ತುಮಕೂರು:
5 ವರ್ಷದ ಮಗುವಿಗೆ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ನಗರದ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆಯ ಮತ್ತು ಕಾಲೇಜಿನ ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ದಾಟಿದೆ. ಕಳೆದ ತಿಂಗಳು ಓಪನ್ ಹಾರ್ಟ್ ಸರ್ಜರಿ ಮಾಡಿ ಸಫಲವಾಗಿದ್ದ ವೈದ್ಯರ ತಂಡ ಇದೀಗ ಮಕ್ಕಳ ಹೃದಯ ರೋಗ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳುವ ಮೂಲಕ ತುಮಕೂರಿನಂತಹ ಪ್ರದೇಶದಲ್ಲಿ ಸೂಕ್ಷ್ಮ ರೀತಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಬಹುದೆಂಬುದನ್ನು ಸಾದರಪಡಿಸಿದ್ದಾರೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಚಿಲ್ಲೂರ್ ಗ್ರಾಮದ ಕೃಷಿಕ ಹಾಗೂ ಹಿಂದುಳಿದ ವರ್ಗದ ಕುಟುಂಬದ 4 ವರ್ಷ 8 ತಿಂಗಳ ಮಗು (ರಂಜಿತ್–ಹೆಸರು ಬದಲಾಯಿಸಲಾಗಿದೆ) ವಿಗೆ ನಡೆಸಲಾದ ಹೃದಯ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಸಾಮಾನ್ಯ ವಾರ್ಡ್‍ನಲ್ಲಿ ಚೇತರಿಸಿಕೊಳ್ಳುತ್ತಿದೆ.
‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮೀಮ್‍ಅಹಮದ್, ಡಾ.ನವೀನ್, ಡಾ.ಸುರೇಶ್, ಡಾ.ನಾಗಾರ್ಜುನ, ವಿವೇಕ್, ಜಾನ್, ಡಾ.ನಿಖಿತ ನೇತೃತ್ವದ ತಂಡ ಮಗುವಿಗೆ ಶಸ್ತ್ರಚಿಕಿತ್ಸೆಯನ್ನು ಮಾಡುವಲ್ಲಿ ಸಫಲವಾಗಿದೆ ಎಂದು ವಿಭಾಗದ ಸಿಇಒ ಡಾ. ಪ್ರಭಾಕರ್ ತಿಳಿಸಿದ್ದಾರೆ.
ಸೊಲ್ಲಾಪುರ ಮತ್ತು ಬೆಂಗಳೂರಿನಲ್ಲಿ ತಪಾಸಣೆಗೊಳಗಾಗಿದ್ದ ಮಗುವಿಗೆ ಓಪನ್ ಹಾರ್ಟ್ ಸರ್ಜರಿ ಮಾಡಬೇಕೆಂಬ ವೈದ್ಯರು ಸಲಹೆ ನೀಡಿದ್ದರು. ಆದರೆ ಆರ್ಥಿಕ ಮುಗ್ಗಟ್ಟು ಮತ್ತು ಕರೋನಾದಂತಹ ಕಠಿಣ ಪರಿಸ್ಥಿತಿಯಲ್ಲಿ ಪೋಷಕರು ಚಿಂತಕ್ರಾಂತರಾಗಿದ್ದರು. ಆಗ ಮಾಧ್ಯಮದಿಂದ ಸಿಕ್ಕ ಮಾಹಿತಿಯನ್ನು ಆಧರಿಸಿ ಒಂದು ವಾರದ ಹಿಂದೆ ತುಮಕೂರಿನ ಸಿದ್ಧಾರ್ಥ ಹಾರ್ಟ್ ಸೆಂಟರ್‍ಗೆ ತಪಾಸಣೆಗೆ ಮಗುವಿನೊಂದಿಗೆ ಪೋಷಕರು ಬರುತ್ತಾರೆ.
ರಾಜ್ಯದ ಬೇರೆ ಕಡೆಗಳಲ್ಲಿ ನೀಡಲಾಗಿದ್ದ ತಪಾಸಣೆಯ ವಿವರಗಳನ್ನು ಪಡೆದ ಆಸ್ಪತ್ರೆಯ ವೈದ್ಯರ ತಂಡ ಓಪನ್ ಹಾರ್ಟ್ ಸರ್ಜರಿ ಬದಲಾಗಿ ಪಿಡಿಎ ಡಿವೈಸ್ ಕ್ಲೋಸರ್ ಚಿಕಿತ್ಸೆ (ಕಾಂಜೆನೈಟಲ್) ಮೂಲಕ ಗುಣಪಡಿಸಲಾಗಿದೆ. ಇದರಿಂದ ಮಗುವಿನ ಬೆಳವಣಿಗೆ ಉತ್ತಮವಾಗಲಿದೆ.
ಮಗು ಹುಟ್ಟುವ ಸಂದರ್ಭದಲ್ಲಿ (ಅಂದರೆ ಮಗು ಗರ್ಭಕೋಶದಲ್ಲಿದ್ದಾಗ ತೆರದಿರುವ ನರ ಹುಟ್ಟಿದ ತಕ್ಷಣ ಮುಚ್ಚಿಕೊಳ್ಳಬೇಕು) ಹೃದಯಕ್ಕೆ ಹೊಂದಿಗೊಂಡಿರುವ ನರವೊಂದು ಮುಚ್ಚಿಕೊಳ್ಳಬೇಕು. ಅದು ಮುಚ್ಚಿಕೊಳ್ಳದಿದರೆ ರಕ್ತದ ಹರಿವಿಕೆಯಲ್ಲಿ ಒತ್ತಡ ಉಂಟಾಗಿ ಶ್ವಾಸಕೋಸಕ್ಕೆ ತೊಂದರೆಯಾಗುತ್ತಿತ್ತು. ಈ ರೀತಿ ಸಮಸ್ಯೆಯನ್ನು ಹಾವೇರಿಯ 5 ವರ್ಷದ ಮಗು ಕೂಡ ಎದುರಿಸಿತ್ತು. ಮಗು ಎದುರಿಸುತ್ತಿದ ನರದ (ರಕ್ತನಾಳದ) ಸಮಸ್ಯೆ ಕುರಿತು ತಂಡ ಸಮಾಲೋಚನೆ ನಡೆಸಿ ಓಪನ್ ಹಾರ್ಟ್ ಸರ್ಜರಿಗೆ ಬದಲಾಗಿ ಆಧುನಿಕ ಉಪಕರಣದ ಮೂಲಕ ಓಪನ್ ಆಗಿದ್ದ ನರವನ್ನು ಶಸ್ತ್ರಚಿಕಿತ್ಸೆಯ ಮೂಲಕ ಮುಚ್ಚಿ ರೋಗವನ್ನು ಗುಣಪಡಿಸಲಾಗಿದೆ. ಇದಕ್ಕೆ ಈಗ ಚಿಕಿತ್ಸೆ ನೀಡಿದ್ದರಿಂದ ಮಗುವಿನ ಮುಂದಿನ ಬೆಳವಣಿಗೆ ಉತ್ತಮವಾಗಿರುತ್ತದೆ ಮತ್ತು ಸಾಮಾನ್ಯವಾಗಿರುತ್ತದೆ ಎಂದು ಡಾ.ತಮೀಮ್ ಅಹಮದ್ ಹೇಳಿದ್ದಾರೆ.
ಚಿಕಿತ್ಸೆ ಮತ್ತು ನಂತರದ ಬೆಳವಣಿಗೆ ಕುರಿತು ಮಾತನಾಡಿದ ಮಗುವಿನ ಪೋಷಕರು ಬೆಂಗಳೂರಿಗೆ ಹೋಗದೆ ತುಮಕೂರಿಗೆ ಬಂದಿದ್ದು ನಮಗೆ ಸಮಯ ಮತ್ತು ಹಣದ ಹೊರೆತಪ್ಪಿತು. ಆಸ್ಪತ್ರೆ ವ್ಯವಸ್ಥೆ ಮತ್ತು ವೈದ್ಯರ ಸೇವೆ ತೃಪ್ತಿ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಗೆ ಚಾಲನೆ: ಅಂತರಾಷ್ಟ್ರೀಯ ಹೃದಯ ಶಸ್ತ್ರಚಿಕಿತ್ಸೆಯ ದಿನಾಚರಣೆಯ ಸಂದರ್ಭದಲ್ಲಿ ಸಿದ್ದಾರ್ಥ ಹಾರ್ಟ್‍ಸೆಂಟರ್ ಮತ್ತು ಕಾರ್ಡಿಯಾಕ್ ಪ್ರಾಂಟಿಡ ಸಂಸ್ಥೆಯ ಸಹಯೋಗದಲ್ಲಿ ಮಕ್ಕಳಿಗೆ ಹೃದಯಚಿಕಿತ್ಸೆ ಮಾಡುವ ಯಶಸ್ವಿ ಮಹತ್ವದ ಯೋಜನೆಗೆ ಈ ಚಿಕಿತ್ಸೆ ಮುನ್ನುಡಿ ಬರೆದಿದೆ ಎಂದು ‘ಸಿದ್ಧಾರ್ಥ ಅಡ್ವಾನ್ಸ್ಡ್ ಹಾರ್ಟ್ ಸೆಂಟರ್’ನ ಮೇಲ್ವಿಚಾರಕರಾದ ಹಾಗೂ ‘ಕಾರ್ಡಿಯಾಕ್ ಫ್ರಾಂಟಿ¬ಡಾ’ ಸಂಸ್ಥೆಯ ನಿರ್ದೇಶಕ ಡಾ.ತಮೀಮ್ ಅಹಮದ್ ತಿಳಿಸಿದ್ದಾರೆ.
ಚಿಕ್ಕ ಮಕ್ಕಳಲ್ಲಿ ಜನ್ಮಜಾತ (ಕಾಂಜೆನೈಟಲ್) ರೋಗ ಹೆಚ್ಚಾಗಿದ್ದು. ಭಾರತದಲ್ಲಿ ಪ್ರತಿವರ್ಷ 1 ಲಕ್ಷ 80 ಸಾವಿರ ಮಕ್ಕಳಿಗೆ ಹೃದಯ ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ. ಆದರೆ ಸೌಲಭ್ಯಗಳ ಕೊರತೆಯಿಂದಾಗಿ ಕೇವಲ 25.000 ಮಕ್ಕಳಿಗೆ ಚಿಕಿತ್ಸೆ ದೊರೆಯುತ್ತದೆ. ಇದನ್ನು ಕಂಡ ಸಿದ್ದಾರ್ಥ ಸಂಸ್ಥೆ ಗ್ರಾಮಾಂತರ ಪ್ರದೇಶದಲ್ಲಿ ಹೃದಯ ರೋಗದಂತಹ ಸೂಕ್ಷ್ಮ ರೋಗಗಳಿಗೆ ಪರಿಹಾರ ದೊರಕಿಸುವ ನಿಟ್ಟನಲ್ಲಿ ಮಕ್ಕಳ ಹೃದಯ ಶಸ್ತ್ರಚಿಕಿತ್ಸಾ ಕೇಂದ್ರವನ್ನು ಪ್ರಾರಂಭಿಸಿದೆ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ ದಂಪತಿಗಳಿಂದ ಆರೋಗ್ಯ ವಿಚಾರಣೆ: ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ 5 ವರ್ಷದ ಮಗುವಿನ ಆರೋಗ್ಯವನ್ನು ಶ್ರೀ ಸಿದ್ಧಾರ್ಥ ಪುಟ 2 ಕ್ಕೆ