ಹುಳಿಯಾರು:

     ಚಿಕ್ಕನಾಯಕನಹಳ್ಳಿ ತಾಲೂಕಿನ ಹಂದನಕೆರೆ ಗ್ರಾಮದ ಎಚ್.ಎಸ್. ಅನಂದಮೂರ್ತಿ ಅವರಿಗೆ ಸೇರಿದ ತೋಟದ ಮನೆಗೆ ಆಕಸ್ಮಿಕ ಬೆಂಕಿ ತಗುಲಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

      ಹೆಂಚಿನ ಮನೆಯಲ್ಲಿದ್ದ 23 ಸಾವಿರ ಕೊಬ್ಬರಿ, ಮನೆ ನಿರ್ಮಾಣಕ್ಕೆ ಇಟ್ಟಿದ್ದ ಬೇವಿನ ಮುಟ್ಟುಗಳು ಸೇರಿದಂತೆ ಅಗತ್ಯ ದಾಖಲೆಗಳು ಬೆಂಕಿಗೆ ಆಹುತಿಯಾಗಿವೆ.

ಮನೆ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಹಂದನಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

(Visited 37 times, 1 visits today)