ತುಮಕೂರು :
ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಸೇರಿದ ಸಾರಿಗೆ ವಾಹನದ 2 ಪ್ರತ್ಯೇಕ ಅಪಘಾತಗಳಲ್ಲಿ ಮೃತಪಟ್ಟ ಇಬ್ಬರು ವ್ಯಕ್ತಿಗಳ ವಾರಸುದಾರರಿಗೆ ತಲಾ 2.35 ಲಕ್ಷ ರೂ.ಗಳ ಚೆಕ್‍ನ್ನು ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಆರ್.ಬಸವರಾಜು ಪರಿಹಾರ ಚೆಕ್‍ನ್ನು ಇಂದು ವಿತರಿಸಿದರು.
ಅಪಘಾತ 1:-
ತುಮಕೂರು-ಗೂಳರಿವೆ ಮಾರ್ಗದಲ್ಲಿ ಜಿ.ಎಸ್.ಎಸ್. ಭವನದ ಬಸ್ ನಿಲುಗಡೆ ಬಳಿ 2013ರ ಮಾರ್ಚ್ 12ರಂದು ಸಂಜೆ 6-30 ಗಂಟೆ ಸಮಯದಲ್ಲಿ ಬಸ್(ವಾಹನ ಸಂಖ್ಯೆ: ಕೆಎ-06-ಎಫ್-819) ಇಳಿಯಲು ಪ್ರಯತ್ನಿಸಿ ಕೆಳಕ್ಕೆ ಬಿದ್ದು ತಲೆಗೆ ಪೆಟ್ಟಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ದಿಃ 13/03/13ರಂದು ಮೃತಪಟ್ಟಿರುತ್ತಾರೆ. ಮೃತ ಮಹಿಳೆಯ ಪತಿ ನರಸಿಂಹಯ್ಯ ಅವರಿಗೆ 2.35 ಲಕ್ಷ ರೂ.ಗಳ ಪರಿಹಾರದ ಚೆಕ್‍ನ್ನು ವಿತರಿಸಲಾಯಿತು.
ಅಪಘಾತ 2:-
ಅದೇ ರೀತಿ ಶಿರಾ-ಬೆಂಗಳೂರು ಮಾರ್ಗದಲ್ಲಿ ರಾಷ್ಟ್ರೀಯ ಹೆದ್ದಾರಿ 4ರಲ್ಲಿರುವ ಊರುಕೆರೆ ಮುಂದೆ ಇರುವ ಹೆಬ್ಬಾಕ ಕೆರೆ ಬಳಿ 2013ರ ಫೆಬ್ರುವರಿ 1ರಂದು ಬಸ್(ಶಿರಾ ಘಟಕದ ವಾಹನ ಸಂಖ್ಯೆ: ಕೆಎ-06-ಎಫ್-824) ಮುಂದಿನ ಬಾಗಿಲಲ್ಲಿ ನಿಂತು ಪ್ರಯಾಣಿಸುತ್ತಿದ್ದ ಚನ್ನೇಗೌಡ ಎಂಬ ವ್ಯಕ್ತಿ ಕೆಳಕ್ಕೆ ಬಿದ್ದು ತಲೆಗೆ ಪೆಟ್ಟಾಗಿದ್ದರಿಂದ ಗಾಯಾಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಾಯಾಳುವು ಚಿಕಿತ್ಸೆಯಲ್ಲಿರುವಾಗ ಅದೇ ದಿನ ರಾತ್ರಿ ಮೃತಪಟ್ಟಿರುತ್ತಾರೆ. ಮೃತನ ಪತ್ನಿ ಇಂದ್ರಮ್ಮ ಅವರಿಗೆ 2.35 ಲಕ್ಷ ರೂ.ಗಳ ಪರಿಹಾರದ ಚೆಕ್‍ನ್ನು ವಿತರಿಸಲಾಯಿತು.