ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ತುಮಕೂರು ಜಿಲ್ಲೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಜಿಲ್ಲೆಯ 10 ತಾಲ್ಲೂಕುಗಳಿಂದ 2020-21ನೇ ಸಾಲಿನ ಜನವರಿ ಅಂತ್ಯದ ವೇಳೆಗೆ 6938341 ಮಾನವ ದಿನಗಳು ಸೃಜನೆಯಾಗಿವೆ.
ವೈಯಕ್ತಿಕ ಫಲಾನುಭವಿಗಳಿಗೆ ಆದ್ಯತೆಃ
ನರೇಗಾ ಯೋಜನೆಯಡಿ ವೈಯಕ್ತಿಕ ಪಲಾನಭವಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಈಗಾಗಲೇ ಚಾಲನೆಯಲ್ಲಿರುವ ಕೃಷಿ ಹೊಂಡ, ಕಂದಕಬದು, ಕೃಷಿ ಅರಣ್ಯ, ತೋಟಗಾರಿಕೆ ಬೆಳೆಗಳು, ರೇಷ್ಮೆ ಕೃಷಿ, ಏರೆಹುಳು ಗೊಬ್ಬರ ತೊಟ್ಟಿ ನಿರ್ಮಾಣ, ಜಾನುವಾರು ಶೆಡ್ / ಕೋಳಿ ಶೆಡ್ / ಕುರಿ ಶೆಡ್/ ಹಂದಿ ಶೆಡ್ ನಿರ್ಮಾಣ ಕಾಮಗಾರಿಗಳು ಅನುಷ್ಟಾನದಲ್ಲಿವೆ.
ವರ್ಷದಲ್ಲಿ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗ ಖಾತರಿಃ
ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ 18 ವರ್ಷ ಮೇಲ್ಪಟ ಅಕುಶಲ ಕಾರ್ಮಿಕರ ಉದ್ಯೋಗಕ್ಕಾಗಿ ಉದ್ಯೋಗ ಚೀಟಿ ಹೊಂದಿ, ಬೇಡಿಕೆ ಸಲ್ಲಿಸುವ ಪ್ರತಿ ಕುಟುಂಬಕ್ಕೆ ವರ್ಷದಲ್ಲಿ 100 ದಿನಗಳ (ಬರಪೀಡತ ಪ್ರದೇಶಗಳಲ್ಲಿ 150 ದಿನಗಳು) ಉದ್ಯೋಗ ಖಾತರಿ ನೀಡಲಾಗುವುದಲ್ಲದೆ ಮಹಿಳೆ ಮತ್ತು ಪುರುಷರಿಗೆ ಸಮಾನ ಕೂಲಿ ಪಾವತಿ (ದಿನಕ್ಕೆ 275) ಮಾಡಲಾಗುವುದು. ಉದ್ಯೋಗ ಚೀಟಿ ಇಲ್ಲದವರು ಹತ್ತಿರದ ಗ್ರಾಮ ಪಂಚಾಯಿತಿಗಳಲ್ಲಿ ನಮೂನೆ-1 ರಲ್ಲಿ ಅರ್ಜಿ ಸಲ್ಲಿಸುವ ಮೂಲಕ ಉದ್ಯೋಗ ಚೀಟಿ ಪಡೆಯಬಹುದಾಗಿದೆ.
ಕಳೆದ ಸಾಲಿನಲ್ಲಿ 388213 ಉದ್ಯೋಗ ಚೀಟಿ ವಿತರಣೆಃ
ಜಿಲ್ಲೆಯಲ್ಲಿ ಕಳೆದ 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ ಒಟ್ಟು 388213 ಉದ್ಯೋಗ ಚೀಟಿಗಳನ್ನು ಗ್ರಾಮ ಪಂಚಾಯಿತಿವಾರು ವಿತರಣೆ ಮಾಡಲಾಗಿದ್ದು, ಇದರಲ್ಲಿ ಉದ್ಯೋಗ ಚೀಟಿ ಪಡೆದ ಪರಿಶಿಷ್ಟ ಜಾತಿಯ 61761, ಪರಿಶಿಷ್ಟ ವರ್ಗದ 28399 ಹಾಗೂ ಇತರೆ ವರ್ಗದ 298042 ಸೇರಿದಂತೆ ಒಟ್ಟು 388202 ಕುಟುಂಬಗಳು ನರೇಗಾ ಯೋಜನೆಯ ಅನುಷ್ಠಾನದಲ್ಲಿ ಭಾಗಿಯಾಗಿದ್ದಾರೆ. ಈ ಪೈಕಿ 203330 ಮಹಿಳಾ ಅಕುಶಲ ಕೂಲಿ ಕಾರ್ಮಿಕರು ನರೇಗಾ ಯೋಜನೆಯ ಅನುಕೂಲ ಪಡೆದುಕೊಂಡಿದ್ದಾರೆ.
5409178 ಮಾನವ ದಿನಗಳ ಸೃಜನೆಃ
ನರೇಗಾ ಯೋಜನೆಯಡಿ 2019-20ನೇ ಆರ್ಥಿಕ ವರ್ಷದಲ್ಲಿ ಚಿ.ನಾ.ಹಳ್ಳಿಯಲ್ಲಿ 309519, ಗುಬ್ಬಿ-293936, ಕೊರಟಗೆರೆ-344215, ಕುಣಿಗಲ್-941497, ಮಧುಗಿರಿ-1061844, ಪಾವಗಡ-645328, ಶಿರಾ-645328, ತಿಪಟೂರು-547789, ತುಮಕೂರು-206134 ಹಾಗೂ ತುರುವೇಕೆರೆ ತಾಲೂಕಿನಲ್ಲಿ 733553 ಸೇರಿದಂತೆ ಜಿಲ್ಲೆಯಾದ್ಯಂತ ಒಟ್ಟು 5409178 ಮಾನವ ದಿನಗಳು ಸೃಜನೆಯಾಗಿದ್ದು, ಒಟ್ಟು 48012 ವೈಯಕ್ತಿಕ ಮತ್ತು ಸಮುದಾಯ ಆಧಾರಿತ ಕಾಮಗಾರಿಗಳು ಅನುಷ್ಠಾನಗೊಂಡಿವೆ.
ಪ್ರಸಕ್ತ ವರ್ಷ 411779 ಉದ್ಯೋಗ ಚೀಟಿ ವಿತರಣೆಃ
ನರೇಗಾ ಯೋಜನೆಯಡಿ ಪ್ರಸಕ್ತ 2020-21ನೇ ಆರ್ಥಿಕ ವóರ್ಷದಲ್ಲಿ ಮನೆ-ಮನೆ ಭೇಟಿ ನೀಡಿ ಯೋಜನೆಯ ಬಗ್ಗೆ ವ್ಯಾಪಕ ಪ್ರಚಾರ, ಉದ್ಯೋಗ ವಾಹಿನಿ ಜಾಗೃತಿ ರಥಯಾತ್ರೆ ಮೂಲಕ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಚಾರ ನೀಡುವುದು, ಗೋಡೆ ಬರಹಗಳು, ಉದ್ಯೋಗ ಚೀಟಿ ಆಂದೋಲನ ಸೇರಿದಂತೆ ಇತರೆ ಆನೇಕ ಐ.ಇ.ಸಿ. ಚಟುವಟಿಕೆಗಳ ಮೂಲಕ ಅರಿವು ಮೂಡಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಕುಟುಂಬಗಳು ಉದ್ಯೋಗ ಚೀಟಿಗಳನ್ನು ಪಡೆದುಕೊಂಡಿದ್ದಾರೆ.
ಜಿಲ್ಲೆಯ ಚಿ.ನಾ.ಹಳ್ಳಿ ತಾಲೂಕಿನಲ್ಲಿ 36446, ಗುಬ್ಬಿ-41784, ಕೊರಟಗೆರೆ-26990, ಕುಣಿಗಲ್-38015, ಮಧುಗಿರಿ-52032, ಪಾವಗಡ-55970, ಶಿರಾ-56571, ತಿಪಟೂರು-31777, ತುಮಕೂರು-37858, ತುರುವೇಕೆರೆ ತಾಲೂಕಿನಲ್ಲಿ 34336 ಅಕುಶಲ ಕೂಲಿ ಕಾರ್ಮಿಕರಿಗೆ ಉದ್ಯೋಗ ಚೀಟಿಗಳನ್ನು ವಿತರಿಸಲಾಗಿದ್ದು, ಇವರಲ್ಲಿ 488232 ಮಹಿಳಾ ಅಕುಶಲ ಕೂಲಿ ಕಾರ್ಮಿಕರು ಉದ್ಯೋಗ ಚೀಟಿಗಳನ್ನು ಪಡೆದುಕೊಂಡಿದ್ದಾರಲ್ಲದೆ ಪರಿಶಿಷ್ಟ ಜಾತಿಗೆ ಸೇರಿದ 65310, ಪರಿಶಿಷ್ಠ ಪಂಗಂಡದ 30680 ಹಾಗೂ ಇತರೆ ವರ್ಗದ 324324 ಕುಟುಂಬಗಳು ಉದ್ಯೋಗ ಚೀಟಿಗಳನ್ನು ಪಡೆದುಕೊಂಡಿದ್ದಾರೆ.
ವೈಯಕ್ತಿಕ ಕಾಮಗಾರಿಗಳಡಿ ಹೆಚ್ಚು ಅವಕಾಶಃ
ಪ್ರಸಕ್ತ 2020-21ರ ಆರ್ಥಿಕ ವರ್ಷದಲ್ಲಿ ಈವರೆಗೆ ಕೊರೋನಾ(ಕೋವಿಡ್-19) ಕಾರಣದಿಂದಾಗಿ ನಗರದ ಪ್ರದೇಶದ ಕಡೆ ವಲಸೆ ಹೋಗಿದ್ದ ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಗ್ರಾಮಗಳ ಕಡೆ ಮರಳಿ ಬಂದ ಕಾರಣ ಹಾಗೂ ಗ್ರಾಮೀಣ ಕೂಲಿ ಕಾರ್ಮಿಕರಿಗೆ ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗಳಡಿ ಹೆಚ್ಚಿನ ಅವಕಾಶ ಕಲ್ಪಿಸಿಕೊಡುವ ಸದುದ್ದೇಶದಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಕಾರದಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಮೇ-19 ರಿಂದ 1 ತಿಂಗಳು ಬದು ನಿರ್ಮಾಣ ಮಾಸಾಚಾರಣೆ ಹಮ್ಮಿಕೊಳ್ಳಲಾಗಿತ್ತು.
2020-21ನೇ ಸಾಲಿನಲ್ಲಿ 6938341 ಮಾನವ ದಿನಗಳ ಸೃಜನೆಃ
ಜಿಲ್ಲೆಯಾದ್ಯಂತ ಈ ಆರ್ಥಿಕ ವರ್ಷದಲ್ಲಿ 6938341 ಮಾನವ ದಿನಗಳು ಸೃಜನೆಯಾಗಿ ನರೇಗಾ ಅನುಷ್ಟಾನದಲ್ಲಿ ತುಮಕೂರು ಜಿಲ್ಲೆ ಉತ್ತಮ ಪ್ರಗತಿ ಸಾಧಿಸಿದೆ. ಬದು ನಿರ್ಮಾಣ ಮಾಸಾಚರಣೆ, ಬದು ಬೇಸಾಯ, ರೈತರ ಕ್ರಿಯಾ ಯೋಜನೆ, ತಾಂಡಾಗಳ ಸಮೀಕ್ಷೆ, ಮಹಿಳಾ ಕಾಯಕೋತ್ಸವ ಅಭಿಯಾನ ಕಾರ್ಯಗಳನ್ನು ಹಮ್ಮಿಕೊಂಡಿದ್ದರಿಂದ ನರೇಗಾ ಯೋಜನೆಯಡಿ ಅಕುಶಲ ಕೂಲಿ ಕಾರ್ಮಿಕರು ಪ್ರಯೋಜನ ಪಡೆದುಕೊಂಡಿದ್ದಾರೆ.
ಕೃಷಿ ಆಧಾರಿತ ಕಾಮಗಾರಿಗಳಿಗೂ ಅವಕಾಶಃ
ಸಣ್ಣ ಮತ್ತು ಅತೀ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬದು ನಿರ್ಮಾಣ, ಬೋರ್‍ವೆಲ್ ಮರುಪೂರಣ, ಕೃಷಿ ಹೊಂಡ, ಅಜೋಲಾ ತೊಟ್ಟಿ, ಎರೆಹುಳು ತೊಟ್ಟಿ, ಸಾವಯವ ಗೊಬ್ಬರದ ತೊಟ್ಟಿ, ದನದ ಕೊಟ್ಟಿಗೆ, ಹಂದಿ ಶೆಡ್, ಕೋಳಿ ಶೆಡ್ ಹಾಗೂ ರೇಷ್ಮೆ ಕೃಷಿ, ತೋಟಗಾರಿಕೆ, ಅರಣ್ಯ ಇಲಾಖೆಗಳಿಂದ ಹಲವಾರು ಕೃಷಿ ಆಧಾರಿತ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಕೆಲಸ ಮಾಡುವ ಕುಟುಂಬ ಸದಸ್ಯರ ಖಾತೆಗೆ ಗರಿಷ್ಠ 100 ದಿನಗಳವರೆಗೆ ಹಣವನ್ನು ಪಾವತಿ ಮಾಡಲಾಗುವುದು. ಗೃಹ ನಿರ್ಮಾಣ ಕಾಮಗಾರಿಗಳಿಗೆ 90 ದಿನಗಳ ಕೂಲಿ ಹಣ ಪಡೆಯುವ ಅವಕಾಶವಿದೆ.
ಜಿಲ್ಲೆಯಲ್ಲಿ 48012 ಕಾಮಗಾರಿಗಳ ಅನುಷ್ಠಾನಃ
ಇದರ ಜೊತೆಗೆ ಸಮುದಾಯ ಆಧಾರಿತ ಕಾಮಗಾರಿಗಳಾದ ಕೆರೆ/ ಗೋ-ಕಟ್ಟೆ, ಹೂಳೆತ್ತುವುದು, ಆಟದ ಮೈದಾನ, ರೈತರ ಕಣ, ಮಲ್ಟಿ ಆರ್ಚ್ ಚೆಕ್ ಡ್ಯಾಂ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ಗ್ರಾಮೀಣ ಉದ್ಯಾನವನ, ಗ್ರಾಮೀಣ ಗೋದಾಮುಗಳಂತಹ ಸಮುದಾಯ ಆಧಾರಿತ ಕಾಮಗಾರಿಗಳು ಅನುಷ್ಟಾನದಲ್ಲಿದ್ದು, ಜಿಲ್ಲೆಯಾದ್ಯಂತ ಈ ಆರ್ಥಿಕ ವರ್ಷದಲ್ಲಿ ನರೇಗಾ ಯೋಜನೆಯಡಿ ಒಟ್ಟು 48012 ಕಾಮಗಾರಿಗಳು ಅನುಷ್ಟಾನಗೊಂಡಿವೆ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಂಗಾಧರಸ್ವಾಮಿ ತಿಳಿಸಿದ್ದಾರೆ.