ಮಂಡ್ಯ: 

      ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಮಂಡ್ಯ ಭೇಟಿ ದಿನವೇ ರೈತರೊಬ್ಬರು ಸಾಲಬಾಧೆ ಮತ್ತು ಅನಾರೋಗ್ಯ ಸಮಸ್ಯೆ ತಾಳಲಾರದೆ ಡೆತ್‌ನೋಟ್ ಬರೆದಿಟ್ಟು, ಆತ್ಮಹತ್ಯೆೆ ಮಾಡಿಕೊಂಡ ಘಟನೆ ತಾಲೂಕಿನ ಕನ್ನಹಟ್ಟಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.

     ಜೈಕುಮಾರ(43) ಮೃತ ರೈತ. ತನ್ನ ಸಾಲ ಮತ್ತು ಅನಾರೋಗ್ಯದ ಸಮಸ್ಯೆೆ ಕುರಿತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಳಾಸಕ್ಕೆೆ ಡೆತ್‌ನೋಟ್ ಬರೆದಿಟ್ಟು, ಆತ ತನ್ನ ಜಮೀನಿನ ಬಳಿ ವಿಷ ಸೇವಿಸಿ, ಆತ್ಮಹತ್ಯೆೆ ಮೊರೆ ಹೋಗಿದ್ದಾನೆ. 35 ಗುಂಟೆ ಜಮೀನು ಹೊಂದಿದ್ದ ರೈತ ಜೈಕುಮಾರ ಕಬ್ಬು ಮತ್ತು ತರಕಾರಿ ಬೇಸಾಯ ಮಾಡುತ್ತಿದ್ದರು. 2.80 ಲಕ್ಷ ರು. ಸಾಲ ಮಾಡಿಕೊಂಡಿದ್ದರು. ಗಂಟಲು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರ ಚಿಕಿತ್ಸೆೆಗೆ 3 ಲಕ್ಷ ರು. ಅಗತ್ಯವೆಂದು ವೈದ್ಯರು ತಿಳಿಸಿದ್ದರು.

      ಒಂದೆಡೆ ಸಾಲ, ಮತ್ತೊಂದೆಡೆ ಮಾರಕ ಕ್ಯಾನ್ಸರ್. ಎರಡರಿಂದ ಬೇಸತ್ತ ಜೈಕುಮಾರ ಆತ್ಮಹತ್ಯೆೆ ಮೊರೆ ಹೋದರು. ಮೃತರಿಗೆ ಪತ್ನಿ, ಇಬ್ಬರು ಮಕ್ಕಳಿದ್ದಾರೆ. ಶಿವಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ರೈತನ ಸ್ವಗ್ರಾಮ ಕನ್ನಹಟ್ಟಿ ಸಮೀಪವಿರುವ ದುದ್ದ ಗ್ರಾಮದಲ್ಲಿ ಇದೇ ದಿನ ಕುಮಾರಸ್ವಾಾಮಿ ಕಾರ್ಯಕ್ರಮ ನಿಗದಿಯಾಗಿತ್ತು.ತಮ್ಮ ಕುಟುಂಬಕ್ಕೆೆ ಸಹಾಯ ಮಾಡಿ ಎಂದು ಜೈಕುಮಾರ ಅವರು ಡೆತ್‌ನೋಟ್‌ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

      ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಅವರು ಕನ್ನಹಟ್ಟಿಗೆ ತೆರಳಿ ಜೈಕುಮಾರ ಅವರ ಅಂತಿಮ ದರ್ಶನ ಪಡೆದರು. ಈ ವೇಳೆ ಪರಿಹಾರ ಮೊತ್ತದ ವಿಚಾರವಾಗಿ ಗ್ರಾಮಸ್ಥರು ಹಾಗೂ ಸಚಿವ ಪುಟ್ಟರಾಜು ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾಮಸ್ಥರು 15 ಲಕ್ಷ ರು. ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು. ಸರಕಾರದ ನಿಯಮಾವಳಿ ಪ್ರಕಾರ 5 ಲಕ್ಷ ರು. ಪರಿಹಾರ ನೀಡಲಾಗುವುದು. ಮೃತರ ಇಬ್ಬರೂ ಮಕ್ಕಳ ವಿದ್ಯಾಭ್ಯಾಾಸಕ್ಕೆೆ ವೈಯಕ್ತಿಕವಾಗಿ 5 ಲಕ್ಷ ರು. ಠೇವಣಿ ಇಡುವುದಾಗಿ ಪುಟ್ಟರಾಜು ಭರವಸೆ ನೀಡಿದರು.

 

 

(Visited 13 times, 1 visits today)