ಬೆಂಗಳೂರು :

      ರಾಜ್ಯದ ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿಯೇ ಹೊಣೆ. ಈ ಸಾಂದರ್ಭಿಕ ಶಿಶುವಿಗೆ ಯಾವುದೇ ಗೊತ್ತು ಗುರಿ ಇಲ್ಲ. ಸರ್ಕಾರದ ಮೇಲೆ ಸಿಎಂಗೆ ಹಿಡಿತವೇ ಇಲ್ಲ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

      ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ ಒಳ್ಳೆಯ ಕೆಲಸ ಮಾಡಿದ್ರೆ ಅವರೇ 5 ವರ್ಷ ಸಿಎಂ ಆಗಿರಲಿ. ಆದ್ರೆ, 6 ತಿಂಗಳು ಅಧಿಕಾರದಲ್ಲಿ ಇರೋದನ್ನೇ ಇವರು ಸಾಧನೆ ಅಂದುಕೊಂಡಿದ್ದಾರೆ. ರೈತರ ಸರಣಿ ಆತ್ಮಹತ್ಯೆ ನಡೆಯುತ್ತಿದ್ದು, ಕುಮಾರಸ್ವಾಮಿ ಸರಕಾರ ಏನಾದರೂ ಸಾಧನೆ ಮಾಡಿದ್ದರೆ ರೈತರು ಏಕೆ ಆತ್ಮಹತ್ಯೆಗೆ ಶರಣಾಗುತ್ತಿದ್ದರು ಎಂದು ಪ್ರಶ್ನಿಸಿರುವ ವಿಪಕ್ಷ ನಾಯಕ ಯಡಿಯೂರಪ್ಪ, ರೈತರೇ ಸಿಎಂ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಅವರೇ ನೇರ ಹೊಣೆ ಎಂದು ದೂರಿದ್ದಾರೆ.

      ಜನರ ಸಮಸ್ಯೆಗಳನ್ನು ಆಲಿಸುವ ಪ್ರಮೇಯವೇ ಇಲ್ಲ. ಮಹಿಳೆಯರು ಮತ್ತು ರೈತರಿಗೆ ಅಪಮಾನ ಮಾಡುವುದು ಮತ್ತು ದರ್ಪದ ಮಾತುಗಳನ್ನು ಆಡುವುದೇ ಸರಕಾರದ ಸಾಧನೆ. ಮಾತೆತ್ತಿದರೆ ರಾಜೀನಾಮೆ ಬಿಸಾಡುತ್ತೇನೆಂದು ಹೇಳಿ ಜನರಿಗೆ ಅಪಮಾನ ಮಾಡುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

 

(Visited 12 times, 1 visits today)