ಮಧುಗಿರಿ :
ಮಾರ್ಚ್ 2020 ರಲ್ಲಿ ಐತಿಹಾಸಿಕ ಶ್ರೀ ದಂಡಿನ ಮಾರ ಮ್ಮನ ಜಾತ್ರೆಯ ವೇಳೆ ಕರೋನಾ ಕಾರಣ ದಿಂದಾಗಿ ಉತ್ಸವ ಮೂರ್ತಿಯನ್ನು ಗುಡಿದುಂಬಿಸುವಲ್ಲಿ ಸಾಧ್ಯವಾಗದ ಕಾರಣ ಪ್ರಸ್ತುತ ಧಾರ್ಮಿಕ ಚಟುವಟಿಕೆಗಳ ನ್ನು ನಡೆಸಿ ಜನ ಸಂದಣೆ ಸೇರದಂತೆ ಗುಡಿದುಂಬಿಸಲು ಕ್ರಮ ಕೈಗೊಳ್ಳುವಂತೆ ಉಪವಿಭಾಗಾಧಿಕಾರಿ ಹಾಗೂ ದೇವಸ್ಥಾನದ ಆಡಳಿತಾಧಿಕಾರಿಯಾಗಿರುವ ಸೋಮಪ್ಪ ಕಡಕೋಳ ತಿಳಿಸಿದರು.
ಮಂಗಳವಾರದಂದು ಪುರಸಭಾ ಸದಸ್ಯರುಗಳ ನಿಯೋಗ 2021 ರ ಜಾತ್ರೆ ಸಮೀಪಿಸುತ್ತಿದ್ದು, ಉತ್ಸವ ಮೂರ್ತಿ ದೇವಸ್ಥಾನದಲ್ಲಿಯೇ ಇರುವುದರಿಂದ ಊರ ಪ್ರವೇಶದ ನಂತರವಷ್ಟೆ ಜಾತ್ರೆ ನಡೆಸಲು ಸಾಧ್ಯ ಇದಕ್ಕೂ ಮುನ್ನ ಚಿನಕವಜ್ರ ಗ್ರಾಮಕ್ಕೆ ಉತ್ಸವ ಮೂರ್ತಿಯನ್ನು ತೆಗೆದುಕೊಂಡು ಹೋಗಿ ಮಡಲಕ್ಕಿ ತುಂಬಿಸಿಕೊಂಡ ನಂತರ ಗುಡಿದುಂಬಿಸಬೇಕೆಂದು ಜಾತ್ರೆಯ ನಿಯಮಗಳನ್ನು ಉಪವಿಭಾಗಾಧಿಕಾರಿಗಳಿಗೆ ವಿವರಿಸಿದರು.
ಕರೋನಾ ಹರಡದಂತೆ ಮುನ್ನಚರಿಕೆ ಕ್ರಮಕೈಗೊಂಡು ಜಾತ್ರೆಯ ಉತ್ಸವ ಸಮಿತಿಯವರು, ಅರ್ಚಕರುಗಳ ಸಲಹೆಗಳನ್ನು ಪಡೆದು ಧಾರ್ಮಿಕಕಾರ್ಯ ಕೈಗೊಳ್ಳುವಂತೆ ತಿಳಿಸಿ ದೇವಸ್ಥಾನದ ಆವರಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ದೇವಸ್ಥಾನದ ಮುಂಭಾಗ ಇರುವ ಪೂಜಾ ಸಾಮಗ್ರಿಗಳ ಅಂಗಡಿ, ಗೇಟ್ ಬಳಿ ಇರುವ ಹೋಟೆಲ್‍ನ್ನು ಸ್ಥಳಾಂತರಿಸುವ ಬಗ್ಗೆ ಉಪವಿಭಾಗಾಧಿಕಾರಿಗಳು ತಿಳಿಸಿದರು.
ಮಧುಗಿರಿ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಒಳ ಕ್ರೀಡೆಗಳಿಗೆ ವ್ಯವಸ್ಥೆ ಮತ್ತು ರಿಕ್ರಿಯೇಶನ್ ಕ್ಲಬ್‍ನಲ್ಲಿರುವ ಷಟಲ್ ಬ್ಯಾಟ್‍ಮಿಟನ್ ಕ್ರೀಡಾಂಗಣವನ್ನು ಅಭಿವೃದ್ದ ಪಡಿಸುವ ಬಗ್ಗೆ ಚರ್ಚೆಗಳು ನಡೆದವು.
ತಹಶೀಲ್ದಾರ್ ಡಾ.ಜಿ.ವಿಶ್ವನಾಥ್, ಪುರಸಭಾ ಸದಸ್ಯರುಗಳಾದ ಎಂ.ಆರ್.ಜಗನ್ನಾಥ್, ಎಂ.ವಿ.ಗೋವಿಂದರಾಜು, ನಟರಾಜು, ಎಂ.ಎಸ್.ಚಂದ್ರಶೇಖರ್, ಮುಖಂಡರುಗಳಾದ ಉಮೇಶ್, ಎಸ್‍ಬಿಟಿ ರಾಮು, ಆನಂದಕೃಷ್ಣ, ಧಾರ್ಮಿಕ ಚಟುವಟಿಕೆಯ ಮುಂದಾಳಾಗಳಾದ ಜಿ.ಆರ್.ಧನ್‍ಪಾಲ್, ದೋಲಿಬಾಬು, ಮಾಜಿ ಸದಸ್ಯ ಶ್ರೀನಿವಾಸಮೂರ್ತಿ, ದಬ್ಬೇಗಟ್ಟ ಗ್ರಾ.ಪಂ.ಸದಸ್ಯ ನಾಗರಾಜು ಹಾಗೂ ಉಪವಿಭಾಗಾಧಿಕಾರಿ ಕಛೇರಿಯ ವರದರಾಜ್ ಹಾಜರಿದ್ದರು.