ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನಾದ್ಯಂತ ವಿವಿಧ ಭಾಗಗಳಲ್ಲಿ 30ಕ್ಕೂ ಹೆಚ್ಚು ದಾಳಿ ಮಾಡಿ, 2 ಲಕ್ಷದ 85ಸಾವಿರದ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ನಿರೀಕ್ಷಕ ಹೆಚ್.ಟಿ.ಗಂಗರಾಜು ತಿಳಿಸಿದ್ದಾರೆ.
ಅಬಕಾರಿ ಉಪ ಆಯುಕ್ತರು, ಅಬಕಾರಿ ಉಪಅಧೀಕ್ಷಕರ ಮಾರ್ಗದರ್ಶನದಲ್ಲಿ ದಾಳಿ ಪ್ರಕರಣ ಕೈಗೊಂಡಿದ್ದು ದಾಳಿ ವೇಳೆ 22 ಪ್ರಕರಣಗಳನ್ನು ದಾಖಲಿಸಿ, 7 ದ್ವಿಚಕ್ರ ವಾಹನಗಳು, 65 ಲೀಟರ್ 430 ಎಂ.ಎಲ್ ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಕ್ರಮ ಮದ್ಯ ಮಾರಾಟ, ಸರಬರಾಜು, ಸಂಗ್ರಹಣೆ, ಶೇಖರಣೆ ಮತ್ತು ಪಾರ್ಟಿಗಳನ್ನು ಆಯೋಜಿಸಿ ಮದ್ಯ ಹಂಚಿಕೆ ಮಾಡುವುದನ್ನು ಗಮನದಲ್ಲಿಟ್ಟುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅಬಕಾರಿ ಅಕ್ರಮಗಳು ಕಂಡುಬಂದರೆ ಕಂಟ್ರೋಲ್ ರೂಂ.ನಂ. 08133-295288, ಅಬಕಾರಿ ನಿರೀಕ್ಷಕ ಮೊ.ನಂ.7829493094 ನಂಬರ್ ಗೆ ಮಾಹಿತಿ ನೀಡಲು ತಿಳಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ಉಪ ಅಧೀಕ್ಷಕರಾದ ಜಿ.ವಿ.ವಿಜಯ್ ಕುಮಾರ್, ಅಬಕಾರಿ ನಿರೀಕ್ಷಕ ಹೆಚ್.ಟಿ.ಗಂಗರಾಜು, ಅಬಕಾರಿ ರಕ್ಷಕರಾದ ಕೃಷ್ಣಮೂರ್ತಿ, ರಾಜಕುಮಾರ, ಅಜನಾಳ, ಪರಶುರಾಮಯ್ಯ, ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ಮಂಜುನಾಥ, ಚಿದಾನಂದ ಹಾಜರಿದ್ದರು.