ್, ರಾಕೇಶ್, ತೇಜಕುಮಾರ್, ಮಧುಸೂದನ್, ಚಿದನ್ ಕುಮಾರ್, ಶಶಿಧರ್ ಭಾಗವಹಿಸಿದ್ದರು.

 

(Visited 9 times, 1 visits today)