ದೆಹಲಿ: 

      ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಭಾರತದ ಬಾಕ್ಸಿಂಗ್‌ ತಾರೆ ಎಂ.ಸಿ. ಮೇರಿ ಕೋಮ್‌ ದಾಖಲೆಯ ಆರನೇಯ ಬಾರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

      ಇಂದು ನಡೆದ 48 ಕೆಜಿ ಲೈಟ್‌ ಫ್ಲೈವೇಟ್‌ ವಿಭಾಗದ ಫೈನಲ್‌ ಹಣಾಹಣಿಯಲ್ಲಿ ಉಕ್ರೇನ್‌ನ ಎಚ್ ಓಕೋಟೊ ವಿರುದ್ಧ 5-0 ಅಂತರದ ಗೆಲುವು ಸಾಧಿಸುವ ಮೂಲಕ, ಆರು ಬಾರಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದ ವಿಶ್ವದ ಮೊದಲ ಬಾಕ್ಸಿಂಗ್ ತಾರೆ ಎಂಬ ಗೌರವಕ್ಕೆ ಮೇರಿ ಕೋಮ್ ಪಾತ್ರವಾಗಿದ್ದಾರೆ.

       ಮೇರಿ ಕೋಮ್ ಈ ಹಿಂದೆ ಐದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿ ಪದಕದೊಡನೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಆಗಿ ಮಿಂಚಿದ್ದರು. ಮೇರಿ ಕೋಮ್‌ 2010ರಲ್ಲಿ ಕೊನೆಯದಾಗಿ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್ ನಲ್ಲಿ ಚಿನ್ನ ಗೆದ್ದಿದ್ದರು.

(Visited 16 times, 1 visits today)