ಗುಬ್ಬಿ :
ಸಣ್ಣ ಕೈಗಾರಿಕಾ ಸಚಿವ ಎಸ್.ಆರ್.ಶ್ರೀನಿವಾಸ್ರವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ರೇಣುಕಾಚಾರ್ಯ ಹಾಗೂ ಮಾಜಿ ಸಂಸದ ಜಿ.ಎಸ್.ಬಸವರಾಜು ಧೋರಣೆಗೆ ಜೆ.ಡಿ.ಎಸ್.ಕಾರ್ಯಕರ್ತರು ಹಾಗೂ ಮುಖಂಡರುಗಳು ಮುಂದಿನ ದಿನಗಳಲ್ಲಿ ಹೋರಾಟ ನಡೆಸುವುದಾಗಿ ಮಾರುಕಟ್ಟೆ ಸಮಿತಿ ಅಧ್ಯಕ್ಷ ರೇವಣ್ಣ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಸಚಿವ ಎಸ್.ಆರ್.ಶ್ರೀನಿವಾಸ್ರವರು 20 ವರ್ಷಗಳ ರಾಜಕೀಯ ಭವಿಷ್ಯದಲ್ಲಿ ಅಭಿವೃದ್ಧಿಯ ಪಥಕ್ಕೆ ಹೆಚ್ಚಿನ ಒತ್ತು ನೀಡಿದ್ದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿ 7 ಬಾರಿ ದಾವಣಗೆರೆಗೆ ಭೇಟಿ ನೀಡಿದ್ದು ಜಿಲ್ಲೆಯ ಅಭಿವೃದ್ದಿಗೆ ಮಾರಕವಾದ ಮರಳು ದಂಧೆಗೆ ಕಡಿವಾಣ ಹಾಕಿದ್ದು ಮರಳುದಂಧೆಕೋರರಿಗೆ ಅತಿ ಹೆಚ್ಚಿನ ಬೆಂಬಲ ನೀಡುತ್ತಿದ್ದ ರೇಣುಕಾಚಾರ್ಯರವರ ಮಾಮುಲನ್ನು ನಿಲ್ಲಿಸಿದ ಪರಿಣಾಮ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದು ಕೇವಲ ಮೋಜು ಮಸ್ತಿ ಮಾಡಲು ದಾವಣಗೆರೆ ಬರುತ್ತಿದ್ದಾರೆ ಎಂಬ ಹೇಳಿಕೆಯಿಂದ ರಾಜ್ಯದ ಜೆ.ಡಿ.ಎಸ್. ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ತೀವ್ರವಾಗಿ ಖಂಡಿಸಲಿದ್ದಾರೆ ಎಂದ ಅವರು ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷಕ್ಕೆ ಕಂಟಕಪ್ರಾಯನಾಗಿದ್ದು ಈತನನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದರು.
ಕೇವಲ ನೀರಿನ ಸಮಸ್ಯೆಯನ್ನು ಮುಂದಿಟ್ಟುಕೊಂಡು ಅಧಿಕಾರ ಹಿಡಿಯಲು ಹವಣಿಸುತ್ತಿರುವ ಮಾಜಿ ಸಂಸದ ಜಿ.ಎಸ್.ಬಸವರಾಜುರವರಿಗೆ ನಮ್ಮ ಹೇಮಾವತಿ ನೀರನ್ನು ಬೇರೆ ಯಾರೋ ತೆಗೆದುಕೊಂಡು ಹೋಗುತ್ತಾರೆ ಎಂಬ ಕಲ್ಪನೆಯಿಂದ ತಾಲ್ಲೂಕಿನ ರೈತರನ್ನು ಗೊಂದಲಕ್ಕೀಡು ಮಾಡುತ್ತಿರುವುದು ಎಷ್ಟು ಸಮಂಜಸ ಈಗಾಗಲೇ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಲು ಮಾನ್ಯ ಸಚಿವರ ಈಗಾಗಲೇ ಬಹಳಷ್ಟು ಶ್ರಮಪಟ್ಟಿದ್ದು ತಾಲ್ಲೂಕಿನ ಜನತೆಗೆ ತಿಳಿದಿದೆ. ಮಾನ್ಯ ಸಂಸದರು ಕೇವಲ ಉದ್ರೇಕದ ಭಾಷಣದಿಂದ ತಾಲ್ಲೂಕಿನ ಜನತೆಯು ಮರುಳಾಗುವುದಿಲ್ಲ. ಇನ್ನು ಮುಂದಾದರೂ ಮಂತ್ರಿಗಳನ್ನು ಟೀಕಿಸುವುದನ್ನು ನಿಲ್ಲಿಸಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೋರಾಟ ನಡೆಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜೆ.ಡಿ.ಎಸ್ ಅಧ್ಯಕ್ಷ ರೇಣುಕಾರಾಧ್ಯ, ಮಾಜಿ ಅಧ್ಯಕ್ಷ ಲೋಕೇಶ್ವರ್, ಮುಖಂಡರುಗಳಾದ ಕಿಡಿಗಣಪ್ಪ, ಪ್ರಭಣ್ಣ ಹಾಗೂ ಎ.ಪಿ.ಎಂ.ಸಿ ಸದಸ್ಯರುಗಳು ಭಾಗವಹಿಸಿದ್ದರು.