ತುಮಕೂರು:

      ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ, ಕರ್ನಾಟಕ ರೈತ ಸಂಘ ಮತ್ತು ಹಸಿರುಸೇನೆ ಹಾಗೂ ಎಐಕೆಸಿಸಿ ಕಾರ್ಯಕರ್ತರು ತುಮಕೂರಿನಲ್ಲಿ ರೈಲು ತಡೆಯಲು ಮುಂದಾದಾಗ ಪೊಲೀಸರು ಬಂಧಿಸಿರುವ ಘಟನೆ ಗುರುವಾರ ನಡೆದಿದೆ.

      ರೈತರಿಗೆ ಮರಣ ಶಾಸನವಾಗಿರುವ ನಾಲ್ಕು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರಕಾರ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಕಳೆದ 90 ದಿನಗಳಿಂದ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದನ್ನು ಬೆಂಬಲಿಸಿ ಇಂದು ದೇಶದಾದ್ಯಂತ ರೈತರು,ರೈತ ಸಂಘಟನೆಯ ಕಾರ್ಯಕರ್ತರುಗಳು ರೈಲು ತಡೆ ಚಳವಳಿ ಹಮ್ಮಿಕೊಂಡಿದ್ದು,ಇದರ ಭಾಗವಾಗಿ ಇಂದು ತುಮಕೂರಿನಲ್ಲಿ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ ಪಟೇಲ್ ಮತ್ತು ಎಕೆಐಸಿಸಿಯ ಆರ್.ಕೆ.ಎಸ್‍ನ ಸ್ವಾಮಿ ಅವರ ನೇತೃತ್ವದಲ್ಲಿ ನಗರದ ರೈಲ್ವೆ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ,ರೈಲು ತಡೆಯಲು ಮುಂದಾದಾಗ ಪೊಲೀಸರು ಪ್ರತಿಭಟನಾನಿರತರನ್ನು ಬಂಧಿಸಿದರು.

     ಪ್ರತಿಭಟನೆಯ ವೇಳೆ ಮಾತನಾಡಿದ ರೈತ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್‍ಪಟೇಲ್, ರೈತರಿಗೆ ಮಾರಕವಾಗಿರುವ ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಕಳೆದ 90 ದಿನಗಳಿಂದ ರೈತರು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಸರಕಾರ ಬಂಡತನ ತೋರುತ್ತಿದೆ.ಅಲ್ಲದೆ ಒಂದೊಂದಾಗಿ ಸರಕಾರಿ ಸಾಮ್ಯದ ಕಂಪನಿಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವ ಪ್ರಕ್ರಿಯೆ ಬರದಿಂದ ಸಾಗಿದೆ.ಸಂತೆ ದಲ್ಲಾಳಿಯಂತೆ ತಮ್ಮ ಮನಸ್ಸಿಗೆ ಬಂದಷ್ಟು ಹಣಕ್ಕೆ ಮಾರಾಟ ಮಾಡುತಿದ್ದು, ಜನರ ಕಣ್ಣಿಗೆ ಮಣ್ಣೇರೆಚುವ ಕೆಲಸ ಮಾಡುತ್ತಿದ್ದಾರೆ.ಈಗಾಗಲೇ ಪಂಜಾಬ್‍ನ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿಗೆ ತೀವ್ರ ಮುಖಭಂಗ ಅನುಭವಿಸುವಂತಾಗಿದೆ. ಇದೇ ರೀತಿ ಪರಿಸ್ಥಿತಿಯನ್ನು ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಮುಂದಿನ ದಿನಗಳಲ್ಲಿ ಬಿಜೆಪಿ ಅನುಭವಿಸಲಿದೆ ಎಂದರು.

      ಚಳವಳಿಗಾರರನ್ನು ಆಂದೋಲನ ಜೀವಿ ಎಂದು ಜರಿಯುವ ಮೂಲಕ ಪ್ರಧಾನಿ ನರೇಂದ್ರಮೋದಿ ಹಿಯಾಳಿಸುವ ಕೆಲಸ ಮಾಡಿದ್ದಾರೆ.ಆದರೆ ಅವರು ಮರೆತಿರಬಹುದು,ಅಣ್ಣಾ ಹಜಾರೆಯ ನೇತೃತ್ವದ ಹೋರಾಟದ ಮೂಲಕ ತಾನು ಪ್ರಧಾನಿ ಹುದ್ದೆಗೆ ಬಂದಿದ್ದು ಎಂದು. ಇವರ ಬಂಢತನ ಹೀಗೆಯೇ ಮುಂದುವರೆದರೆ ಜನರ ಇವರ ವಿರುದ್ದ ತಿರುಗಿ ಬಿಳುವ ಕಾಲ  ಪುಟ 1 ರಿಂದ
ದೂರವಿಲ.್ಲ ಇವರ ಹಿಟ್ಲರ್ ಧೋರಣೆಗೆ ಜಾಗವಿಲ್ಲ ಎಂಬುದನ್ನು ಜನತೆ ಮುಂದಿನ ಚುನಾವಣೆಗಳಲ್ಲಿ ತೋರಿಸಲಿದ್ದಾರೆ ಎಂದು ಆನಂದಪಟೇಲ್ ನುಡಿದರು.

      ಆರ್.ಕೆ.ಎಸ್‍ನ ಜಿಲ್ಲಾ ಅಧ್ಯಕ್ಷ ಸ್ವಾಮಿ ಮಾತನಾಡಿ,ದೇಶದಲ್ಲಿ ನಡೆಯುತ್ತಿರುವ ರೈತರ ಹೋರಾಟ ಇಡೀ ವಿಶ್ವದ ಗಮನ ಸಳೆದಿದ್ದು,ಭಾರತದ ಮಾನ ಹರಾಜಾಗುತ್ತಿದ್ದರೂ ಪ್ರಧಾನ ಮಂತ್ರಿ ಮಾತ್ರ ದೇಶದ ಸಂಪತ್ತನ್ನು ಮಾರಾಟ ಮಾಡಲು ಮಾಡುತ್ತಿದ್ದಾರೆ.ಇಂತಹ ಲೆಜ್ಜೆಗೇಡಿ ಸರಕಾರವನ್ನು ನಾವು ನೋಡಿರಲಿಲ್ಲ. ಕಣ್ಣಿದ್ದು, ಕುರುಡಾಗಿ, ಕಿವಿಯಿದ್ದ ಕಿವುಡಾಗಿರುವ ಈ ಸರಕಾರದ ಜನವಿರೋಧಿ ನೀತಿಗಳೇ ಇವರಿಗೆ ಮುಳುವಾಗಲಿವೆ ಎಂದರು.

      ಪ್ರತಿಭಟನೆಯಲ್ಲಿ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್,ಜಿಲ್ಲಾ ಕಾರ್ಯಾಧ್ಯಕ್ಷ ಧನಂಜಯ್ ಆರಾಧ್ಯ,ತಾಲೂಕು ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಸಿದ್ದರಾಜು,ಅನಿಲ್‍ಕುಮಾರ್,ತಾಳೇಕೆರೆ ನಾಗೇಂದ್ರ, ಲಕ್ಕಣ್ಣ,ಬಸ್ತಿಹಳ್ಳಿ ರಾಜಣ್ಣ,ತಿಮ್ಮಲಾಪುರ ದೇವರಾಜು, ಪ್ರಕಾಶ್, ರುದ್ರೇಗೌಡ, ಮಲ್ಲಿಕಾರ್ಜುನ, ಬಸವರಾಜು, ಶಂಕರಲಿಂಗಣ್ಣ, ಆರ್.ಕೆ.ಎಸ್‍ನ ಕಲ್ಯಾಣಿ, ಆಶ್ವಿನಿ ಮತ್ತಿತರರು ಪಾಲ್ಗೊಂಡಿದ್ದರು.

 

 

 

(Visited 19 times, 1 visits today)